ಮೊದಲ ನೋಟದಲ್ಲೇ ಔಟ್‌ ಆದ ಕ್ರಿಕೆಟರ್‌ ಹರ್ಭಜನ್‌ ಸಿಂಗ್‌ ಲವ್‌ ಸ್ಟೋರಿ!

First Published | Mar 14, 2021, 5:20 PM IST

ಬಾಲಿವುಡ್ ನಟಿ ಮತ್ತು ಟೀಮ್ ಇಂಡಿಯಾದ ಟರ್ಬನೇಟರ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ 37 ವರ್ಷ. ಮಾರ್ಚ್ 13, 1984 ರಂದು ಪೋರ್ಟ್ಸ್ಮೌತ್ (ಯುಕೆ) ನಲ್ಲಿ ಜನಿಸಿದ ಗೀತಾ 2015 ರಲ್ಲಿ ಹರ್ಭಜನ್ ಸಿಂಗ್ ಅವರನ್ನು ವಿವಾಹವಾದರು. ಹರ್ಭಜನ್ ಸಿಂಗ್ ಮತ್ತು ಗೀತಾರ ಲವ್‌ಸ್ಟೋರಿ ಸಖತ್‌ ರೋಮ್ಯಾಂಟಿಕ್ ಆಗಿದೆ. ವಾಸ್ತವವಾಗಿ, ಹರ್ಭಜನ್ ಸಿಂಗ್ 'ದಿ ಟ್ರೈನ್' ಚಿತ್ರದ 'ವೋ ಅಜ್ನಾಬಿ' ಹಾಡಿನಲ್ಲಿ ಗೀತಾ ಅವರನ್ನು ನೋಡಿದ ಮೊದಲ ನೋಟದಲ್ಲೇ ಔಟ್‌ ಆದರು. ಇಲ್ಲಿದೆ ಹರ್ಭಜನ್‌ಸಿಂಗ್‌ ಅವರ ಸಂಪೂರ್ಣ ಲವ್‌ಸ್ಟೋರಿ.

ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಲಂಡನ್‌ಗೆ ಹೋದಾಗ, ಗೀತಾ ಬಸ್ರಾರ 'ವೊ ಅಜ್ನಾಬಿ ಹಾಡು ನೋಡಿ ಮನ ಸೋತರು ಭಜ್ಜಿ.
ಸ್ನೇಹಿತ ಯುವರಾಜ್ ಸಿಂಗ್‌ಗೆ ನಾನು ಈ ಹುಡುಗಿಯನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದರು. ಆಗಲೇ ಬಾಲಿವುಡ್‌ನಲ್ಲಿ ಅನೇಕ ಜನರ ಪರಿಚಯವಿದ್ದ ಹರ್ಭಜನ್‌ಗೆ ಗೀತಾರ ಫೋನ್‌ ನಂಬರ್‌ ಕಂಡುಹಿಡಿಯುವಲ್ಲಿ ಹೆಚ್ಚಿನ ತೊಂದರೆ ಆಗಲಿಲ್ಲ.
Tap to resize

ನಂತರ ಹರ್ಭಜನ್ ಸ್ನೇಹಿತರಿಂದ ಗೀತಾಫೋನ್‌ ನಂಬರ್‌ ಪಡೆದು ಕಾಫಿಗೆ ಆಹ್ವಾನಿಸಿ ಮೆಸೇಜ್‌ ಮಾಡಿದ್ದರು. ಆದರೆ, 3-4 ದಿನಗಳವರೆಗೆ ಗೀತಾ ಉತ್ತರಿಸಲಿಲ್ಲ. ಇದರ ನಂತರ ಗೀತಾ ಹರ್ಭಜನ್‌ಗೆ ಮೆಸೇಜ್‌ ಮಾಡಿ ಟಿ 20 ವಿಶ್ವಕಪ್‌ನ ಉತ್ತಮ ಪ್ರದರ್ಶನಕ್ಕಾಗಿ ಅಭಿನಂದಿಸಿದರು. ಹೀಗೆ ಮೆಸೇಜ್‌ ಮೂಲಕ ಮಾತು ಶುರುವಾಗಿ ಇಬ್ಬರು ಹತ್ತಿರವಾದರು.
ಇದರ ನಂತರ, ಗೀತಾ ಮತ್ತು ಭಜ್ಜಿ ಮೊದಲ ಬಾರಿಗೆ 2007 ರಲ್ಲಿ ಐಪಿಎಲ್ ಸಮಯದಲ್ಲಿ ಭೇಟಿಯಾದರು. ಭಾರತದ ನೋಯ್ಡಾ ಸರ್ಕ್ಯೂಟ್‌ನಲ್ಲಿ ನಡೆದ ಮೊದಲ ಎಫ್ -1 ರೇಸ್‌ನ ಸಂದರ್ಭದಲ್ಲಿ, ಇಬ್ಬರೂ ಜೊತೆಯಾಗಿ ಕಂಡುಬಂದರು.
ಈ ಕಪಲ್‌ಗಳ ಡೇಟಿಂಗ್‌ ಸಾಕಷ್ಟು ಸದ್ದು ಅಮಡಿತ್ತು ಇಬ್ಬರ ನಡುವಿನ ಸಂಬಂಧದ ಬಗ್ಗೆ ಕೇಳಿದಾಗ, ಗೀತಾ ಒಳ್ಳೆಯ ಸ್ನೇಹಿತ ಎಂದು ಹೇಳಿದರೆ ಏನನ್ನೂ ಹೇಳದೆ ಭಜ್ಜಿ ನಗುತ್ತಿದ್ದರು ಅಷ್ಟೇ.
ಇದರ ನಂತರ, ಭಜ್ಜಿ ಮತ್ತು ಗೀತಾ ಜೋಡಿ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಈ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದಾಗ, ಬ್ರೇಕಪ್‌ ವದಂತಿಗಳು ಸಹ ಹುಟ್ಟಿಕೊಂಡವು.
ಆದರೆ ಇಬ್ಬರೂ ಫಿಫಾ ವಿಶ್ವಕಪ್ -2014 ರ ಸಮಯದಲ್ಲಿ ಪ್ರವಾಸಕ್ಕೆ ಹೋಗುವ ಮೂಲಕ ಎಲ್ಲರಿಗೂ ಸರ್ಪ್ರೈಸ್‌ ನೀಡಿದ್ದರು
ಈ ಪ್ರವಾಸದಲ್ಲಿ, ಅವರು ಪ್ರಸಿದ್ಧ ಬ್ರೆಜಿಲ್ ಫುಟ್ಬಾಲ್ ಆಟಗಾರ ಪೀಲೆ ಅವರನ್ನು ಭೇಟಿಯಾಗಿ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಸಹ ಹಂಚಿಕೊಂಡಿದ್ದರು.
ಬ್ರೆಜಿಲ್‌ನಿಂದ ಭಾರತಕ್ಕೆ ಮರಳಿದ ನಂತರ ಸಂದರ್ಶನವೊಂದರಲ್ಲಿ, ಗೀತಾ ವಿವಾಹದ ಬಗ್ಗೆ ಪ್ರಶ್ನೆಗೆ 'ಈ ರೀತಿಯ ಏನಾದರೂ ನೆಡೆದರೆ ನಿಮಗೆ ಖಂಡಿತವಾಗಿಯೂ ತಿಳಿಯುತ್ತದೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ' ಎಂದು ಹೇಳಿದ್ದರು.
ಸುಮಾರು 8 ವರ್ಷಗಳ ಕಾಲ ಸಂಬಂಧದಲ್ಲಿದ್ದ ಈ ಕಪಲ್‌ 2015 ರ ಅಕ್ಟೋಬರ್ 29 ರಂದು ಜಲಂಧರ್‌ನ ಗುರುದ್ವಾರದಲ್ಲಿ ಪಂಜಾಬಿ ಪದ್ಧತಿಯಲ್ಲಿ ವಿವಾಹವಾದರು.ಸಮಾರಂಭದಲ್ಲಿ ಕೆಲವು ಆಪ್ತರು ಮತ್ತು ಸ್ನೇಹಿತರು ಭಾಗವಹಿಸಿದ್ದರು.
ಮದುವೆಯ ಮುಂದಿನ ವರ್ಷ, ಜುಲೈ 27, 2016 ರಂದು ಮಗಳು ಹಿನಾಯಾಗೆ ಜನ್ಮ ನೀಡಿದರು.
ಗೀತಾ ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 6 ಚಿತ್ರಗಳಲ್ಲಿ ಕೆಲಸ ಮಾಡಿದರು.

Latest Videos

click me!