ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯ ಮಾತ್ರ ಬಾಕಿ ಇದೆ. ಟೂರ್ನಿಯ ಟಾಪ್ 10 ರನ್ ಗಳಿಸಿದವರ ಪಟ್ಟಿಯಲ್ಲಿ ಕೇವಲ ಒಬ್ಬನೇ ಭಾರತೀಯ ಆಟಗಾರನಿದ್ದಾನೆ, ಅದು ವೈಭವ್ ಸೂರ್ಯವಂಶಿ. ಅಫ್ಘಾನಿಸ್ತಾನದ ಶಿನೋಜಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ...
ಅಫ್ಘಾನಿಸ್ತಾನದ ಫೈಸಲ್ ಖಾನ್, 6 ಪಂದ್ಯಗಳಿಂದ 435 ರನ್ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 2 ಶತಕ ಮತ್ತು 2 ಅರ್ಧಶತಕ ಬಾರಿಸಿದ್ದಾರೆ. 163 ರನ್ ಇವರ ಗರಿಷ್ಠ ಸ್ಕೋರ್ ಆಗಿದ್ದು, 87.00ರ ಸರಾಸರಿ ಹೊಂದಿದ್ದಾರೆ.
27
ಬೆನ್ ಮೇಯಸ್ (ಇಂಗ್ಲೆಂಡ್)
ಇಂಗ್ಲೆಂಡ್‌ನ ಬೆನ್ ಮೇಯಸ್ 6 ಪಂದ್ಯಗಳಿಂದ 399 ರನ್ ಗಳಿಸಿದ್ದಾರೆ. ಇವರು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. 191 ರನ್ ಇವರ ಗರಿಷ್ಠ ಸ್ಕೋರ್. 79.80ರ ಸರಾಸರಿ ಹೊಂದಿರುವ ಇವರಿಗೆ ಫೈನಲ್ ಪಂದ್ಯ ಆಡಲು ಬಾಕಿ ಇದೆ.
37
ವಿರಾನ್ ಚಾಮುಡಿತ (ಶ್ರೀಲಂಕಾ)
ಶ್ರೀಲಂಕಾದ ವಿರಾನ್ ಚಾಮುಡಿತ 5 ಪಂದ್ಯಗಳಿಂದ 310 ರನ್ ಕಲೆಹಾಕಿದ್ದಾರೆ. ಇವರು ಎರಡು ಶತಕಗಳನ್ನು ಬಾರಿಸಿದ್ದು, 192 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. 62.00ರ ಸರಾಸರಿ ಮತ್ತು 122.04ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇಂಗ್ಲೆಂಡ್‌ನ ಥಾಮಸ್ ರೀವ್ 6 ಪಂದ್ಯಗಳಿಂದ 299 ರನ್ ಗಳಿಸಿದ್ದಾರೆ. ಇವರು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 110 ರನ್ ಇವರ ಗರಿಷ್ಠ ಸ್ಕೋರ್. ಇವರಿಗೆ ಭಾರತದ ವಿರುದ್ಧ ಇನ್ನೊಂದು ಪಂದ್ಯ ಬಾಕಿ ಇದೆ.
57
ಜೇಸನ್ ರೌಲ್ಸ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾದ ಜೇಸನ್ ರೌಲ್ಸ್ 5 ಪಂದ್ಯಗಳಿಂದ 280 ರನ್ ಗಳಿಸಿದ್ದಾರೆ. ಇವರು ತಲಾ ಒಂದು ಶತಕ ಮತ್ತು ಅರ್ಧಶತಕ ಬಾರಿಸಿದ್ದಾರೆ. ಅಜೇಯ 125 ರನ್ ಇವರ ಗರಿಷ್ಠ ಸ್ಕೋರ್ ಆಗಿದ್ದು, 70.00ರ ಸರಾಸರಿ ಹೊಂದಿದ್ದಾರೆ.
67
ನಿತೇಶ್ ಸ್ಯಾಮುಯೆಲ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾ ಪರ ಆಡುವ ನಿತೇಶ್ ಸ್ಯಾಮುಯೆಲ್ 6 ಪಂದ್ಯಗಳಿಂದ 275 ರನ್ ಗಳಿಸಿದ್ದಾರೆ. ಇವರು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಜೇಯ 77 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ.
77
ವೈಭವ್ ಸೂರ್ಯವಂಶಿ (ಭಾರತ)
ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ವೈಭವ್. ಇವರು 6 ಪಂದ್ಯಗಳಿಂದ 264 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. 72 ರನ್ ಇವರ ಗರಿಷ್ಠ ಸ್ಕೋರ್ ಆಗಿದ್ದು, 44.00ರ ಸರಾಸರಿ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.