ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಭಾರತ ಅಂಡರ್-19 ತಂಡವು ಚೊಚ್ಚಲ ವಿಶ್ವಕಪ್ ಗೆದ್ದಾಗ, ಇಡೀ ಕ್ರಿಕೆಟ್ ಜಗತ್ತೇ ಕೈಫ್ ಅವರತ್ತ ನೋಡಿತ್ತು.
ಇದೀಗ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ, ಮೊಹಮ್ಮದ್ ಕೈಫ್ ಭಾರತ ಕ್ರಿಕೆಟ್ ತಂಡವು ಕಂಡಂತಹ ದಿಗ್ಗಜ ಕ್ಷೇತ್ರರಕ್ಷಕ ಎನ್ನುವು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ
ಅಲಹಾಬಾದ್‌ನಲ್ಲಿ ಜನಿಸಿದ ಮೊಹಮ್ಮದ್ ಕೈಫ್, ಅಂಡರ್ 19 ವಿಶ್ವಕಪ್ ಜಯಿಸಿದ ಬಳಿಕ ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇಂಗ್ಲೆಂಡ್ ಎದುರಿನ ನಾಟ್‌ವೆಸ್ಟ್ ಸೀರಿಸ್ ಫೈನಲ್‌ನಲ್ಲಿ ಕೈಫ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲ್ಲಿಸಿದ್ದು, ಅವರು ಆಡಿದ ಅವಿಸ್ಮರಣೀಯ ಇನಿಂಗ್ಸ್‌ಗಳಲ್ಲಿ ಒಂದು.
ವೃತ್ತಿಪರ ಕ್ರಿಕೆಟ್‌ನಲ್ಲಿ ಹಲವು ಸಾಧನೆ ಮಾಡಿರುವ ಕೈಫ್ ಅವರ ವೈಯುಕ್ತಿಕ ಜೀವನ ಮತ್ತಷ್ಟು ವರ್ಣರಂಜಿತವಾಗಿದೆ. ಮೊಹಮ್ಮದ್ ಕೈಫ್ ಅವರ ಲವ್ ಸ್ಟೋರಿ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ 2011ರಲ್ಲಿ ಪೂಜಾ ಯಾದವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಕಬೀರ್ ಎನ್ನುವ ಗಂಡು ಮಗು ಹಾಗೂ ಇವಾ ಎನ್ನುವ ಹೆಣ್ಣು ಮಗಳನ್ನು ಹೊಂದಿದ್ದಾರೆ
ಪೂಜಾ ಯಾದವ್ ವೃತ್ತಿಯಲ್ಲಿ ಜರ್ನಲಿಸ್ಟ್ ಆಗಿದ್ದರು. 2007ರಲ್ಲಿ ಒಂದು ಕಾಮನ್ ಫ್ರೆಂಡ್ ಪಾರ್ಟಿಯಲ್ಲಿ ಪೂಜಾ ಯಾದವ್ ಹಾಗೂ ಮೊಹಮ್ಮದ್ ಕೈಫ್ ಮೊದಲ ಬಾರಿಗೆ ಭೇಟಿಯಾಗಿದ್ದರು.
ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ 4 ವರ್ಷಗಳ ಡೇಟಿಂಗ್ ಬಳಿಕ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹಿಂದೂ-ಮುಸ್ಲಿಂ ಜೋಡಿಯ ಮದುವೆಯಾದರೂ ಯಾವುದೇ ಅಡ್ಡಿ ಆತಂಕಗಳು ಅವರಿಗೆ ಎದುರಾಗಲಿಲ್ಲ. ಅಂತಿಮವಾಗಿ ಮೊಹಮ್ಮದ್ ಕೈಫ್ ಹಾಗೂ ಪೂಜಾ ಯಾದವ್ ಮಾರ್ಚ್ 26, 2011ರಲ್ಲಿ ತಮ್ಮ ಆಪ್ತ ಸ್ನೇಹಿತರು ಹಾಗೂ ಕುಟುಂಬ ವರ್ಗದ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು.