ಡೀನ್ ಎಲ್ಗರ್‌ಗೆ ಟೀಂ ಇಂಡಿಯಾ ಅವಿಸ್ಮರಣೀಯ ಬೀಳ್ಕೊಡುಗೆ..!

Published : Jan 05, 2024, 11:58 AM ISTUpdated : Jan 05, 2024, 12:35 PM IST

ಕೇಪ್‌ಟೌನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು, ಹರಿಣಗಳ ಪಡೆಯ ಆರಂಭಿಕ ಬ್ಯಾಟರ್ ಡೀನ್ ಎಲ್ಗರ್ ಪಾಲಿನ ಕೊನೆಯ ಟೆಸ್ಟ್ ಪಂದ್ಯ ಎನಿಸಿಕೊಂಡಿತು. ವಿದಾಯದ ಪಂದ್ಯವಾಡಿದ ಎಲ್ಗರ್‌ಗೆ ಟೀಂ ಇಂಡಿಯಾ ಅವಿಸ್ಮರಣೀಯ ಬೀಳ್ಕೊಡುಗೆ ನೀಡಿತು.

PREV
17
ಡೀನ್ ಎಲ್ಗರ್‌ಗೆ ಟೀಂ ಇಂಡಿಯಾ ಅವಿಸ್ಮರಣೀಯ ಬೀಳ್ಕೊಡುಗೆ..!

ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಡೀನ್ ಎಲ್ಗರ್ ಕೇಪ್‌ಟೌನ್‌ನಲ್ಲಿ ಭಾರತ ಎದುರು ತಮ್ಮ ಪಾಲಿನ ಕಟ್ಟಕಡೆಯ ಟೆಸ್ಟ್‌ ಪಂದ್ಯವನ್ನಾಡಿದರು. ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಎಲ್ಗರ್ ಹಲವು ಅವಿಸ್ಮರಣೀಯ ಇನಿಂಗ್ಸ್‌ಗಳನ್ನಾಡಿದ್ದಾರೆ.

27

ಇನ್ನು ವಿದಾಯದ ಪಂದ್ಯವನ್ನಾಡಿದ ಡೀನ್‌ ಎಲ್ಗರ್‌ಗೆ ಭಾರತೀಯ ಕ್ರಿಕೆಟ್ ತಂಡವು ಪಂದ್ಯ ಮುಕ್ತಾಯದ ಬಳಿಕ ಅವಿಸ್ಮರಣೀಯ ಗೌರವದ ವಿದಾಯ ನೀಡುವಲ್ಲಿ ಯಶಸ್ವಿಯಾಯಿತು.
 

37

ಹೌದು, ಭಾರತ ತಂಡದ ಆಟಗಾರರು, ಟೀಂ ಇಂಡಿಯಾ ಟೆಸ್ಟ್‌ ಜೆರ್ಸಿಯೊಂದರ ಮೇಲೆ ಎಲ್ಲಾ ಆಟಗಾರರು ಆಟೋಗ್ರಾಫ್ ಹಾಕಿರುವ ಜೆರ್ಸಿಯನ್ನು ದಕ್ಷಿಣ ಆಫ್ರಿಕಾ ನಾಯಕ ಎಲ್ಗರ್‌ಗೆ ಗಿಫ್ಟ್ ನೀಡಿದ್ದಾರೆ.
 

47

ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ವಿದಾಯ ಪಂದ್ಯವಾಡಿದ ಡೀನ್ ಎಲ್ಗರ್ ಜತೆ ದೀರ್ಘಕಾಲ ಮಾತುಕತೆ ನಡೆಸಿದ್ದು ಸಾಕಷ್ಟು ಗಮನ ಸೆಳೆಯಿತು.

57

ಇನ್ನು ಇದಕ್ಕೂ ಮೊದಲು ಮೊದಲ ದಿನದಾಟದ ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್‌ನಲ್ಲಿ ಡೀನ್ ಎಲ್ಗರ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ವಾಪಾಸ್ಸಾಗುವ ವೇಳೆಯಲ್ಲೂ ಅವರಿಗೆ ಕೊಹ್ಲಿ ಅಪ್ಪುಗೆಯ ವಿದಾಯ ಹೇಳಿದ್ದರು.

67

ಸೆಂಚೂರಿಯನ್‌ನಲ್ಲಿ ಭಾರತ ಎದುರು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ಆಕರ್ಷಕ 185 ರನ್ ಸಿಡಿಸಿದ್ದರು. ಒಟ್ಟಾರೆ ಎರಡು ಪಂದ್ಯಗಳಿಂದ ಎಲ್ಗರ್ 201 ರನ್ ಬಾರಿಸಿ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. 

77

ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಡೀನ್ ಎಲ್ಗರ್ ತಮ್ಮ ವಿದಾಯದ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಜತೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories