ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 195 ರನ್ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ 19.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಗೆಲುವಿನ ಮೂಲಕ ಕೆಲ ದಾಖಲೆಯನ್ನೂ ಬರೆದಿದೆ.
ಆಸೀಸ್ ವಿರುದ್ಧ ಟಿ20 ಸರಣಿ ಗೆಲುವಿನ ಬೆನ್ನಲ್ಲೇ, 2020ನೇ ಸಾಲಿನಲ್ಲಿ ಟೀಂ ಇಂಡಿಯಾ ಸತತವಾಗಿ 9ನೇ ಟಿ20 ಪಂದ್ಯ ಗೆದ್ದ ಸಾಧನೆ ಮಾಡಿದೆ.
ಕ್ಯಾಲೆಂಡರ್ ಇಯರ್‌ನಲ್ಲಿ ಗರಿಷ್ಠ ಟಿ20 ಪಂದ್ಯ ಪಟ್ಟಿಯಲ್ಲಿ ಆಫ್ಘಾನಿಸ್ತಾನ ಸತತ 12 ಟಿ20 ಪಂದ್ಯ(2018-19) ಗೆಲ್ಲೋ ಮೂಲಕ ಮೊದಲ ಸ್ಥಾನದಲ್ಲಿದೆ. ಭಾರತ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಆಸೀಸ್ ವಿರುದ್ಧದ 3ನೇ ಟಿ20 ಪಂದ್ಯ ಗೆದ್ದರೆ ಟೀಂ ಇಂಡಿಯಾ , ಸತತ 9 ಪಂದ್ಯ (2018) ಗೆಲ್ಲೋ ಮೂಲಕ 3ನೇ ಸ್ಥಾನದಲ್ಲಿರುವ ಪಾಕಿಸ್ತಾನವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಲಿದೆ.
ಈ ಗೆಲುವಿನ ಮೂಲಕ ಟೀಂ ಇಂಡಿಯಾ ವಿದೇಶದಲ್ಲಿ ಸತತ 10ನೇ ಟಿ20 ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ವಿಂಡೀಸ್ ಪ್ರವಾಸದಲ್ಲಿ 3, ನ್ಯೂಜಿಲೆಂಡ್ ಪ್ರವಾಸದಲ್ಲಿ 5 ಹಾಗೂ ಇದೀಗ ಆಸೀಸ್ ಪ್ರವಾಸದಲ್ಲಿ 2 ಟಿ20 ಪಂದ್ಯ ಗೆದ್ದ ಸಾಧನೆ ಮಾಡಿದೆ
195 ರನ್ ಚೇಸ್ ಮಾಡೋ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಗರಿಷ್ಠ ರನ್ ಚೇಸ್ ಮಾಡಿದ 2ನೇ ಟಿ20 ಪಂದ್ಯ ಅನ್ನೋ ದಾಖಲೆ ಬರೆದಿದೆ.
2016ರಲ್ಲಿ ಇದೇ ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾ, ಕಾಂಗರೂಗಳ ವಿರುದ್ಧ 198 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು.