ಪತ್ನಿಗೆ ಬಿಗಿದಪ್ಪಿ ಚುಂಬಿಸಿದ ಹಾರ್ದಿಕ್ ಪಾಂಡ್ಯ; ವಿಶ್ವಕಪ್ ಕಡೆ ಗಮನ ಕೊಡಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು..!

First Published | Jun 30, 2023, 12:40 PM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಸ್ಟ್ಯಾಂಕೋವಿಚ್‌ ಇಬ್ಬರು ಬಿಡುವಿನ ಸಮಯವನ್ನು ಬಿಂದಾಸ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ತಾರಾ ಜೋಡಿಯ ಕಿಸ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮುದ್ದಾದ ಮಡದಿ ನತಾಶ ಸ್ಟ್ಯಾಂಕೋವಿಚ್‌ ಇತ್ತೀಚೆಗಷ್ಟೇ ಬೋಲ್ಡ್‌ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸರ್ಬಿಯಾ ದೇಶದ ಬೆಡಗಿ ನತಾಶ, ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಆಗಾಗ ತಮ್ಮ ಹಾಗೂ ತಮ್ಮ ಪತಿ ಹಾರ್ದಿಕ್ ಪಾಂಡ್ಯ ಜತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Tap to resize

ಇದೀಗ ಹಾರ್ದಿಕ್ ಪಾಂಡ್ಯ ಅವರು ಪತ್ನಿಯನ್ನು ಬಹಿರಂಗವಾಗಿಯೇ ಚುಂಬಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಈ ಫೋಟೋವೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಈ ರೊಮ್ಯಾಂಟಿಕ್ ಫೋಟೋದ ಜತೆಗೆ ನತಾಶ ‘Je t’aime’ ಎಂದು ಬರೆದುಕೊಂಡಿದ್ದಾರೆ. ಇದರರ್ಥ ಫ್ರೆಂಚ್ ಭಾಷೆಯಲ್ಲಿ 'ಐ ಲವ್ ಯೂ' ಎನ್ನುವುದಾಗಿದೆ. ಮೈದಾನದಾಚೆಗೆ ಈ ಜೋಡಿ ಚೆನ್ನಾಗಿಯೇ ಎಂಜಾಯ್ ಮಾಡುತ್ತಿರುತ್ತಾರೆ.
 

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿಗೆ ಜಾರಿದ್ದಾರೆ. 2018ರ ಬಳಿಕ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ನತಾಶ&ಪಾಂಡ್ಯ ಜೋಡಿ ಹಾಟ್ ಫೋಟೋ ಹಂಚಿಕೊಂಡ ಬೆನ್ನಲ್ಲೇ, ಮುಂದೆ ವಿಶ್ವಕಪ್‌ ಟೂರ್ನಿಯಿದೆ. ಆ ಬಗ್ಗೆ ಗಮನ ಹರಿಸಿ ಎಂದು ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಿದ್ದಾರೆ. 

ಯಾರೀಕೆ ನತಾಶ?

ಸರ್ಬಿಯಾ ಮೂಲದ ನಟಿ ನತಾಶ ಸ್ಟ್ಯಾಂಕೋವಿಚ್‌, 2013ರಲ್ಲಿ ಸತ್ಯಾಗ್ರಹ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಹಿಂದಿ ಬಿಗ್ ಬಾಸ್ 8ನೇ ಆವೃತ್ತಿ ಮೂಲಕ ನತಾಶ ಭಾರತದಲ್ಲಿ ಜನಪ್ರಿಯವಾಗಿದ್ದರು.
 

ನಟಿಯಾಗಬೇಕು ಎಂದು ಭಾರತಕ್ಕೆ ಬಂದ ನತಾಶ, ಬಾಲಿವುಡ್‌ ಐಟಂ ಸಾಂಗ್‌ಗಳಲ್ಲಿ ಮಿಂಚಿ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು. ಇದಾದ ಪಾಂಡ್ಯ ಪ್ರೇಮಪಾಶಕ್ಕೆ ಬಿದ್ದರು.

ಮುಂಬೈನ ನೈಟ್‌ ಕ್ಲಬ್‌ನಲ್ಲಿ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟ್ಯಾಂಕೋವಿಚ್‌ ಭೇಟಿಯಾದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ, ಇದೀಗ ಒಂದು ಮಗುವಿನ ತಂದೆ-ತಾಯಿಯಾಗಿದ್ದಾರೆ ಈ ಸೆಲಿಬ್ರಿಟಿ ಜೋಡಿ.

Latest Videos

click me!