ಸ್ಮೃತಿ ಮಂಧನಾ ಹುಟ್ಟುಹಬ್ಬ: ನ್ಯಾಷನಲ್ ಕ್ರಿಕೆಟ್‌ ಕ್ರಶ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

Published : Jul 18, 2022, 04:25 PM IST

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಸೋಮವಾರವಾದ ಇಂದು(ಜು.18) 26ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್‌ ತಂಡದ ಪರ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಎಡಗೈ ಬ್ಯಾಟರ್, ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಕ್ರಿಕೆಟ್‌ ಅಭಿಮಾನಿಗಳು ಇಂದು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮಾತ್ರವಲ್ಲದೇ ತಮ್ಮ ವಾಟ್ಸ್‌ಅಪ್‌ ಸ್ಟೇಟಸ್‌ನಲ್ಲೂ ಮಂಧಾನಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನ್ಯಾಷನಲ್ ಕ್ರಿಕೆಟ್ ಕ್ರಶ್ ಎನಿಸಿಕೊಂಡಿರುವ ಸ್ಮೃತಿ ಮಂಧನಾ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ  

PREV
18
ಸ್ಮೃತಿ ಮಂಧನಾ ಹುಟ್ಟುಹಬ್ಬ: ನ್ಯಾಷನಲ್ ಕ್ರಿಕೆಟ್‌ ಕ್ರಶ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಮುಂಬೈ ಮೂಲದ ಸ್ಮೃತಿ ಮಂಧನಾ ಜುಲೈ 18, 1996ರಲ್ಲಿ ಜನಿಸಿದ್ದರು. ಮಂಧನಾ ಪೂರ್ಣ ಹೆಸರು ಸ್ಮೃತಿ ಶ್ರೀನಿವಾಸ್ ಮಂಧನಾ. ಎಡಗೈ ಆರಂಭಿಕ ಬ್ಯಾಟರ್ ಆಗಿರುವ ಮಂಧನಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

28

ಸ್ಮೃತಿ ಮಂಧನಾ 9 ವರ್ಷದವರಾಗಿದ್ದಾಗಲೇ ಕ್ರಿಕೆಟ್ ಆಡುವುದನ್ನು ಶುರು ಮಾಡಿದರು. ಸ್ಮೃತಿ ಮಂಧನಾ, ಮುಂಬೈ ಮಹಿಳಾ ಅಂಡರ್ 15 ಹಾಗೂ ಅಂಡರ್ 19 ತಂಡವನ್ನು ಪ್ರತಿನಿಧಿಸಿದ್ದಾರೆ.

38

ಅಂಡರ್ 19 ಪಂದ್ಯಾವಳಿಯಲ್ಲಿ ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದ ಸ್ಮೃತಿ ಮಂಧನಾ, ದೇಶಿಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಗುಜರಾತ್ ವಿರುದ್ದದ ಏಕದಿನ ಪಂದ್ಯದಲ್ಲಿ ಮಂಧನಾ 150 ಎಸೆತಗಳನ್ನು ಎದುರಿಸಿ 224 ರನ್ ಚಚ್ಚಿದ್ದರು.

48

2013ರಲ್ಲಿ ಭಾರತ ಕ್ರಿಕೆಟ್ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಮೃತಿ ಮಂಧನಾ ಸತತವಾಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಫೈಕಿ SENA ರಾಷ್ಟ್ರಗಳ ಎದುರು 50+ ರನ್ ಬಾರಿಸಿದ ಆಟಗಾರ್ತಿ ಎನ್ನುವ ಹಿರಿಮೆ ಮಂಧನಾಗಿದೆ (SENA- South Africa England New Zealand Australia)

58

ಸ್ಮೃತಿ ಮಂಧನಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಪರ 74 ಏಕದಿನ ಪಂದ್ಯಗಳನ್ನಾಡಿ 42.52ರ ಬ್ಯಾಟಿಂಗ್ ಸರಾಸರಿಯಲ್ಲಿ 2892 ರನ್ ಬಾರಿಸಿದ್ದಾರೆ. ಇನ್ನು 87 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 2033 ರನ್ ಚಚ್ಚಿದ್ದಾರೆ.

68

ಸ್ಮೃತಿ ಮಂಧನಾ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್ ಮಾತ್ರವಲ್ಲದೇ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮಂಧನಾ ಇದುವರೆಗೂ ಭಾರತ ತಂಡದ ಪರ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ.

78

ಸ್ಮೃತಿ ಮಂಧನಾ ಕ್ರಿಕೆಟ್ ಹೊರತುಪಡಿಸಿ ಟೆನಿಸ್ ಹಾಗೂ ಫುಟ್ಬಾಲ್‌ ಕ್ರೀಡೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಮಂಧನಾ ಅವರ ನೆಟ್ಟಿನ ಫುಟ್ಬಾಲ್ ಆಟಗಾರ ಯಾರೆಂದರೇ ಅದು ಕ್ರಿಸ್ಟಿಯಾನೋ ರೊನಾಲ್ಡೋ.

88

స్మృతి మంధాన సోషల్ మీడియాలో పోస్టు చేసే ఫోటోలు తక్కువే అయినా క్రికెట్ మ్యాచుల్లో తమ ఫెవరెట్ వుమెన్ క్రికెటర్ మూమెంట్స్‌ను క్లిక్ చేసి, షేర్ చేస్తూ ఉంటారు ఆమె ఫ్యాన్స్.

ಕ್ರಿಕೆಟ್‌ನ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸ್ಮಥಿ ಮಂಧನಾ ಮತ್ತಷ್ಟು ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲಿ ಹಾಗೂ ಭಾರತಕ್ಕೆ ಹೆಚ್ಚು ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿ ಕೊಡಲಿ ಎನ್ನುವುದು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಬಳಗದ ಹಾರೈಕೆಯಾಗಿದೆ 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories