ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!

Published : Mar 15, 2021, 06:29 PM IST

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಊಹಾಪೋಹಕ್ಕೆ ತೆರೆಬಿದ್ದಿದೆ. ಸದ್ದಿಲ್ಲದೆ ಬುಮ್ರಾ, ಮಾಡೆಲ್, ನಿರೂಪಕಿ ಸಂಜನಾ ಗಣೇಶನ್ ಮದುಯಾಗಿದ್ದಾರೆ.  ಅದ್ದೂರಿ ಮದುವೆಗೆ ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮದುವೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

PREV
18
ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!

ಇತ್ತೀಚೆಗೆ ನಡೆದ ಟೀಂ ಇಂಡಿಯಾ ಕ್ರಿಕೆಟಿಗರ ಮದುವೆ ಪೈಕಿ ಅತ್ಯಂತ ಗೌಪ್ಯವಾಗಿ ಹಾಗೂ ಸದ್ದಿಲ್ಲದೆ ನಡೆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆದಿದೆ.

28

ಗೋವಾದಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಬುಮ್ರಾ, ಮಾಡೆಲ್, ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಸಂಜನಾ ಗಣೇಶನ್ ಕೈ ಹಿಡಿದಿದ್ದಾರೆ.

38

ಪ್ರೀತಿಯಿಂದ ಆರಂಭಗೊಂಡ ನಮ್ಮ ಪಯಣ ಇದೀಗ ಮದುವೆ ಅರ್ಥ ಪಡೆದಿದೆ. ನಾವು ಜೊತೆಯಾಗಿ ಹೊಸ ಪಯಣ ಆರಂಭಿಸಿದ್ದೇವೆ. ಇದು ನಮ್ಮ ಜೀವನದ ಅತ್ಯಂತ ಸಂತಸ ದಿನಗಳಲ್ಲಿ ಒಂದಾಗಿದೆ. ನಮ್ಮ ಮದುವೆ ಹಾಗೂ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಆಶೀರ್ವದಿಸಿ ಎಂದು ಬುಮ್ರಾ ಹಾಗೂ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

48

ಬುಮ್ರಾ ಮದುವೆಗೆ ಬಿಸಿಸಿಐ, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ. ವೈವಾಹಿಕ ಜೀವನ ಆರಂಭಿಸಿದ ಬುಮ್ರಾಗೆ ಅಭಿಮಾನಿಗಳ ಭರಪೂರ ಶುಭಹಾರೈಕೆ ಸಂದೇಶ ಕಳುಹಿಸಿದ್ದಾರೆ.

58

ಮದುವೆ ಸಮಾರಂಭದಲ್ಲಿ ಬುಮ್ರಾ ಹಾಗೂ ಸಂಜಾನ ಅತ್ಯಂತ ಆಕರ್ಷಕ ಉಡುಗೆ ತೊಟ್ಟು ಗಮನಸೆಳೆದಿದ್ದಾರೆ. ಆದರೆ ಈ ಅದ್ಧೂರಿ ಮದುವೆಗೆ ಕೆಲವೇ ಕೆಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.

68

ಜಸ್ಪ್ರೀತ್ ಬುಮ್ರಾ ತಮ್ಮ ಮದುವೆ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರು. ಮದುವೆ ವರೆಗೂ ಬುಮ್ರಾ ಸಂಜನಾ ಮದುವೆಯಾಗಲಿದ್ದಾರೆ ಅನ್ನೋ ಯಾವುದೇ ಖಚಿತ ಮಾಹಿತಿ ಮಾಧ್ಯಕ್ಕೆ ಲಭ್ಯವಾಗಿರಲಿಲ್ಲ.

78

ಬುಮ್ರಾ ಹಾಗೂ ಸಂಜಾನ ಕುಟಂಬಸ್ಥರು ಮಾತ್ರ ಪಾಲ್ಗೊಂಡಿದ್ದ ಈ ಮದುವೆಗೆ ಮೊಬೈಲ್ ಫೋನ್ ಕೂಡ ನಿಷೇಧಿಸಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿತ್ತು.

88

2019ರ ವಿಶ್ವಕಪ್ ಟೂರ್ನಿ ಬಳಿಕ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಡೇಟಿಂಗ್ ನಡೆಸುತ್ತಿದ್ದರು ಅನ್ನೋ ಮಾತುಗಳಿವೆ. ಆದರೆ ಈ ಕುರಿತು ಸ್ವತಃ ನವಜೋಡಿಗಳು ಎಲ್ಲೂ ಕೂಡ ಬಾಯ್ಬಿಟ್ಟಿರಲಿಲ್ಲ.

click me!

Recommended Stories