Cricket Record: ವೈಭವ್ ಸೂರ್ಯವಂಶಿ ಬೆನ್ನಲ್ಲೇ ಬಿಹಾರದ ಮತ್ತೊಬ್ಬ 15 ವರ್ಷದ ಬಾಲಕಿ 300+ ರನ್ ಬಾರಿಸಿ ಸಾಧನೆ!

Published : Jun 19, 2026, 09:23 PM IST

ಬಿಹಾರದ 15 ವರ್ಷದ ಬಾಲಕಿ ಅಕ್ಷರಾ ಗುಪ್ತಾ, 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಈಕೆ, ಮನೆಯಂಗಳದಲ್ಲೇ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದು, ಭಾರತೀಯ ಮಹಿಳಾ ಕ್ರಿಕೆಟ್‌ನ ಭರವಸೆಯ ತಾರೆಯಾಗಿ ಹೊರಹೊಮ್ಮಿದ್ದಾರೆ.

PREV
15

ಇತ್ತೀಚೆಗೆ ಬಿಹಾರ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ (vaibhav suryavanshi) ಅನ್ನೋ ಹೆಸರು ಸಖತ್ ಸದ್ದು ಮಾಡಿತ್ತು. ಐಪಿಎಲ್‌ನಲ್ಲಿ ಭರ್ಜರಿ ಆಟ ಆಡಿ, ಕೇವಲ 15ನೇ ವಯಸ್ಸಿಗೆ ಭಾರತ ತಂಡಕ್ಕೆ ಆಯ್ಕೆಯಾಗಿ ಈ ಹುಡುಗ ಎಲ್ಲರ ಗಮನ ಸೆಳೆದಿದ್ದ. ಅಷ್ಟೇ ಅಲ್ಲ, ಸೂರ್ಯವಂಶಿ ಕುಟುಂಬದಿಂದಲೇ ಬಂದ ಆತನ 10 ವರ್ಷದ ತಮ್ಮ ಆಶಿರ್ವಾದ್ (Ashirvad suryavanshi) ಕೂಡ ಇತ್ತೀಚೆಗೆ ಸುದ್ದಿಯಾಗಿದ್ದನು.  ಸಮಸ್ತಿಪುರದ ತಾಜ್‌ಪುರ್ ಕ್ರಿಕೆಟ್ ಅಕಾಡೆಮಿ ಪರ ಆಡಿದ ಆಶಿರ್ವಾದ್, 87 ಎಸೆತಗಳಲ್ಲಿ 103 ರನ್ ಬಾರಿಸಿದ್ದ. 

ಇದೀಗ ಅದೇ ಬಿಹಾರದಿಂದ ಮತ್ತೊಂದು 15 ವರ್ಷದ ಹುಡುಗಿ ಅಕ್ಷರಾ ಗುಪ್ತ (Akshara Gupta) ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದ್ದಾಳೆ. ಬರೋಬ್ಬರಿ 300 ರನ್ ಬಾರಿಸಿದ ಬಾಲಕಿ ಭಾರತದ ಮತ್ತೊಬ್ಬ (Indian women Cricketer) ಭರವಸೆಯ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ.

25

ಇಡೀ ದೇಶ ಸೂರ್ಯವಂಶಿ ಕುಟುಂಬದ ಕಡೆ ನೋಡುತ್ತಿರುವಾಗಲೇ, ಬಿಹಾರದಿಂದ ಮತ್ತೊಬ್ಬ ಯುವ ಟ್ಯಾಲೆಂಟ್ ಸದ್ದಿಲ್ಲದೆ ಮೇಲೆ ಬಂದಿದೆ. ಈ ಬಾರಿ ಈ ಸಾಧನೆ ಬಂದಿರೋದು ಮಹಿಳಾ ಕ್ರಿಕೆಟ್‌ನಿಂದ. ಬಿಹಾರದ 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿಯಲ್ಲಿ, 15 ವರ್ಷದ ಹುಡುಗಿ ಅಕ್ಷರಾ ಗುಪ್ತಾ ತ್ರಿಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ರಕ್ಸೌಲ್ ತಂಡವನ್ನು ಪ್ರತಿನಿಧಿಸಿದ ಅಕ್ಷರಾ, ಕೇವಲ 126 ಎಸೆತಗಳಲ್ಲಿ ಅಜೇಯ 306 ರನ್ ಚಚ್ಚಿದ್ದಾರೆ. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 55 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು.

35

ಸೂರ್ಯವಂಶಿಯಂತಹ ಆಟಗಾರರ ಜೊತೆಗೆ, ಬಿಹಾರದಿಂದ ಮತ್ತೆ ಇಂತಹ ಯುವ ಪ್ರತಿಭೆಗಳು ಬರುತ್ತಿರುವುದು ದೇಶೀಯ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅಕ್ಷರಾ ಅವರ ಈ ಪ್ರದರ್ಶನ ಬಿಹಾರ ಮಹಿಳಾ ಕ್ರಿಕೆಟ್‌ನಲ್ಲಿ ಒಂದು ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗುತ್ತಿದೆ. ವಯೋಮಿತಿ ಟೂರ್ನಿಗಳಲ್ಲಿ ಆಕೆ ತೋರುತ್ತಿರುವ ಈ ಅದ್ಭುತ ಬೆಳವಣಿಗೆಯನ್ನು ಆಯ್ಕೆಗಾರರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

45

ಯಾರು ಈ ಅಕ್ಷರಾ ಗುಪ್ತಾ?

ಅಕ್ಷರಾ ಗುಪ್ತಾ ಬಂದಿರೋದು ತುಂಬಾನೇ ಸಾಮಾನ್ಯ ಕುಟುಂಬದಿಂದ. ಆಕೆಗೆ 8 ವರ್ಷ ಇದ್ದಾಗಲೇ ಕ್ರಿಕೆಟ್ ಆಡಲು ಶುರುಮಾಡಿದ್ರು. ಆದರೆ, ಆಕೆಯ ಪುಟ್ಟ ಊರಿನಲ್ಲಿ ಹುಡುಗಿಯರಿಗೆ ಕ್ರಿಕೆಟ್ ತಂಡವಾಗಲಿ, ಅಕಾಡೆಮಿಯಾಗಲಿ ಅಥವಾ ಸರಿಯಾದ ಕೋಚಿಂಗ್ ಸೌಲಭ್ಯವಾಗಲಿ ಇರಲಿಲ್ಲ. ತನ್ನ ಚಿಕ್ಕಪ್ಪನ ಮಾರ್ಗದರ್ಶನದಲ್ಲಿ, ಮನೆಯಂಗಳದ ಪುಟ್ಟ ಪಿಚ್‌ನಲ್ಲೇ ದಿನಕ್ಕೆ ಸುಮಾರು ಐದು ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿ ತನ್ನ ಆಟವನ್ನು ಉತ್ತಮಪಡಿಸಿಕೊಂಡಿದ್ದಾರೆ.

55

ಅಕ್ಷರಾ ಅವರ ತಂದೆ ರಾಜ್ ಕಿಶೋರ್ ಶಾ, ರಕ್ಸೌಲ್‌ನಲ್ಲಿ ಒಂದು ಚಿಕನ್ ಅಂಗಡಿ ನಡೆಸುತ್ತಿದ್ದಾರೆ. ತಾಯಿ ರೀನಾ ದೇವಿ ಗೃಹಿಣಿ. ಮಗಳ ಕ್ರಿಕೆಟ್ ಕನಸಿಗೆ ಬೆಂಬಲವಾಗಿ ನಿಲ್ಲಲು, ತಂದೆ ಮನೆಯ ತೋಟದಲ್ಲೇ ಒಂದು ಪ್ರಾಕ್ಟೀಸ್ ನೆಟ್ ಹಾಕಿಸಿಕೊಟ್ಟಿದ್ದಾರೆ. ಇನ್ನು ತಾಯಿ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಒಂದು ಲೋಟ ಹಾಲು ಕೊಟ್ಟು ಮಗಳನ್ನು ರನ್ನಿಂಗ್‌ಗೆ ಕಳುಹಿಸುತ್ತಿದ್ದರು. ಆಕೆಯ ದಿನಚರಿಯಲ್ಲಿ ಶಿಸ್ತು ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದ್ದರು. ಅಕ್ಷರಾಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories