62 ಲಕ್ಷ ರೂ ಕಾರು ಖರೀದಿಸಿದ ಟೀಂ ಇಂಡಿಯಾ ವೇಗಿಗೆ ಸಂಕಷ್ಟ, ಹೊಸ ವಾಹನಕ್ಕೆ ಬಂತು ನೋಟಿಸ್

Published : Aug 11, 2025, 10:54 PM IST

ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ವೇಗಿ ಆಕಾಶ್ ದೀಪ್ ತವರಿಗೆ ಆಗಮಿಸಿದ ಬೆನ್ನಲ್ಲೇ 62 ಲಕ್ಷ ರೂಪಾಯಿ ಕಾರು ಖರೀದಿಸಿ ಮನೆಗೆ ತಂದಿದ್ದಾರೆ. ಆದರೆ ಕಾರು ಮನೆಗೆ ಬಂದೆ ಕೆಲವೇ ದಿನದಲ್ಲಿ ಸಾರಿಗೆ ಇಲಾಖೆಯಿಂದ ನೋಟಿಸ್ ಕೂಡ ಬಂದಿದ್ದು, ಸಂಕಷ್ಟ ಎದುರಿಸುವಂತಾಗಿದೆ.

PREV
16

ಟೀಂ ಇಂಡಿಯಾ ಕ್ರಿಕೆಟಿಗ ಆಕಾಶ್ ದೀಪ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವೇಗದ ದಾಳಿ ಸಂಘಟಿಸಿ ಟೀಂ ಇಂಡಿಯಾಗೆ ಭರ್ಜರಿ ಮೇಲೈಗು ತಂದುಕೊಟ್ಟ ಅಕಾಶ್ ದೀಪ್ ಸರಣಿ ಮುಗಿಸಿ ತವರಿಗೆ ಬಂದ ಬೆನ್ನಲ್ಲೇ ತಮ್ಮ ಡ್ರೀಮ್ ಕಾರು ಟೊಯೋಟಾ ಫಾರ್ಚುನರ್ ಖರೀದಿಸಿದ್ದರು. ಇತ್ತೀಚೆಗೆ ಈ ಕಾರಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ ಕಾರು ಖರೀದಿಸಿದ ಕೆಲವೇ ದಿನಕ್ಕೆ ಸಂಕಷ್ಟ ಎದುರಾಗಿದೆ.

26

ಅಕಾಶ್ ದೀಪ್ ತಮ್ಮ ಕುಟುಂಬ ಸಮೇತ ತೆರಳಿ ಹೊಸ ಟೋಯೋಟಾ ಫಾರ್ಚುನರ್ ಕಾರು ಡೆಲಿವರಿ ಪಡೆದುಕೊಂಡಿದ್ದರು. ಬಳಿಕ ಎಲ್ಲರೂ ಕಾರಿನಲ್ಲಿ ಕುಳಿತು ಮನೆಗೆ ಮರಳಿದ್ದರು. ಹೊಸ ಕಾರಿನೊಂದಿಗೆ ಅಕಾಶ್ ದೀಪ್ ಹಾಗೂ ಕುಟುಂಬ ಮನೆಗೆ ಮರಳಿತ್ತು. ಈ ಸಂಭ್ರಮದಲ್ಲಿರುವಾಗಲೇ ಸಾರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ಕಾರಣ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್.

36

ಅಕಾಶ್ ದೀಪ್ ಖರೀದಿಸಿದ 62 ಲಕ್ಷ ರೂಪಾಯಿ ಬೆಲೆಯ ಕಾರಿನ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸದೆ ಕಾರು ಡೆಲಿವರಿ ನೀಡಲಾಗಿದೆ ಎಂದು ಉತ್ತರ ಪ್ರದೇಶ ಸಾರಿಗೆ ಇಲಾಖೆ ನೋಟಿಸ್ ನೀಡಿದೆ. ಯಾವುದೇ ನಂಬರ್ ಪ್ಲೇಟ್ ಇಲ್ಲದೆ ಕಾರು ವಿತರಣೆ ಮಾಡಲಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಸಿದೆ ಕಾರು ರಸ್ತೆ ಮೇಲೆ ಓಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

46

ಕಾರು ಖರೀದಿಸಿದ ಡೀಲರ್‌ಗೂ ನೋಟಿಸ್ ನೀಡಲಾಗಿದೆ. ಹೊಸ ಕಾರು ಡೆಲಿವರಿ ಮಾಡುವಾಗ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆದರೆ ಇಲ್ಲಿ ಡೀಲರ್ ಆತುರದಲ್ಲೇ ಕಾರು ನೀಡಿದ್ದಾರೆ. ಜೊತೆಗೆ ಟಂಪರರಿ ನಂಬರ್ ಪ್ಲೇಟ್ ಕೂಡ ನೀಡಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ನೋಟಿಸ್ ನೀಡಲಾಗಿದೆ. ಡೀಲರ್ ಪರವಾನಗೆಯೂ ಒಂದು ತಿಂಗಳ ವರೆಗೆ ಅಮಾನತ್ತಾಗುವ ಸಾಧ್ಯತೆ ಇದೆ.

56

ಅಕಾಶ್ ದೀಪ್ ಹಾಗೂ ಕಾರು ಡೀಲರ್‌ಗೆ 14 ದಿನಗಳ ಸಮಯ ನೀಡಲಾಗಿದೆ. ಇದರೊಳಗೆ ಕಾರಣ ಹಾಗೂ ಉತ್ತರ ನೀಡುವಂತೆ ಸೂಚಿಸಲಾಗಿದೆ. ಇಬ್ಬರ ಉತ್ತರದ ಬಳಿಕ ಸಾರಿಗೆ ಇಲಾಖೆ ದಂಡ ಅಥವಾ ಇತರ ಕ್ರಮಗಳ ಬಗ್ಗೆ ಪ್ರಕಟಿಸಲಿದೆ. ತನ್ನ ಡ್ರೀಮ್ ಕಾರು ಎಂದು ಖುಷಿಪಟ್ಟಿದ್ದ ಅಕಾಶ್ ದೀಪ್ ಇದೀಗ ಕಾರಿನಿಂದ ತಲೆನೋವು ಶುರುವಾಗಿದೆ.

66

ಇಂಗ್ಲೆಂಡ್ ಸರಣಿಯಲ್ಲಿ 3 ಟೆಸ್ಟ್ ಪಂದ್ಯಗಳಿಂದ 13 ವಿಕೆಟ್ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದ್ದ ಅಕಾಶ್ ದೀಪ್, ತವರಿಗೆ ಆಗಮಿಸಿದ ಬೆನ್ನಲ್ಲೇ ಕಾರು ಖರೀದಿಸಿ ಸಂಭ್ರಮಿಸಿದ್ದರು. ಇದು ತನ್ನ ಡ್ರೀಮ್ ಕಾರು, ಕೀ ಪಡೆದುಕೊಂಡಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಇದೀಗ ಹೆಚ್ಎಸ್ಆರ್‌ಪಿ ನಂಬರ್ ಹಾಗೂ ರಿಜಿಸ್ಟ್ರೇಶನ್ ಸಮಸ್ಯೆ ತಲೆದೋರಿದೆ.

Read more Photos on
click me!

Recommended Stories