10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆದ ವೈಭವ್ ಸೂರ್ಯವಂಶಿ; ಆದ್ರೆ IPS ಎಕ್ಸಾಂ ಪಾಸ್ ಮಾಡಿದ ಸೋದರ ಮಾವ!

Published : Mar 10, 2026, 04:29 PM IST

ಬಿಹಾರ: ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಭವ್ ಸೂರ್ಯವಂಶಿ ಸೋದರ ಮಾವ ಐಪಿಎಸ್ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

PREV
16
ವೈಭವ್ ಸೂರ್ಯವಂಶಿ ಸೆಂಟರ್ ಆಫ್ ಅಟ್ರ್ಯಾಕ್ಷನ್

ಕೆಲ ತಿಂಗಳ ಹಿಂದಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಬಿಹಾರ ಮೂಲದ 14 ವರ್ಷದ ವೈಭವ್ ಸೂರ್ಯವಂಶಿ, ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನ ತೋರಿ ಗಮನ ಸೆಳೆದಿದ್ದರು.

26
ಅಂಡರ್-19 ವಿಶ್ವಕಪ್‌ ಫೈನಲ್‌ನಲ್ಲಿ ವೈಭವ್ ಸ್ಪೋಟಕ ಬ್ಯಾಟಿಂಗ್

ಅದರಲ್ಲೂ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ವೈಭವ್ ಸೂರ್ಯವಂಶಿ ವಿಸ್ಪೋಟಕ 175 ರನ್ ಸಿಡಿಸುವ ಮೂಲಕ ಭಾರತ ಯುವ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

36
ಫೆಬ್ರವರಿ 17ಕ್ಕೆ ನಿಗದಿಯಾಗಿದ್ದ ಎಕ್ಸಾಂಗೆ ಚಕ್ಕರ್

ಇದಾದ ಬಳಿಕ ಫೆಬ್ರವರಿ 17ರಿಂದ ನಿಗದಿಯಾಗಿದ್ದ ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯಲು ವೈಭವ್ ಸೂರ್ಯವಂಶಿ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ವೈಭವ್ ಕೊನೆಯ ಕ್ಷಣದಲ್ಲಿ 10ನೇ ತರಗತಿ ಎಕ್ಸಾಂಗೆ ಚಕ್ಕರ್ ಹೊಡೆದಿದ್ದರು.

46
ವೈಭವ್ ಸೂರ್ಯವಂಶಿ ಮಾವನಿಂದ ಹೆಮ್ಮೆಪಡುವಂತಹ ಸಾಧನೆ

ಈ ವಿಚಾರ ಮಾಸುವ ಮುನ್ನವೇ ವೈಭವ್ ಸೂರ್ಯವಂಶಿ ಅವರ ಸೋದರ ಮಾವ ಅಭಿಷೇಕ್ ಚೌಹ್ಹಾಣ್ ಎನ್ನುವವರು 2025ರ ಯುಪಿಎಸ್‌ಸಿ ನಾಗರೀಕ ಸೇವಾ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

56
ಐಪಿಎಸ್‌ನಲ್ಲಿ ಆಲ್ ಇಂಡಿಯಾ 102ನೇ ಶ್ರೇಯಾಂಕ

ವೈಭವ್ ಸೂರ್ಯವಂಶಿಯವರ ತಾಯಿಯ ಸಹೋದರ ಅಭಿಷೇಕ್ ಚೌಹ್ಹಾಣ್, ಐಪಿಎಸ್‌ನಲ್ಲಿ ಆಲ್ ಇಂಡಿಯಾ 102ನೇ ಶ್ರೇಯಾಂಕ ಪಡೆಯುವ ಮೂಲಕ ಇಡೀ ಕುಟುಂಬ ಹಾಗೂ ಬಿಹಾರದ ಜನತೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

66
2026ರ ಐಪಿಎಲ್‌ಗೆ ರೆಡಿಯಾದ ವೈಭವ್ ಸೂರ್ಯವಂಶಿ

ಇನ್ನು ವೈಭವ್ ಸೂರ್ಯವಂಶಿ ವಿಚಾರಕ್ಕೆ ಬರುವುದಾದರೇ 10ನೇ ತರಗತಿ ಎಕ್ಸಾಂಗೆ ಚಕ್ಕರ್ ಹಾಕಿ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಿದ್ದಾರೆ. ಇದೇ ತಿಂಗಳು 28ರಿಂದ ಆರಂಭವಾಗಲಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories