ನಂಬಿದ್ರೆ ನಂಬಿ, ವಿಶ್ವದ ನಂ.1 ಬೌಲರ್‌ಗೆ ಸಿಕ್ಕಿದ್ದು ಒಂದೇ ಒಂದು ವಿಕೆಟ್..!

First Published | Feb 11, 2020, 4:51 PM IST

ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಆತಿಥೇಯ ಕಿವೀಸ್ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಟಿ20 ಸರಣಿಯಲ್ಲಿ ಅನುಭವಿಸಿದ್ದ ವೈಟ್‌ವಾಷ್‌ಗೆ ತಿರುಗೇಟು ನೀಡುವಲ್ಲಿ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿದೆ.

ಟಿ20 ಸರಣಿಯನ್ನು 5-0 ಅಂತರದಲ್ಲಿ ಗೆದ್ದು ಬೀಗುತ್ತಿದ್ದ ವಿರಾಟ್‌ ಪಡೆ ಇದೀಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾ ಏಕದಿನ ಸರಣಿ ಸೋತಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...

1. ಬುಮ್ರಾ ದಯಾನೀಯ ವೈಫಲ್ಯ
undefined
ಐಸಿಸಿ ಏಕದಿನ ನಂ.1 ಶ್ರೇಯಾಂಕಿತ ಬೌಲರ್ ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ 5.3ರ ಸರಾಸರಿಯಲ್ಲಿ ರನ್ ನೀಡಿ ಪಡೆದದ್ದು ಒಂದೇ ಒಂದು ವಿಕೆಟ್.
undefined

Latest Videos


2. ಕಾಡಿದ ರೋಹಿತ್ ಶರ್ಮಾ ಅನುಪಸ್ಥಿತಿ
undefined
ಅನನುಭವಿ ಓಪಪನ್ನರ್‌ಗಳಿಂದಾಗಿ 3 ಪಂದ್ಯಗಳಲ್ಲೂ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು.
undefined
3. ಟಾಪ್ 3 ಬ್ಯಾಟ್ಸ್‌ಮನ್‌ಗಳು ಸಿಡಿದರೆ ಮಾತ್ರ ಗೆಲುವು
undefined
ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರು ದೊಡ್ಡ ಇನಿಂಗ್ಸ್ ಕಟ್ಟದಿದ್ದರೆ, ಭಾರತಕ್ಕೆ ಸೋಲು ಕಟ್ಟಿಟ್ಟಬುತ್ತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
undefined
4. ಕೊನೆಯ 2 ಪಂದ್ಯಗಳಲ್ಲಿ ಕೊಹ್ಲಿ ಫೇಲ್
undefined
ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕೊಹ್ಲಿ ಕೊನೆಯ 2 ಮಹತ್ವದ ಪಂದ್ಯಗಳಲ್ಲಿ ಕ್ರಮವಾಗಿ (15&9) ಅಲ್ಪ ಮೊತ್ತಕ್ಕೆ ಔಟ್ ಆಗಿದ್ದು ಪಂದ್ಯದ ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮ ಬೀರಿತು.
undefined
5. ಬೌಲಿಂಗ್ ಹಾಗೂ ಫೀಲ್ಡಿಂಗ್ ಎಡವಟ್ಟುಗಳು
undefined
ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರು ತೋರಿದ ಆಕ್ರಮಣಕಾರಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ಏಕದಿನ ಸರಣಿಯಲ್ಲಿ ಕಂಡುಬರಲಿಲ್ಲ.
undefined
6. ಮನೀಶ್ ಹೊರಗಿಟ್ಟು ಕೇದಾರ್‌ಗೆ ಅವಕಾಶ ನೀಡಿದ್ದು
undefined
ಮೊದಲೆರಡು ಪಂದ್ಯಗಳಲ್ಲಿ ಮನೀಶ್ ಪಾಂಡೆ ಹೊರಗಿಟ್ಟು ಕೇದಾರ್‌ ಜಾಧವ್‌ಗೆ ಅವಕಾಶ ನೀಡಲಾಯ್ತು. ಆದರೆ ಜಾಧವ್‌ರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಪಾಂಡೆಗೆ ಕೊನೆಯ ಪಂದ್ಯದಲ್ಲಿ ಅವಕಾಶ ನೀಡಲಾಯ್ತು. ಪಾಂಡೆ 42 ರನ್ ಬಾರಿಸಿದರಾದರೂ ಸರಣಿ ಕೈತಪ್ಪಿ ಹೋಗಿತ್ತು.
undefined
click me!