ನಿಸ್ವಾರ್ಥ ಕ್ರಿಕೆಟಿಗ ಸುರೇಶ್ ರೈನಾ ಹುಟ್ಟು ಹಬ್ಬ; ಪತ್ನಿ, ಮಗಳೊಂದಿಗೆ ಸೆಲೆಬ್ರೇಷನ್!

First Published | Nov 27, 2019, 12:14 PM IST

ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಅತ್ಯಂತ ನಿಸ್ವಾರ್ಥ ಕ್ರಿಕೆಟಿಗ ಎಂದೇ ಹೆಸರುವಾಸಿಯಾಗಿದ್ದಾರೆ. ಇತರ ಕ್ರಿಕೆಟಿಗರ ಯಶಸ್ಸನ್ನು ಅತೀಯಾಗಿ ಸಂಭ್ರಮಿಸುವ, ಅಭಿನಂದಿಸುವ ಹಾಗೂ ಹುರಿದುಂಬಿಸುವ ಏಕೈಕ ಕ್ರಿಕೆಟಿಗ ಸುರೇಶ್ ರೈನಾ. ಸದ್ಯ ಫಿಟ್ನಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದುರುವ ರೈನಾ ಇಂದು(ನ.27) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುರೇಶ್ ರೈನಾ ಸದ್ಯದ ಚಿತ್ರಣ ಇಲ್ಲಿದೆ.

ಟೀಂ ಇಂಡಿಯಾ ಕಂಡ ಯಶಸ್ವಿ ಆಲ್ರೌಂಡರ್ ಸುರೇಶ್ ರೈನಾಗೆ 33ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ
ಉತ್ತರ ಪ್ರದೇಶದ ಗಾಸಿಯಾ ಬಾದ್‌ನಲ್ಲಿ ಹುಟ್ಟಿದ ರೈನಾ, 2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ
Tap to resize

2015ರ ಎಪ್ರಿಲ್ 3 ರಂದು ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿ ಮದುವೆಯಾದ ಸುರೇಶ್ ರೈನಾ
ರೈನಾ ಪತ್ನಿ ಪ್ರಿಯಾಂಕ ನೆದರ್ಲೆಂಡ್‌ನಲ್ಲಿ ಬ್ಯಾಂಕ್ ಉದ್ಯೋಗಿ
2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ರೈನಾ ಮಧ್ಯಮ ಕ್ರಮಾಂಕದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದರು
2011ರ ವಿಶ್ವಕಪ್ ಟೂರ್ನಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಸುರೇಶ್ ರೈನಾ
ಸುರೇಶ್ ರೈನಾ ಹಾಗೂ ಪತ್ನಿ ಪ್ರಿ.ಯಾಂಕ ಚೌಧರಿ ನೆದರ್ಲೆಂಡ್‌ನಲ್ಲಿ ನೆಲೆಸಿದ್ದಾರೆ
ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ರೈನಾ ಕಸರತ್ತು ಆರಂಭಿಸಿದ್ದಾರೆ
2016ರಲ್ಲಿ ಮುದ್ದಾದ ಹೆಣ್ಣು ಮಗುವಿನ ಪೋಷಕರಾದ ರೈನಾ ದಂಪತಿ
ಭಾರತೀಯ ಸೈನ್ಯ ಹಾಗೂ ದೇಶದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಕ್ರಿಕೆಟಿಗ ರೈನಾ
ಮಗುವಿಗೆ ಗ್ರೇಸಿಯಾ ರೈನಾ ನಾಮಕರಣ ಮಾಡಿದ ರೈನಾ ದಂಪತಿ
ಭಾರತದ ಪರ 226 ಏಕಕದಿನ ಪಂದ್ಯದಿಂದ 5615 ರನ್ ಸಿಡಿಸಿರುವ ಸುರೇಶ್ ರೈನಾ
78 ಟಿ20 ಪಂದ್ಯದಿಂದ 1605 ರನ್ ಹಾಗೂ 18 ಟೆಸ್ಟ್ ಪಂದ್ಯದಿಂದ 768 ರನ್ ಸಿಡಿಸಿರುವ ರೈನಾ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 62 ವಿಕೆಟ್ ಕಬಳಿಸಿರುವ ಸುರೇಶ್ ರೈನಾ
ಅತ್ಯುತ್ತಮ ಗಾಯಕನಾಗಿರುವ ಸುರೇಶ್ ರೈನಾ ಕೆಲ ಆಲ್ಬಮ್ ಗೀತೆಗಳನ್ನು ಹೊರತಂದಿದ್ದಾರೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಕ ಆಟಗಾರ ಸುರೇಶ್ ರೈನಾ

Latest Videos

click me!