ಇಂಗ್ಲೆಂಡ್‌ ಟೂರ್‌ ಎಂಜಾಯ್‌ ಮಾಡುತ್ತಿರುವ ವಿರುಷ್ಕಾ ದಂಪತಿ!

Suvarna News   | Asianet News
Published : Aug 27, 2021, 06:20 PM IST

ಇಂಗ್ಲೆಂಡ್‌ ಟೂರ್‌ನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಸಹ ಇದ್ದಾರೆ. ವಿರಾಟ್‌ ತಮ್ಮ ಪ್ಯಾಮಿಲಿ ಜೊತೆ ಜೂನ್ ತಿಂಗಳಿನಿಂದ ಇಂಗ್ಲೆಂಡಿನಲ್ಲಿದ್ದಾರೆ. ಸುಮಾರು ಎರಡು ತಿಂಗಳಿಗಳಿಗಿಂತ ಹೆಚ್ಚು ಸಮಯದಿಂದ ಅಲ್ಲೇ ಇರುವ ಅನುಷ್ಕಾ ಮತ್ತು ವಿರಾಟ್‌ ಜೊತೆಯಾಗಿ ಎಂಜಾಯ್‌ ಮಾಡುತ್ತಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್‌ಡೇಟ್ ಮಾಡುತ್ತಿದ್ದಾರೆ. ವಿರುಷ್ಕಾರ ರೋಮ್ಯಾಂಟಿಕ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ 

PREV
18
ಇಂಗ್ಲೆಂಡ್‌ ಟೂರ್‌ ಎಂಜಾಯ್‌ ಮಾಡುತ್ತಿರುವ ವಿರುಷ್ಕಾ  ದಂಪತಿ!

 ಜೂನ್ 2ನೇ ತಾರಿಖಿನಂದು ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಅವರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಅನುಷ್ಕಾ ಅಲ್ಲಿಗೆ ತಲುಪಿದ ನಂತರ,  ತಮ್ಮ ಮತ್ತು ವಿರಾಟ್ ಅವರ ಹಲವು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದಾರೆ.

28

ಇತ್ತೀಚೆಗೆ, ಓಣಂ ದಿನದಂದು ಅನುಷ್ಕಾ ಮತ್ತು ವಿರಾಟ್ ಇತರ ಕ್ರಿಕೆಟಿಗರೊಂದಿಗೆ ಲೀಡ್ಸ್‌ನ ಥರ್ವಾಡು ರೆಸ್ಟೋರೆಂಟ್‌ನಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಆ ಸಮಯದ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

38

ಈ ಹಿಂದೆ, ವಿರುಷ್ಕಾ ಲಂಡನ್‌ನ ಟೆಂಡ್ರಿಲ್ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಊಟಕ್ಕೆ ಹೋಗಿದ್ದರು. ಇಂಗ್ಲೆಂಡ್‌ನಲ್ಲಿ ಇಬ್ಬರೂ ಪರಸ್ಪರ ಕ್ವಾಲಿಟಿ ಸಮಯವನ್ನು ಕಳೆದ್ದಿದ್ದಾರೆ. ವಿರಾಟ್ ಜೊತೆಗಿನ ಲಂಚ್‌ನ ಕೆಲವು ಫೋಟೋಗಳನ್ನು ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
 

48

ಇಬ್ಬರೂ ಒಟ್ಟಿಗೆ ಬ್ರೇಕ್‌ಫಾಸ್ಟ್‌ ಎಂಜಾಯ್‌ ಮಾಡುತ್ತಿರುವಾಗ ಕ್ಲಿಕ್‌ ಮಾಡಿದ ಸೆಲ್ಪೀ ಇದು.ಇಂಗ್ಲೆಂಡ್‌ಗೆ ಹೋದ ಮೇಲೆ ಇಬ್ಬರ ಸಂಬಂಧ ಇನ್ನಷ್ಟೂ ಗಟ್ಟಿಯಾಗಿದೆ ಮತ್ತು ಅನುಷ್ಕಾ ವಿರಾಟ್‌ ದಂಪತಿ ಇನ್ನೂ ಹತ್ತಿರವಾಗಿದ್ದಾರೆ ಎಂದು ಫ್ಯಾನ್ಸ್‌ ಅಭಿಪ್ರಾಯ ಪಡುತ್ತಿದ್ದಾರೆ.

58

ಜೂನ್ 28 ರಂದು ಹಂಚಿಕೊಂಡ ಫೋಟೋದಲ್ಲಿ ವಿರಾಟ್-ಅನುಷ್ಕಾ  ಚಹಾವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೋತ ನಂತರ ಭಾರತ ತಂಡದ ವಿರಾಮದ ಸಮಯದಲ್ಲಿ ಈ ಫೋಟೋ ತೆಗೆಯಲಾಗಿದೆ.

68

ಅನುಷ್ಕಾ ಕೂಡ ಟಾಕಾ-ಟಕಾ ವೀಡಿಯೋಕ್ಕಾಗಿ ವಿರಾಟ್ ಅವರ ಬ್ಯಾಟಿಂಗ್ ಚಾಲೆಂಜ್‌ ಸ್ವೀಕರಿದ್ದರು. ಈ ಮೂಲಕ ಕೊಹ್ಲಿಯ ಹಾಗೆ ಅವರು ಕೂಡ ಬ್ಯಾಟ್ ಅನ್ನು ಬ್ಯಾಲೆನ್ಸ್‌ ಮಾಡಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.


 

78

ಅನುಷ್ಕಾ ಮತ್ತು ವಿರಾಟ್ ಪ್ರಪಂಚದ ಬೆಸ್ಟ್‌ ಹಾಗೂ ಲವ್ಲೀ ಸೆಲೆಬ್ರೆಟಿ ಕಪಲ್‌ಗಳಲ್ಲಿ ಒಬ್ಬರು. ಅನುಷ್ಕಾ ಬಾಲಿವುಡ್‌ಪ್ರಸಿದ್ಧ ನಟಿಯಾಗಿದ್ದರೆ, ವಿರಾಟ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಆದರೆ ಇಬ್ಬರ ಜನಪ್ರಿಯತೆ ಎಂದಿಗೂ ಇವರ ಪ್ರೀತಿಯ ನಡುವೆ ಬರುವುದಿಲ್ಲ, ಇಬ್ಬರೂ ಪರಸ್ಪರ ಸಮಾನ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ.

88

ದಂಪತಿಗಳು 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು ಮತ್ತು ಮದುವೆಯಾದ 3 ವರ್ಷಗಳ ನಂತರ, ವಿರುಷ್ಕಾ ವಮಿಕಾ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು. ಆದರೆ ದಂಪತಿ ಇಲ್ಲಿವರೆಗೂ ಮಗುವಿನ ಮುಖದ ಫೋಟೋವನ್ನು ಹಂಚಿಕೊಂಡಿಲ್ಲ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories