ಆಸೀಸ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; ಡಿಕೆಗೆ ಸಿಗಲಿದೆಯಾ ಸ್ಥಾನ?

First Published Sep 20, 2022, 2:53 PM IST

ಮೊಹಾಲಿ(ಸೆ.20): ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಮೊಹಾಲಿಯಲ್ಲಿ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ಟೀಂ ಇಂಡಿಯಾ, ಇಂದು ಬಲಿಷ್ಠ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಆಸೀಸ್‌ ಎದುರಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಕೆ ಎಲ್ ರಾಹುಲ್

ಗಾಯದ ಸಮಸ್ಯೆ ಬಳಿಕ ತಂಡ ಕೂಡಿಕೊಂಡಿರುವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆಸೀಸ್ ಎದುರಿನ ಸರಣಿಯು ರಾಹುಲ್ ಪಾಲಿಗೆ ಲಯಕ್ಕೆ ಬರಲು ಸುವರ್ಣಾವಕಾಶವಾಗಿದ್ದು, ಇದನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

2. ರೋಹಿತ್ ಶರ್ಮಾ

ನಾಯಕ ರೋಹಿತ್ ಶರ್ಮಾ, ಇದೀಗ ಫಾರ್ಮ್‌ಗೆ ಮರಳಿದ್ದು, ಬಲಿಷ್ಠ ಆಸ್ಟ್ರೇಲಿಯಾ ತಂಡದೆದುರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವುದರ ಜತೆಗೆ ಉತ್ತಮ ಆರಂಭ ಒದಗಿಸಿಕೊಡಬೇಕಾದ ಜವಾಬ್ದಾರಿ ಕೂಡಾ ಹಿಟ್‌ಮ್ಯಾನ್ ಮೇಲಿದೆ.

3. ವಿರಾಟ್ ಕೊಹ್ಲಿ

ಮಾಜಿ ನಾಯಕ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯಲ್ಲಿ ರನ್ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆಸ್ಟ್ರೇಲಿಯಾ ವಿರುದ್ದ ಕೂಡಾ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

4. ಸೂರ್ಯಕುಮಾರ್ ಯಾದವ್

ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲನಿಂತರೇ ಯಾವ ಗುರಿ ಕೂಡಾ ತಂಡಕ್ಕೆ ಸವಾಲಾಗುವುದೇ ಇಲ್ಲ. 
 

5. ಹಾರ್ದಿಕ್ ಪಾಂಡ್ಯ

ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಏಷ್ಯಾಕಪ್ ಟೂರ್ನಿಯ ಕೊನೆ ಎರಡು ಪಂದ್ಯಗಳಲ್ಲಿ ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ ಪಾಂಡ್ಯ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸುವ ಕ್ಷಮತೆಯಿದ್ದು, ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಲು ಎದುರು ನೋಡುತ್ತಿದ್ದಾರೆ.

6. ದಿನೇಶ್ ಕಾರ್ತಿಕ್

ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಪಂತ್, ಏಷ್ಯಾಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು.

7. ರವಿಚಂದ್ರನ್ ಅಶ್ವಿನ್‌

ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತ ನೆಲದಲ್ಲಿ ಉತ್ತಮ ಟ್ರ್ಯಾಕ್‌ ರೆಕಾರ್ಡ್ ಹೊಂದಿದ್ದು, ಅಕ್ಷರ್ ಪಟೇಲ್ ಹಿಂದಿಕ್ಕಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

8. ಭುವನೇಶ್ವರ್ ಕುಮಾರ್

ಅನುಭವಿ ಸ್ವಿಂಗ್ ಸ್ಪೆಷಲಿಸ್ಟ್‌ ಭುವನೇಶ್ವರ್ ಕುಮಾರ್, ಏಷ್ಯಾಕಪ್ ಟೂರ್ನಿಯ ಕೊನೆಯ ಪಂದ್ಯದಲ್ಲಿ ಆಫ್ಘಾನ್ ಎದುರು ಮಿಂಚಿನ ಪ್ರದರ್ಶನ ತೋರಿದ್ದರು. ಹೀಗಾಗಿ ಭುವಿ ಅದೇ ಲಯವನ್ನು ಆಸೀಸ್ ಎದುರು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

9. ಹರ್ಷಲ್ ಪಟೇಲ್

ಬಲಗೈ ವೇಗದ ಬೌಲರ್ ಹರ್ಷಲ್ ಪಟೇಲ್, ಗಾಯದ ಬಳಿಕ ಫಿಟ್ನೆಸ್‌ ಸಾಬೀತುಪಡಿಸಿದ್ದು, ಬಲಾಢ್ಯ ಆಸ್ಟ್ರೇಲಿಯಾ ಎದುರು ತಮ್ಮ ಬೌಲಿಂಗ್ ಕೌಶಲ್ಯ ಅನಾವರಣ ಎದುರು ನೋಡುತ್ತಿದ್ದಾರೆ.

10. ಯುಜುವೇಂದ್ರ ಚಹಲ್

ಯುವ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್, ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ವಿಕೆಟ್ ಕಬಳಿಸಲು ವಿಫಲವಾಗಿದ್ದರು. ಆದರೆ ಲಂಕಾ ಎದುರು 3 ವಿಕೆಟ್ ಕಬಳಿಸಿ ಮಿಂಚಿದ್ದರು. 

11. ಜಸ್ಪ್ರೀತ್ ಬುಮ್ರಾ

ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಕೂಡಾ ಫಿಟ್ನೆಸ್ ಸಮಸ್ಯೆಯಿಂದಾಗಿ, ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಲಿದ್ದಾರೆ.

click me!