ಜಡ್ಡು ಬದಲಿಗೆ ಚಹಲ್ ಬೌಲಿಂಗ್ ಮಾಡಿದ್ದೇಕೆ..? ಐಸಿಸಿ ಕನ್ಕಶನ್ ನಿಯಮವೇನು ಹೇಳುತ್ತೆ..?

First Published | Dec 4, 2020, 8:02 PM IST

ಕ್ಯಾನ್‌ಬೆರ್ರಾ: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಅಪರೂಪದ ಸನ್ನಿವೇಷಕ್ಕೆ ಸಾಕ್ಷಿಯಾಯಿತು. ತೀವ್ರ ರೋಚಕತೆ ಹುಟ್ಟುಹಾಕಿದ್ದ ಪಂದ್ಯದಲ್ಲಿ ಕನ್ಕಶನ್ ಆಟಗಾರನಾಗಿ ಟೀಂ ಇಂಡಿಯಾ ಕೂಡಿಕೊಂಡ ಯುಜುವೇಂದ್ರ ಚಹಲ್ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಹೌದು, ರವೀಂದ್ರ ಜಡೇಜಾ ಆಕರ್ಷಕ ಬ್ಯಾಟಿಂಗ್ ಬಳಿಕ ಕನ್ಕಶನ್ ನಿಯಮದ ಲಾಭ ಪಡೆದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಹಲ್ ಅವರನ್ನು ಕಣಕ್ಕಿಳಿಸಿ 11 ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಐಸಿಸಿ ಕನ್ಕಶನ್ ನಿಯಮ ಏನು, ಎತ್ತ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಕ್ಯಾನ್‌ಬೆರ್ರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ 11 ರನ್‌ಗಳ ರೋಚಕ ಜಯ ಸಾಧಿಸಿದೆ.
undefined
ಬ್ಯಾಟಿಂಗ್‌ನಲ್ಲಿ ಕೆ.ಎಲ್. ರಾಹುಲ್ ಆಕರ್ಷಕ ಅರ್ಧಶತಕ ಬಾರಿಸಿದರೆ, ಕೊನೆಯಲ್ಲಿ ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
undefined

Latest Videos


ಆದರೆ ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್ ಜಡೇಜಾ ಹೆಲ್ಮೆಟ್‌ಗೆ ಬಡಿಯಿತು. ಹೀಗಾಗಿ ಜಡ್ಡು ಗಾಯಕ್ಕೆ ತುತ್ತಾಗಿದ್ದರಿಂದ ಫೀಲ್ಡಿಂಗ್‌ ಮಾಡಲಿಳಿಯಲಿಲ್ಲ.
undefined
ಐಸಿಸಿಯ ನೂತನ ಕನ್ಕಶನ್ ನಿಯಮವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಟೀಂ ಇಂಡಿಯಾ ರವೀಂದ್ರ ಜಡೇಜಾ ಬದಲಿಗೆ ಸ್ಪಿನ್ ಅಸ್ತ್ರ ಯುಜುವೇಂದ್ರ ಚಹಲ್ ಅವರನ್ನು ಬದಲಿ ಆಟನಾರನಾಗಿ ಕಣಕ್ಕಿಳಿಸಿತು.
undefined
ಜಡೇಜಾ ಬದಲಿಗೆ ಚಹಲ್ ಅವರನ್ನು ಕನ್ಕಶನ್ ಆಟಗಾರನಾಗಿ ಕಣಕ್ಕಿಳಿಸುವ ನಿರ್ಧಾರಕ್ಕೆ ಅಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ವಿರೋಧ ವ್ಯಕ್ತಪಡಿಸಿದ್ದರು.
undefined
ಪರಿಸ್ಥಿತಿಯ ಲಾಭ ಪಡೆದ ಯುಜುವೇಂದ್ರ ಚಹಲ್ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೂ ಭಾಜನರಾದರು. ಈ ಮೂಲಕ ಬದಲಿ ಆಟಗಾರನಾಗಿ ಕಣಕ್ಕಿಳಿದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಚಹಲ್ ಪಾತ್ರರಾದರು.
undefined
ಹಾಗಿದ್ದರೆ ಏನಿದು ಐಸಿಸಿ ರೂಪಿಸಿದ ನೂತನ ಕನ್ಕಶನ್ ನಿಯಮ? ಮೊದಲ ಬಾರಿಗೆ ಬಳಕೆಯಾಗಿದ್ದು ಯಾವಾಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
undefined
2019ರಲ್ಲಿ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿಯಲ್ಲಿ ಕನ್ಕಶನ್ ನಿಯಮವನ್ನು ಮೊಟ್ಟಮೊದಲ ಬಾರಿಗೆ ಬಳಸಲಾಗಿತ್ತು.
undefined
ಇಂಗ್ಲೆಂಡ್ ಡೆಡ್ಲಿ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ತಲೆಗೆ ಬಡಿದಿತ್ತು. ಹೀಗಾಗಿ ಸ್ಮಿತ್ ಬದಲಿಗೆ ಮಾರ್ನಸ್ ಲಬುಶೇನ್ ಕಣಕ್ಕಿಳಿದಿದ್ದರು.
undefined
ಕನ್ಕಶನ್ ಸಬ್‌ಸ್ಟಿಟ್ಯೂಟ್‌ ಎಂದರೆ ಬ್ಯಾಟ್ಸ್‌ಮನ್ ತಲೆಗೆ ಹೊಡೆತಬಿದ್ದರೆ, ಗಂಭೀರ ಗಾಯವಾದರೆ ಆತನ ಬದಲಿಗೆ ಬೇರೆ ಆಟಗಾರನಿಗೆ ಮೈದಾನಕ್ಕಿಳಿಯಲು ಐಸಿಸಿ ಅವಕಾಶ ಮಾಡಿಕೊಟ್ಟಿದೆ.
undefined
ಆದರೆ ಬದಲಿ ಆಟಗಾರನಿಗೆ ಬೌಲಿಂಗ್ ಮಾಡಲು ಅವಕಾಶ ನೀಡುವುದು ಬಿಡುವುದು ಪಂದ್ಯದ ಮ್ಯಾಚ್ ರೆಫ್ರಿ ವಿವೇಚನೆಗೆ ಬಿಟ್ಟದ್ದು.
undefined
ಜಡೇಜಾ ಟೀಂ ಇಂಡಿಯಾ 5ನೇ ಸ್ಪಿನ್ನರ್ ಆಗಿದ್ದರಿಂದ ಅವರು ಹೊರಗುಳಿದಿದ್ದರಿಂದ ಅವರ ಬದಲಿಗೆ ರೆಫ್ರಿ ಡೇವಿಡ್ ಬೂನ್ ಟೀಂ ಇಂಡಿಯಾ ಮತ್ತೋರ್ವ ಸ್ಪಿನ್ನರ್‌ ಚಹಲ್‌ಗೆ ಬೌಲಿಂಗ್ ಮಾಡಲು ಅನುವು ಮಾಡಿಕೊಟ್ಟರು.
undefined
click me!