ಒನ್‌ಡೇ ಕ್ರಿಕೆಟ್‌ನಲ್ಲಿ 300+ ಮೇಡನ್ ಓವರ್ ಮಾಡಿದ ಜಗತ್ತಿನ ಏಕೈಕ ಬೌಲರ್ ಇವರು!

First Published | Sep 21, 2024, 3:30 PM IST

ಬೆಂಗಳೂರು: ಆಧುನಿಕ ಕ್ರಿಕೆಟ್‌ ಬ್ಯಾಟರ್‌ಗಳ ಕ್ರೀಡೆ ಎನಿಸಿಕೊಂಡಿದೆ. ಆದರೆ ಕ್ರಿಕೆಟ್‌ನಲ್ಲಿ ಬೌಲರ್‌ಗಳು ಮಿಂಚುವುದು ತೀರಾ ವಿರಳ . ಏಕದಿನ ಕ್ರಿಕೆಟ್‌ನಲ್ಲಿ 6 ಎಸೆತಗಳಲ್ಲಿ 6 ಡಾಟ್ ಹಾಕುವುದು ಸುಲಭವಲ್ಲ. ಆದರೆ ಒಬ್ಬ ವೇಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ಬಾರಿ ಮೇಡನ್ ಓವರ್ ಬೌಲಿಂಗ್ ಮಾಡಿದ್ದಾರೆ.
 

ಏಕದಿನ ಕ್ರಿಕೆಟ್‌ನಲ್ಲಿ ಮೇಡನ್ ಓವರ್ ಎಸೆಯುವುದು ಬೌಲರ್‌ಗಳ ಪಾಲಿಗೆ ಸುಲಭದ ಮಾತಲ್ಲ. 6 ಎಸೆತಗಳಲ್ಲಿ ಒಂದೇ ಒಂದು ರನ್ ನೀಡದೇ ಇರುವುದು ಬೌಲರ್‌ನ ಸ್ಕಿಲ್ ತೋರಿಸುತ್ತದೆ
 

ವಾಸಿಂ ಅಕ್ರಂ

ಸ್ವಿಂಗ್ ಕಿಂಗ್ ಖ್ಯಾತಿಯ ವಾಸಿಂ ಅಕ್ರಂ, 90ರ ದಶಕದಲ್ಲಿ ಎದುರಾಳಿ ತಂಡಗಳ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಬೌಲರ್ ಆಗಿದ್ದರು. ವಾಸಿಂ ಅಕ್ರಂ ಏಕದಿನ ಕ್ರಿಕೆಟ್‌ನಲ್ಲಿ 238 ಬಾರಿ ಮೇಡನ್ ಓವರ್ ಎಸೆದಿದ್ದಾರೆ.
 

Latest Videos


ಗ್ಲೆನ್ ಮೆಗ್ರಾತ್:

ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾಗಿದ್ದ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಗ್ರಾತ್, ಏಕದಿನ ಕ್ರಿಕೆಟ್‌ನಲ್ಲಿ 279 ಮೇಡನ್ ಓವರ್‌ ಮಾಡಿದ್ದಾರೆ.
 

ಚಮಿಂದ ವಾಸ್:

ಶ್ರೀಲಂಕಾದ ದಿಗ್ಗಜ ಎಡಗೈ ವೇಗಿ ಚಮಿಂದ ವಾಸ್ ಕೂಡಾ ಏಕದಿನ ಕ್ರಿಕೆಟ್‌ನಲ್ಲಿ, ಮೆಗ್ರಾತ್ ಅವರಂತೆ 279 ಮೇಡನ್ ಓವರ್‌ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ವಾಸ್‌, ಯಾರ್ಕರ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು.
 

300+ ಮೇಡನ್ ಓವರ್:

ಮೇಲ್ಕಂಡ ಮೂವರು ವೇಗಿಗಳು ಏಕದಿನ ಕ್ರಿಕೆಟ್‌ನಲ್ಲಿ ದಶಕಗಳ ಕಾಲ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಆದರೆ ಈ ಮೂವರು ವೇಗಿಗಳು 300+ ಮೇಡನ್ ಓವರ್‌ ಮಾಡಲು ಸಾಧ್ಯವಾಗಿಲ್ಲ

ಶಾನ್ ಪೊಲ್ಲಾಕ್;

ದಕ್ಷಿಣ ಆಫ್ರಿಕಾದ ದಿಗ್ಗಜ ಬೌಲಿಂಗ್ ಆಲ್ರೌಂಡರ್ ಶಾನ್ ಪೊಲ್ಲಾಕ್ ಏಕದಿನ ಕ್ರಿಕೆಟ್‌ನಲ್ಲಿ ಬರೋಬ್ಬರಿ 313 ಬಾರಿ ಮೇಡನ್ ಓವರ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪೊಲ್ಲಾಕ್ ದಕ್ಷಿಣ ಆಫ್ರಿಕಾ ಪರ 303 ಏಕದಿನ ಪಂದ್ಯಗಳನ್ನಾಡಿದ್ದಾರೆ.
 

click me!