ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಇದೀಗ ಮತ್ತೊಮ್ಮೆ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ. ಧವನ್ ಮದುವೆಯಾಗುತ್ತಿರುವುದು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು. ಅಷ್ಟಕ್ಕೂ ಈಕೆ ಯಾರು? ಹಿನ್ನೆಲೆ ಏನು? ಯಾವ ದೇಶದವರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಧವನ್ ಇದೀಗ ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಮದುವೆಯಾಗಲು ಮುಂದಾಗಿದ್ದಾರೆ. ಇದು ಅವರ ಅಭಿಮಾನಿಗಳ ಕಿವಿನೆಟ್ಟಗಾಗುವಂತೆ ಮಾಡಿದೆ.
211
ಸೋಫಿ ಶೈನ್ ಜತೆ ಧವನ್ ಮದುವೆ
ಹೌದು, ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಐರೀಶ್ ಮೂಲದ ಮೋಹಕ ಸುಂದರಿ ಸೋಫಿ ಶೈನ್ ಅವರನ್ನು ಶಿಖರ್ ಧವನ್ ಮುಂಬರುವ ಫೆಬ್ರವರಿ ದ್ವಿತಿಯಾರ್ಧದ ವೇಳೆಯಲ್ಲಿ ಡೆಲ್ಲಿಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
311
ಮದುವೆಯಲ್ಲಿ ಹಲವು ಸೆಲಿಬ್ರಿಟಿಗಳು ಭಾಗಿ
ಈ ಮದುವೆ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು ಹಾಗೂ ಬಾಲಿವುಡ್‌ನ ಹಲವು ಸೆಲಿಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದ್ದು, ಮದುವೆಗೆ ಈಗಿನಿಂದಲೇ ಎಲ್ಲಾ ಸಿದ್ದತೆಗಳು ಆರಂಭವಾಗಿವೆ ಎಂದು ವರದಿಯಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿ ವೇಳೆ ಒಟ್ಟಿಗೆ ಕಾಣಿಸಿಕೊಂಡ ಜೋಡಿ
ಸೋಫಿ ಶೈನ್ ಮೊದಲು ಶಿಖರ್ ಧವನ್ ಜತೆ ಒಟ್ಟಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, 2025ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಯಲ್ಲಿ. ಇದಾದ ಬಳಿಕ ಕಳೆದ ಮೇ ನಲ್ಲಿ ಈ ಇಬ್ಬರು ರಿಲೇಷನ್‌ಶಿಪ್‌ನಲ್ಲಿರುವುದನ್ನು ಖಚಿತಪಡಿಸಿದ್ದರು.
511
ಯಾರು ಈ ಸೋಫಿ ಶೈನ್?
ಹಾಗಿದ್ದರೇ ಈ ಸೋಫಿ ಶೈನ್ ಯಾರು? ಆಕೆಯ ಹಿನ್ನೆಲೆ ಏನು? ಈಗ ಆಕೆ ಎಲ್ಲಿ ವಾಸವಾಗಿರುವುದು ಎನ್ನುವ ಕುತೂಹಲ ನಿಮಗೂ ಕಾಡುತ್ತಿರಬಹುದು. ಬನ್ನಿ ನಾವಿಂದು ಆ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯುತ್ತಿದ್ದೇವೆ ನೋಡಿ.
611
ಸೋಫಿ ಐರ್ಲೆಂಡ್ ಪ್ರಜೆ
ಐರ್ಲೆಂಡ್ ಪ್ರಜೆಯಾಗಿರುವ ಸೋಫಿ ಶೈನ್‌ಗೆ ಈಗ 35 ವರ್ಷ. ಸೋಫಿ ಸದ್ಯ ಯುಎಇನ ಅಬುಧಾಬಿಯಲ್ಲಿ ವಾಸವಾಗಿದ್ದಾರೆ.
711
ಪ್ರತಿಷ್ಠಿತ ಕಂಪನಿಯಲ್ಲಿ ವೈಸ್ ಪ್ರಸಿಡೆಂಡ್
ಸೋಫಿ ಶೈನ್ ನಾರ್ಥನ್ ಟ್ರಸ್ಟ್ ಕಾರ್ಪೊರೇಷನ್ ಎನ್ನುವ ಪ್ರತಿಷ್ಠಿತ ಫೈನಾನ್‌ಶಿಯಲ್ ಸರ್ವೀಸ್ ಕಂಪನಿಯಲ್ಲಿ ಪ್ರಾಡಕ್ಟ್ ಕನ್ಸಲ್ಟೇಷನ್‌ನ ವೈಸ್ ಪ್ರಸಿಡೆಂಡ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
811
ಮಾರ್ಕೆಟಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ
ಐರ್ಲೆಂಡ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸೋಫಿ ಶೈನ್, ಲಿಮಿರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮಾರ್ಕೆಟಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಪೂರೈಸಿದ್ದಾರೆ.
911
ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಸೋಫಿ
ಸೋಫಿ ಶೈನ್‌ಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 3,40,000 ಫಾಲೋವರ್ಸ್ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸೋಫಿ ಈಗಾಗಲೇ ಶಿಖರ್ ಧವನ್ ಜತೆ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1011
ಧವನ್ ಮೊದಲ ಪತ್ನಿ ಆಯೆಷಾ ಮುಖರ್ಜಿ
ಶಿಖರ್ ಧವನ್ ಈ ಮೊದಲು 2012ರಲ್ಲಿ ಆಸ್ಟ್ರೇಲಿಯಾ ಮೂಲದ ಆಯೆಷಾ ಮುಖರ್ಜಿ ಎನ್ನುವವರನ್ನು ಮದುವೆಯಾಗಿದ್ದರು. ಅವರಿಗೆ ಝೋರಾವರ್ ಎನ್ನುವ ಮಗನಿದ್ದಾನೆ.
1111
2023ರಲ್ಲಿ ಧವನ್-ಆಯೆಷಾ ಡಿವೊರ್ಸ್
ಕೌಟುಂಬಿಕ ಜೀವನದಲ್ಲಿ ಬಿರುಕುಬಿಟ್ಟ ಹಿನ್ನೆಲೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಈ ಜೋಡಿ ಪರಸ್ಪರ ಸಮ್ಮತಿ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.