ಬೆಂಗಳೂರು: ಟೀಂ ಇಂಡಿಯಾ ಒಂದೆಡೆ ಬ್ಯಾಕ್ ಟು ಬ್ಯಾಕ್ ಸೀರಿಸ್ ಗೆಲ್ತಿದೆ. ಒಂದು ಸಾಲದೆಂಬಂತೆ ಏಕಕಾಲಕ್ಕೆ ಎರಡು ತಂಡಗಳನ್ನ ಆಡಿಸ್ತಿದೆ. ಆ ಮೂಲಕ ತಂಡ ಬೆಂಚ್ ಸ್ಟ್ರೆಂಥ್ ಹೆಚ್ಚಳಕ್ಕೆ ಮುಂದಾಗಿದೆ. ಇನ್ನೊಂದೆಡೆ ಆಟಗಾರ ವರ್ಕ್ಲೋಡ್ ಕಮ್ಮಿ ಮಾಡಲು ಸೀನಿಯರ್ ಪ್ಲೇಯರ್ಸ್ಗೆ ಮೇಲಿಂದ ಮೇಲೆ ರೆಸ್ಟ್ ಕೊಡ್ತಿದೆ. 2021ರ ಟಿ20 ವಿಶ್ವಕಪ್ನಿಂದ ಶುರುವಾದ ಈ ವಿಶ್ರಾಂತಿ ಕಥೆ, ಸದ್ಯದ ವೆಸ್ಟ್ಇಂಡೀಸ್ ಸರಣಿವರೆಗೆ ಬಂದು ನಿಂತಿದೆ. ಕಳೆದ 8 ತಿಂಗಳಲ್ಲಿ ಐವರು ಸ್ಟಾರ್ ಪ್ಲೇಯರ್ಸ್ ಆಡಿದ್ದಕ್ಕಿಂತ ಹೆಚ್ಚಾಗಿ ತಂಡದಿಂದ ಹೊರಗುಳಿದಿದ್ದಾರೆ. ಹಾಗಾದ್ರೆ ಟಿ20 ವಿಶ್ವಕಪ್ ಬಳಿಕ ಐವರು ಬಿಗ್ ಪ್ಲೇಯರ್ಸ್ ಎಷ್ಟು ಪಂದ್ಯಗಳನ್ನ ಆಡಿದ್ದಾರೆ ? ಎಷ್ಟು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ ಅನ್ನೋದನ್ನ ತೋರಿಸ್ತೀವಿ ನೋಡಿ..
ಸತತ ವೈಫಲ್ಯ ಕಾಣ್ತಿರೋ ವಿರಾಟ್ ಕೊಹ್ಲಿ ಇತ್ತೀಚೆಗೆ ಆಟಕ್ಕಿಂತ ಹೆಚ್ಚಾಗಿ ರೆಸ್ಟ್ ನಿಂದಲೇ ಹೆಚ್ಚು ಸುದ್ದಿಯಾಗ್ತಿದ್ದಾರೆ. ಇವರು 2021ರ ಟಿ20 ವಿಶ್ವಕಪ್ ಬಳಿಕ 25 ಪಂದ್ಯವನ್ನ ಮಿಸ್ ಮಾಡಿಕೊಂಡ್ರೆ, ಬರೀ 19 ಪಂದ್ಯಗಳನ್ನಷ್ಟೇ ಆಡಿದ್ದಾರೆ. 7 ಸರಣಿಗಳಿಗೆ ವಿಶ್ರಾಂತಿ ಅಥವಾ ಇತರೆ ಕಾರಣಗಳಿಂದ ಅಲಭ್ಯರಾಗಿದ್ದಾರೆ.
25
ರೋಹಿತ್ ಶರ್ಮಾ 27 ಪಂದ್ಯ ಆಡಿದ್ರೆ, 16 ರಿಂದ ಔಟ್:
ಇನ್ನು ಕ್ಯಾಪ್ಟನ್ ರೋಹಿತ್ ಈ ವಿಚಾರದಲ್ಲಿ ಕೊಹ್ಲಿಗೆ ಹೋಲಿಸಿದ್ರೆ ಕೊಂಚ ಉತ್ತಮ. ಇವರು 27 ಪಂದ್ಯಗಳನ್ನ ಆಡಿದ್ದಾರೆ. ಆದ್ರೆ 16 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇವರ ಅಲಭ್ಯತೆಯಿಂದ ಭಾರತ ತಂಡ ವರ್ಷವೊಂದರಲ್ಲೇ 7 ನಾಯಕರನ್ನ ಕಂಡಿದೆ.
35
13 ಆಡಿ 27 ಪಂದ್ಯ ಗಳಿಂದ ಹೊರಗುಳಿದ ರಾಹುಲ್:
ಕೆ.ಎಲ್ ರಾಹುಲ್ ಅದ್ಭುತ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಇವರಿಗೆ ಕಳೆದೊಂದು ವರ್ಷದಿಂದ ಬೆನ್ನು ನೋವು ವಕ್ಕರಿಸಿದೆ. ಅದಕ್ಕೆ ಇವರು ಹೊರಗುಳಿದ 27 ಪಂದ್ಯಗಳೇ ಬೆಸ್ಟ್ ಎಕ್ಸಾಂಪಲ್. ಇನ್ನು ಆಡಿದ್ದು ಬರೀ 13 ಪಂದ್ಯಗಳಷ್ಟೇ.
45
ರಾಹುಲ್ ಹಾದಿಯನ್ನೇ ತುಳಿದ ಆಲ್ರೌಂಡರ್ ಜಡ್ಡು : ಇನ್ನು ಆಲ್ರೌಂಡರ್ ಜಡೇಜಾ ಈ ವಿಚಾರದಲ್ಲಿ ಕೆಎಲ್ ರಾಹುಲ್ ಹಾದಿಯನ್ನ ತುಳಿದಿದ್ದಾರೆ. ಅಂದ್ರೆ ಕಳೆದ 8 ತಿಂಗಳಲ್ಲೇ ರಾಹುಲ್ರಷ್ಟೇ ಪಂದ್ಯಗಳನ್ನಾಡಿದ್ರೆ, ಅವರಷ್ಟೇ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ.
55
ಜಸ್ಪ್ರೀತ್ ಬುಮ್ರಾ 14 ರಲ್ಲಿ ಇನ್, 27 ರಿಂದ ಔಟ್:
ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ತಂಡದ ಪ್ರಮುಖ ಬೌಲರ್. ಮಹತ್ವವಿಲ್ಲದ ಸರಣಿಗಳಿಂದ ಇವರಿಗೆ ರೆಸ್ಟ್ ನೀಡಿ, ಬಲಾಢ್ಯ ತಂಡಗಳ ವಿರುದ್ಧ ಆಡ್ತಿದ್ದಾರೆ. ಇವರು ಟಿ20 ವಿಶ್ವಕಪ್ ಬಳಿಕ 14 ಪಂದ್ಯವಾಡಿದ್ರೆ, 27 ರಿಂದ ವಂಚಿತರಾಗಿದ್ದಾರೆ.