‌ಅಂಬಾನಿ ಫಂಕ್ಷನ್‌ಗೂ ಹೋಗದ Virat Kohli ಆ ಪವಾಡದಿಂದಲೇ ಪ್ರೇಮಾನಂದ್ ಗುರೂಜಿ ಬಳಿ ಪದೇ ಪದೇ ಹೋಗೋದು!

Published : Jun 02, 2026, 03:11 PM IST

Virat Kohli Anushka Sharma visit Premanand Ji Maharaj: ವೃಂದಾವನದ ಶ್ರೀ ಹಿತ ರಾಧಾ ಕೇಳಿ ಕುಂಜ ಆಶ್ರಮದ ಪ್ರಸಿದ್ಧ ಸಂತ, ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ್ ಮಹಾರಾಜ್ ಅವರು ಯಾವುದೇ ತಂತ್ರ-ಮಂತ್ರ ಅಥವಾ ಮ್ಯಾಜಿಕ್ ಮಾಡೋದಿಲ್ಲ, ಮುಂದೆ ಆಗೋದನ್ನು ಕೂಡ ಹೇಳೋದಿಲ್ಲ. ಅವರು ಜೀವಂತ ಪವಾಡ.

PREV
16
ಎರಡೂ ಕಿಡ್ನಿಗಳಿಲ್ಲ

ಈ ಮಹಾರಾಜ್‌ಗೆ ಎರಡೂ ಕಿಡ್ನಿಗಳಿಲ್ಲ. 15 ವರ್ಷದ ಹಿಂದೆ ಕಿಡ್ನಿ ಫೇಲ್‌ ಆಗಿತ್ತು. ಎರಡೂ ಕಿಡ್ನಿ ಇಲ್ಲದೆ ಹೇಗೆ ಬದುಕಿದ್ದಾರೆ ಎನ್ನೋದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಪ್ರತಿ ದಿನ ಮುಂಜಾನೆ 2 ಗಂಟೆಗೆ ಎದ್ದು ವೃಂದಾವನದ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕುತ್ತಾರೆ. ಭಕ್ತರಿಗೆ ದರ್ಶನ ಕೊಡೋದು, ಸತ್ಸಂಗ ಮಾಡುತ್ತ ಆಕ್ಟಿವ್‌ ಆಗಿರುತ್ತಾರೆ. ದೇವರನ್ನು ಸ್ಮರಿಸುತ್ತ, ಇಚ್ಛಾಶಕ್ತಿಯಿಂದಲೇ ಬದುಕಿದ್ದಾರೆ ಎಂದು ವೈದ್ಯರೇ ಹೇಳುತ್ತಾರೆ.

26
ರಾಧಾ ರಾಣಿ ದರ್ಶನ ಆಗಿತ್ತು

ರಾಜರು ಮೊದಲು ಶಿವನ ಆರಾಧಕರಾಗಿದ್ದರು, ಸನ್ಯಾಸ ದೀಕ್ಷೆ ಪಡೆದಿದ್ದಾರೆ. ವೃಂದಾವನಕ್ಕೆ ಹೋಗು ಎಂದು ಪ್ರೇರಣೆಯಾಗಿದ್ದರಿಂದ ಇಲ್ಲಿಗೆ ಬಂದರು. ಆರಂಭದಲ್ಲಿ ಇವರಿಗೆ ವಸತಿ, ಆಹಾರ ಕೂಡ ಇರಲಿಲ್ಲ. ಹಸಿವಾಗಿತ್ತು, ಭಗವಂತನ ದರ್ಶನ ಆಗಲಿಲ್ಲ ಎಂದು ಅವರು ಅತ್ತಿದ್ದರು. ಆಮೇಲೆ ರಾಧಾರಾಣಿಯೇ ಇವರಿಗೆ ದರ್ಶನ ಕೊಟ್ಟಿತು. ಆಮೇಲೆ ವಸತಿಗೆ, ಆಹಾರಕ್ಕೆ ಸಮಸ್ಯೆಯೇ ಆಗಲಿಲ್ಲ.

36
ಜನರ ಮನಸ್ಥಿತಿ ಬದಲಾಯ್ತು

ನಾವು ಆಶ್ರಮಕ್ಕೆ ಬರೋ ಮುನ್ನ ಮನಸ್ಸಿನಲ್ಲಿ ಏನಾದರೊಂದು ಪ್ರಶ್ನೆ ಇರುತ್ತದೆ, ಅದರ ಬಗ್ಗೆ ನಾವು ಪ್ರಶ್ನೆ ಮಾಡಿರೋದಿಲ್ಲ. ಆದರೆ ಆಮೇಲೆ ಪ್ರವಚನದಲ್ಲಿ ಗುರುಗಳು ಉತ್ತರ ಕೊಟ್ಟಿರುತ್ತಾರೆ. ಅವರಿಗೆ ಜನರ ಮನಸ್ಸನ್ನು ಓದುವ ಶಕ್ತಿಯಿದೆ.

46
ಸಾಕಷ್ಟು ಜನರ ಬದುಕು ಬದಲಾಯ್ತು

ಇವರ ಪ್ರವಚನ ಕೇಳಿ ಸಾಕಷ್ಟು ಜನರು ಬದಲಾಗಿದ್ದಾರೆ. ಮಾದಕ ದ್ರವ್ಯ ಸೇವನೆ ಬಿಟ್ಟಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿದ್ದಾರೆ, ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಪ್ರೇಮಾನಂದ್ ಮಹಾರಾಜರೇ, "ನಾನು ಯಾವುದೇ ಪವಾಡ ಮಾಡುವುದಿಲ್ಲ. ಭಗವಂತನ ನಾಮಸ್ಮರಣೆಯಲ್ಲಿ ನಿಜವಾದ ಪವಾಡ ಇದೆ" ಎಂದು ಹೇಳುತ್ತಾರೆ.

56
ವಿರಾಟ್‌ ಕೊಹ್ಲಿ ಯಾಕೆ ಹೋಗುತ್ತಾರೆ?

ವಿರಾಟ್‌ ಕೊಹ್ಲಿ ಅವರು, “ನಾನು ದೇವರನ್ನು ನಂಬಿದ ಬಳಿಕ, ಆಧ್ಯಾತ್ಮಿಕ ಹಾದಿ ಹಿಡಿದೆ. ಆ ಬಳಿಕ ನನ್ನ ಕ್ರಿಕೆಟ್‌ ಗೇಮ್‌, ನಾನು ಜೀವನವನ್ನು ನೋಡುವ ದೃಷ್ಟಿಕೋನ ಕೂಡ ಬದಲಾಯ್ತು. ಆಮೇಲೆ ಪಾಸಿಟಿವ್‌ ವೈಬ್‌ ಕೂಡ ಬಂತು” ಎಂದು ಹೇಳಿದ್ದಾರೆ. 

66
ಅಭಿಮಾನಿಗಳು ನಂಬೋದು ಏನು?

ಪ್ರೇಮಾನಂದ್ ಮಹಾರಾಜರ ದರ್ಶನದ ಬಳಿಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಬಂದರು ಎಂದು ಅವರ ಅಭಿಮಾನಿಗಳು ಕೂಡ ನಂಬುತ್ತಾರೆ. ಅಷ್ಟೇ ಅಲ್ಲದೆ ಕರಿಯರ್‌ ಕೂಡ ಚೆನ್ನಾಗಿ ಆಯ್ತು ಎನ್ನುತ್ತಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories