1. ಮೊದಲ ಇನ್ನಿಂಗ್ಸಲ್ಲಿ ಆಸೀಸ್ 76ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಸ್ಪ್ರೇಲಿಯಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವ ಅವಕಾಶವನ್ನು ಭಾರತ ಕೈಚೆಲ್ಲಿತು. ಸ್ಮಿತ್-ಹೆಡ್ 295 ರನ್ ಜೊತೆಯಾಟವಾಡಿ ಆಸೀಸ್ ಬೃಹತ್ ಮೊತ್ತಕ್ಕೆ ಕಾರಣರಾದರು
2. ಭಾರತದ ಅಗ್ರ ಬ್ಯಾಟರ್‌ಗಳು ಎರಡೂ ಇನ್ನಿಂಗ್ಸಲ್ಲಿ ವೈಫಲ್ಯ ಕಂಡರು. ಪಂದ್ಯದಲ್ಲಿ ಗಿಲ್ ಒಟ್ಟು 31, ಪೂಜಾರ ಒಟ್ಟು 41 ರನ್ ಗಳಿಸಲಷ್ಟೇ ಶಕ್ತರಾದರು. ರೋಹಿತ್, ಕೊಹ್ಲಿ, ರಹಾನೆಯಿಂದ ದೊಡ್ಡ ಇನ್ನಿಂಗ್‌್ಸ ಮೂಡಿಬರಲಿಲ್ಲ. ಬ್ಯಾಟಿಂಗ್‌ನಲ್ಲಿ ಭರತ್ ಆಟಕ್ಕುಂಟು ಲೆಕ್ಕಕ್ಕಿಲ್ಲವೆನಿಸಿದರು.
3. ಎರಡೂ ಇನ್ನಿಂಗ್ಸ್‌ಗಳಲ್ಲಿ ಆಸ್ಪ್ರೇಲಿಯಾದ ಕೆಳ ಕ್ರಮಾಂಕ ಭಾರತವನ್ನು ಕಾಡಿತು. ಮೊದಲ ಇನ್ನಿಂಗ್ಸಲ್ಲಿ ಕೊನೆಯ 4 ವಿಕೆಟ್‌ಗೆ ಆಸೀಸ್ 82 ರನ್ ಸೇರಿಸಿತು. ಅಲೆಕ್ಸ್ ಕೇರ್ರಿ 48 ರನ್ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ 7ನೇ ವಿಕೆಟ್‌ಗೆ ಕೇರ್ರಿ ಹಾಗೂ ಸ್ಟಾರ್ಕ್ 93 ರನ್ ಸೇರಿಸಿದರು.
4. ಭಾರತ ವಿಶ್ವ ನಂ.1 ಬೌಲರ್ ಆರ್.ಅಶ್ವಿನ್‌ರನ್ನು ಹೊರಗಿಟ್ಟು ತಪ್ಪು ಮಾಡಿತೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ನಿರೀಕ್ಷೆಯಂತೆ ಪಿಚ್ 4ನೇ ದಿನದಿಂದ ಸ್ಪಿನ್ನರ್ಸ್ಗೆ ನೆರವು ನೀಡಿತು. 2ನೇ ಇನ್ನಿಂಗ್ಸಲ್ಲಿ ನೇಥನ್ ಲಯನ್ 4 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸಲ್ಲಿ ಎರಡೇ ಓವರ್ ಬೌಲ್ ಮಾಡಿದರೂ ಜಡೇಜಾರನ್ನು ಔಟ್ ಮಾಡಿದ್ದರು.
5. ಐಪಿಎಲ್ ಮುಗಿಯುತ್ತಿದ್ದಂತೆ ಟೆಸ್ಟ್ ಫೈನಲ್‌ಗೆ ಭಾರತ ತೆರಳಿದ್ದು, ತಂಡದ ಸಿದ್ಧತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿತು. ಅತಿಯಾದ ಟಿ20 ಕ್ರಿಕೆಟ್‌ನಿಂದಾಗಿ ಟೆಸ್ಟ್‌ಗೆ ಬೇಕಿದ್ದ ಮನಸ್ಥಿತಿ ಹಾಗೂ ತಯಾರಿಯ ಕೊರತೆ ಪಂದ್ಯದುದ್ದಕ್ಕೂ ಭಾರತೀಯರಲ್ಲಿ ಎದ್ದು ಕಾಣುತ್ತಿತ್ತು.