ವೈಭವ್ ಸೂರ್ಯವಂಶಿ ವಿಶ್ವದಾಖಲೆ: 'ನನ್ನ ಆ ಒಂದು ವಿಚಾರ ಜನರಿಗೆ ಇನ್ನೂ ತಿಳಿದಿಲ್ಲ' ಎಂದಿದ್ದೇಕೆ?

Published : Jun 21, 2026, 11:37 PM IST

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್ ಬಳಿಕ, ತಮ್ಮ 50-ಓವರ್‌ಗಳ ಆಟದ ಅನುಭವದ ಬಗ್ಗೆ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಏನದು? ಇಲ್ಲಿದೆ ನೋಡಿ.

PREV
15
ಚರ್ಚೆಗೆ ಕಾರಣವಾದ ವೈಭವ್ ಹೇಳಿಕೆ

ಭಾರತೀಯ ಕ್ರಿಕೆಟ್‌ನ ಇತ್ತೀಚಿನ ಸೆನ್ಸೇಶನ್, 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಶ್ರೀಲಂಕಾ ಎ ವಿರುದ್ಧ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿ ವಿಶ್ವದಾಖಲೆ ಬರೆದ ಬಳಿಕ ಈ ಯುವ ಬ್ಯಾಟರ್ ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

25
ದಾಖಲೆಗಳ ಸುರಿಮಳೆ:

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಲಿಸ್ಟ್ ಎ (List A) ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನ ನೆರವಿನಿಂದ ಇಂಡಿಯಾ ಎ ತಂಡವು 66 ರನ್‌ಗಳ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ಅವರು, 'ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ' ಎಂದು ಹೇಳುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾರೆ.

35
'ಜನರಿಗೆ ಇದು ತಿಳಿದಿಲ್ಲ ಅನಿಸುತ್ತದೆ':

ಹೆಚ್ಚಾಗಿ ಟಿ20 ಕ್ರಿಕೆಟ್‌ನ ಸ್ಫೋಟಕ ಆಟಗಾರ ಎಂದೇ ಗುರುತಿಸಿಕೊಂಡಿರುವ ವೈಭವ್, ತಮ್ಮ ಫಿಫ್ಟಿ ಓವರ್ (50-over) ಕ್ರಿಕೆಟ್ ಅನುಭವದ ಬಗ್ಗೆ ಮಾತನಾಡುತ್ತಾ, 'ನಾನು ಸಾಕಷ್ಟು 50 ಓವರ್‌ಗಳ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೇನೆ. ಆದರೆ ಈ ವಿಷಯ ಜನರಿಗೆ ತಿಳಿದಿದೆಯೋ ಇಲ್ಲವೋ ನನಗೆ ಖಚಿತವಿಲ್ಲ. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಒಂದು ಸವಾಲಾಗಿತ್ತು ಮತ್ತು ಆ ಸವಾಲನ್ನು ಸ್ವೀಕರಿಸಲು ನನಗೆ ಖುಷಿಯಾಯಿತು' ಎಂದು ಹೇಳಿದ್ದಾರೆ.

45
ಹಿಂದಿನ ವಿವಾದ ಮತ್ತು ಕಮ್‌ಬ್ಯಾಕ್:

ಸರಣಿಯ ಆರಂಭಿಕ ಪಂದ್ಯಗಳಲ್ಲಿ ವೈಭವ್ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು. ಅಲ್ಲದೆ, ಹಿಂದಿನ ಪಂದ್ಯವೊಂದರಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಸುವ ಮೂಲಕ ಸುದ್ದಿಯಾಗಿದ್ದರು. ಅವರ ಬ್ಯಾಟಿಂಗ್ ಶೈಲಿ ಮತ್ತು ವರ್ತನೆಯ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೆ ಫೈನಲ್‌ನಲ್ಲಿ ಎಲ್ಲದಕ್ಕೂ ಬ್ಯಾಟ್ ಮೂಲಕವೇ ಉತ್ತರಿಸಿದ ಅವರು, 'ನಾನು ಏನನ್ನೂ ಯೋಚಿಸಿರಲಿಲ್ಲ. ಕೋಚ್‌ಗಳ ಜೊತೆ ಚರ್ಚಿಸಿ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡೆ. ಆರಂಭಿಕ 10 ಓವರ್‌ಗಳಲ್ಲಿ ನನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಬಯಸಿದ್ದೆ' ಎಂದಿದ್ದಾರೆ.

55
ನಾಯಕ ತಿಲಕ್ ವರ್ಮಾ ಶ್ಲಾಘನೆ:

ಇಂಡಿಯಾ ಎ ತಂಡದ ನಾಯಕ ತಿಲಕ್ ವರ್ಮಾ ತಂಡದ ಪ್ರದರ್ಶನವನ್ನು ಕೊಂಡಾಡಿದ್ದಾರೆ. 'ಸತತ ಪಂದ್ಯಗಳನ್ನು ಸೋತ ನಂತರ ತಂಡವು ಚೇತರಿಸಿಕೊಂಡ ರೀತಿ ಅದ್ಭುತವಾಗಿತ್ತು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು' ಎಂದು ಹೇಳಿದ್ದಾರೆ. ಸೂರ್ಯವಂಶಿ ಅವರ 94 ರನ್‌ಗಳ ನೆರವಿನಿಂದ ಭಾರತ ಮೊದಲ 9 ಓವರ್‌ಗಳಲ್ಲೇ 132 ರನ್ ಕಲೆಹಾಕಿತ್ತು. ಅಂತಿಮವಾಗಿ ಭಾರತ 377 ರನ್‌ಗಳ ಬೃಹತ್ ಮೊತ್ತ ಪೇರಿಸಿದರೆ, ಶ್ರೀಲಂಕಾ 311 ರನ್‌ಗಳಿಗೆ ಆಲೌಟ್ ಆಯಿತು.

ಈ ವರ್ಷದ ಆರಂಭದಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 175 ರನ್ ಸಿಡಿಸಿದ್ದ ವೈಭವ್, ಇತ್ತೀಚಿನ ಐಪಿಎಲ್ ಹರಾಜಿನಲ್ಲೂ ಸುದ್ದಿಯಾಗಿದ್ದರು. ಈಗ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದಾಖಲೆ ಬರೆಯುವ ಮೂಲಕ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಎಂಬ ಭರವಸೆ ಮೂಡಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories