ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!

First Published | Nov 28, 2019, 6:52 PM IST

ಜಂಟಲ್‌ಮನ್‌ಗಳ ಕ್ರೀಡೆ ಎನಿಸಿರುವ ಕ್ರಿಕೆಟ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್, ಡೋಪಿಂಗ್ ಮುಂತಾದ ವಿಚಾರಗಳು ಆಟಗಾರರ ಪಾಲಿಗೆ ಬೆಂಬಿಡದಂತೆ ಕಾಡುತ್ತಲೇ ಇರುವುದನ್ನು ನೋಡಿದ್ದೇವೆ.

ಡೋಪಿಂಗ್ ಭೂತ ದಿಗ್ಗಜ ಆಟಗಾರರಾದ ಶೇನ್ ವಾರ್ನ್, ಶೊಯೆಬ್ ಅಖ್ತರ್ ಅವರನ್ನೂ ಬಿಟ್ಟಿಲ್ಲ. ವಾಡಾ ಆಟಗಾರರ ಮೇಲೆ ಕಣ್ಣಿಟ್ಟರೂ ಒಮ್ಮೊಮ್ಮೆ ಆಟಗಾರರು ಡೋಪಿಂಗ್ ಪರೀಕ್ಷೆ ಫೇಲ್ ಆಗಿ ನಿಷೇಧಕ್ಕೂ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಡಗ್ಸ್ ಸೇವಿಸಿ ನಿಷೇಧ ಶಿಕ್ಷೆ ಎದುರಿಸಿದ 5 ಕ್ರಿಕೆಟಿಗರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
 

1. ಶೇನ್ ವಾರ್ನ್: ಆಸ್ಟ್ರೇಲಿಯಾ
undefined
ವಿಶ್ವ ಕ್ರಿಕೆಟ್‌ನ ಮಾಂತ್ರಿಕ ಸ್ಪಿನ್ನರ್, ’ಬ್ಯಾಡ್ ಬಾಯ್’ ಖ್ಯಾತಿಯ ಶೇನ್ ವಾರ್ನ್ 2003ರ ಏಕದಿನ ವಿಶ್ವಕಪ್ ವೇಳೆ ಡ್ಯುರೇಟಿಕ್ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಮೂಲಕ 12 ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಾರ್ನ್ ಬ್ಯಾನ್ ಆಗಿದ್ದರು.
undefined

Latest Videos


2. ಶೊಯೆಬ್ ಅಖ್ತರ್: ಪಾಕಿಸ್ತಾನ
undefined
’ರಾವುಲ್‌ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಪಾಕಿಸ್ತಾನದ ಬ್ಯಾಡ್ ಬಾಯ್ 2006ರ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಅನಾಬೋಲಿಕ್ ಸ್ಟಿರಾಯ್ಡ್ ಸೇವಿಸಿ ಸಿಕ್ಕಿಬಿದ್ದಿದ್ದರು. ಇದಾದ ಬಳಿಕ ಅಖ್ತರ್ 2 ವರ್ಷ ನಿಷೇಧದ ಶಿಕ್ಷೆ ಅನುಭವಿಸಿದ್ದರು.
undefined
3. ಅಬ್ದುರ್ ರೆಹಮಾನ್: ಪಾಕಿಸ್ತಾನ
undefined
ಪಾಕಿಸ್ತಾನದ ಎಡಗೈ ಸ್ಪಿನ್ನರ್ ಅಬ್ದುರ್ ರೆಹಮಾನ್ ಒಂದು ಕಾಲದಲ್ಲಿ ಪಾಕಿಸ್ತಾನದ ಎರಡನೇ ಆಯ್ಕೆಯ ಆಟಗಾರರಾಗಿದ್ದರು. ಇಂಗ್ಲೆಂಡ್ ತಂಡದ ಪಾಲಿಗೆ ರೆಹಮಾನ್ ಸಿಂಹಸ್ವಪ್ನವಾಗಿದ್ದರು. 2012ರಲ್ಲಿ ಕೌಂಟಿ ಕ್ರಿಕೆಟ್ ಆಡುವ ವೇಳೆ ಕ್ಯಾನಾಬಿಸ್ ಡ್ರಗ್ಸ್ ಸೇವಿಸಿ ನಿಷೇಧಕ್ಕೆ ಗುರಿಯಾಗಿದ್ದರು. 2014ರಲ್ಲಿ ರೆಹಮಾನ್ ಕಡೆಯ ಬಾರಿಗೆ ಪಾಕಿಸ್ತಾನ ಪರ ಕಣಕ್ಕಿಳಿದಿದ್ದರು.
undefined
4. ಪ್ರದೀಪ್ ಸಾಂಗ್ವಾನ್: ಭಾರತ
undefined
ಡೆಲ್ಲಿ ಮೂಲದ ಪ್ರತಿಭಾನ್ವಿತ ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ 2008ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಆದರೆ ಅಕ್ಟೋಬರ್ 2013ರಲ್ಲಿ ಸಾಂಗ್ವಾನ್ ಸ್ಟಾನೋಜೋಲಾಲ್ ಸ್ಟಿರಾಯ್ಡ್ ಸೇವಿಸಿ 18 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು.
undefined
5. ಅಲೆಕ್ಸ್ ಹೇಲ್ಸ್: ಇಂಗ್ಲೆಂಡ್
undefined
ಇಂಗ್ಲೆಂಡ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಅಲೆಕ್ಸ್ ಹೇಲ್ಸ್ ಕಡೆಯ ಬಾರಿಗೆ ಡ್ರಗ್ಸ್ ಸೇವಿಸಿ ನಿಷೇಧಕ್ಕೆ ಗುರಿಯಾದ ಆಟಗಾರ ಎನಿಸಿದ್ದಾರೆ. 2019ರ ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದಾಗ ನಿಷೇಧಿತ ಡ್ರಗ್ಸ್ ಅಂಶ ಕಂಡು ಬಂದಿದ್ದರಿಂದ ತಂಡದಿಂದ ಕೈಬಿಡಲಾಗಿತ್ತು.
undefined
click me!