ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ

Published : Mar 05, 2026, 06:20 PM IST

ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ, ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಬದಲಾವಣೆ ಮಾಡಿದರೆ ಉತ್ತಮವೇ? ಯಾರಿಗೆ ಚಾನ್ಸ್, ಯಾರಿಗೆ ಕೊಕ್? 

PREV
14
ಟೀಂ ಇಂಡಿಯಾದಲ್ಲಿದೆಯಾ ಬದಲಾವಣೆ

ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಗೆದ್ದು ಸೆಮಿಫೈನಲ್ ಪ್ರವೇಶ ಮಾಡಿದ ಭಾರತ ಇದೀಗ ಫೈನಲ್ ಪ್ರವೇಶದ ವಿಶ್ವಾಸದಲ್ಲಿದೆ. ಆದರೆ ಟೀಂ ಇಂಡಿಯಾ ಕಾಂಬಿನೇಷನ್‌ನಲ್ಲಿ ಬದಲಾವಣೆ ಕುರಿತು ಬಾರಿ ಚರ್ಚೆಯಾಗುತ್ತಿದೆ.

24
ವಿನ್ನಿಂಗ್ ಕಾಂಬಿನೇಷನ್

ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಬದಲಾವಣೆ ಸಾಧ್ಯತೆ ಇಲ್ಲ. ವಿಂಡೀಸ್ ವಿರುದ್ದ ಕಣಕ್ಕಿಳಿದ ತಂಡವೇ ಇಂಗ್ಲೆಂಡ್ ವಿರುದ್ಧವೂ ಕಣಕ್ಕಿಳಿಯುವ ಸಾಧ್ಯತೆ ಇದೆ.

34
ಟೀಂ ಇಂಡಿಯಾ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ

44
ವಾಂಖೆಡೆ ಸವಾಲು

ವಾಂಖೆಡೆಯಲ್ಲಿ ಭಾರತ ಸವಾಲು ಎದುರಿಸಲಿದೆ. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ. ವಾಂಖೆಡೆಯಲ್ಲಿ ಇಬ್ಬನಿ ಪಂದ್ಯದ ಗತಿ ಬದಲಿಸಲಿದೆ. ಹೀಗಾಗಿ ಟಾಸ್ ಅತ್ಯಂತ ಮುಖ್ಯವಾಗಿದೆ. ಜೊತೆಗೆ ಬಲಿಷ್ಠ ಇಂಗ್ಲೆಂಡ್ ತಂಡದ ಸವಾಲು ಎದುರಾಗಲಿದೆ.

ವಾಂಖೆಡೆ ಸವಾಲು

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories