IND V/S AUS ಟಿ20: ಮೊದಲ ಪಂದ್ಯಕ್ಕೆ ಮೊಹಾಲಿ ತಲುಪಿದ ಆಟಗಾರರು

Published : Sep 18, 2022, 05:19 PM IST

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ (IND V/S AUS) ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇದಕ್ಕಾಗಿ ಆಸ್ಟ್ರೇಲಿಯಾ ತಂಡ ಈಗಾಗಲೇ ಪಂಜಾಬ್‌ನ ಮೊಹಾಲಿ (Mohali) ತಲುಪಿದೆ. ಅದೇ ಸಮಯದಲ್ಲಿ, ಮೆನ್ ಇನ್ ಬ್ಲೂ ಕೂಡ ಮೊಹಾಲಿ ತಲುಪಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಸೆಪ್ಟೆಂಬರ್ 20 ಮಂಗಳವಾರ ನಡೆಯಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುವುದು ಕಂಡುಬಂತು. ನಾಯಕ ಆರನ್ ಫಿಂಚ್ ಸೇರಿ ಎಲ್ಲಾ ಆಟಗಾರರು ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಆಗಮನದ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಮಯದ ಫೋಟೋಗಳು ಇಲ್ಲಿವೆ.  

PREV
111
  IND V/S AUS ಟಿ20: ಮೊದಲ ಪಂದ್ಯಕ್ಕೆ ಮೊಹಾಲಿ ತಲುಪಿದ ಆಟಗಾರರು

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮೊಹಾಲಿ ತಲುಪಿದ್ದಾರೆ. ಈ ಹಿಂದೆ ಕೊಹ್ಲಿಯ ಹೊಸ ಹೇರ್ ಸ್ಟೈಲ್ (Hair Style) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿರಾಟ್ ಕೊಹ್ಲಿ ಇತ್ತೀಚೆಗೆ ಆಡಿದ ಏಷ್ಯಾ ಕಪ್‌ನಲ್ಲಿ (Asia Cup) ಅದ್ಭುತ ಶತಕ ಬಾರಿಸಿದ್ದಾರೆ.


 

211

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಪಂಜಾಬ್‌ನ ಮೊಹಾಲಿ ತಲುಪಿದ್ದಾರೆ. ಹಾರ್ದಿಕ್ ಪಾಂಡ್ಯ ಏಷ್ಯಾಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರೂ, ಉಳಿದ ಪಂದ್ಯಗಳಲ್ಲಿ ವಿಫಲರಾಗಿದ್ದರು. ಅವರಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.


 

311

ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನವು (Career) ಏರಿಳಿತಗಳಿಂದ ಕೂಡಿದೆ. ಆ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ವತಃ ಅತ್ಯುತ್ತಮ ಕೀಪಿಂಗ್ ಮಾಡುತ್ತಿದ್ದಾಗ ಅವರು ಭಾರತ ತಂಡದಲ್ಲಿ ವಿಕೆಟ್ ಕೀಪಿಂಗ್‌ಗೆ ಆಯ್ಕೆಯಾದರು. ಆದರೆ, ಈಗ ಕಾರ್ತಿಕ್ ಅವರನ್ನು ಭಾರತ ತಂಡದ ಸ್ಟಾರ್ ಫಿನಿಶರ್ ಎಂದು ಕರೆಯಲಾಗುತ್ತಿದೆ.


 

411

ಟೀಂ ಇಂಡಿಯಾ ಪರ ಮಾರಕ ಬೌಲರ್ ಆಗಿದ್ದ ಜಸ್ಪ್ರೀತ್ ಬುಮ್ರಾ ಫಿಟ್ ಆಗಿ, ತಂಡಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಬುಮ್ರಾಗೆ ಈ ಸರಣಿ ಅಭ್ಯಾಸ ಪಂದ್ಯದಂತಿದೆ. ಅಲ್ಲಿ ಅವರು ತಮ್ಮ ಲಯವನ್ನು ಕಂಡುಹಿಡಿಯಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ.
 

511

ಮೊದಲ ಟಿ20 ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಮೊಹಾಲಿ ಮೈದಾನದಲ್ಲಿ ಬೆವರು ಸುರಿಸುತ್ತಿದೆ. ಉಭಯ ದೇಶಗಳ ತಾಪಮಾನ ಮತ್ತು ವಾತಾವರಣದಲ್ಲಿ ಸಾಕಷ್ಟು ವ್ಯತ್ಯಾಸವಿರುವುದರಿಂದ ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ತಂಡದ ಆಟಗಾರರು ಶತಪ್ರಯತ್ನ ಮಾಡುತ್ತಿದ್ದಾರೆ.

611

 ಇದರ ನಂತರ ಟಿ20 ವಿಶ್ವಕಪ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಬಲ ಸ್ಪರ್ಧಿಯಾಗಿದೆ. ಏಕೆಂದರೆ ಈ ಪಂದ್ಯಾವಳಿಯು ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿದೆ. ಆಸ್ಟ್ರೇಲಿಯದ ಆಟಗಾರರಿಗೆ ಅಲ್ಲಿನ ಪಿಚ್ ಬಗ್ಗೆ ಅರಿವಿದ್ದು, ತವರು ಮೈದಾನದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಇದರೊಂದಿಗೆ ಪ್ರೇಕ್ಷಕರ ಸಂಪೂರ್ಣ ಬೆಂಬಲವೂ ದೊರೆಯಲಿದೆ.

711

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ರಾಹುಲ್ ದ್ರಾವಿಡ್ ವಿಶೇಷವಾದದ್ದೇನೂ ಮಾಡಿಲ್ಲ. ಏಷ್ಯಾಕಪ್ ನಂತರವೇ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಲು ಇದೇ ಕಾರಣವಾಗಿತ್ತು. ಅದೇ ವೇಳೆ ಟಿ20 ವಿಶ್ವಕಪ್‌ನಲ್ಲಿ ತಮ್ಮ ತಂಡದ ಪ್ರದರ್ಶನ ಸುಧಾರಿಸದಿದ್ದರೆ ವಿವಾದ ಹೆಚ್ಚಾಗಬಹುದು.


 

811

ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಇತ್ತೀಚೆಗೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಆದಾಗ್ಯೂ, ಅವರು T20 ತಂಡದ ಭಾಗವಾಗಿದ್ದಾರೆ ಮತ್ತು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು ಪ್ರಯತ್ನಿಸುವ ನಿರೀಕ್ಷೆಯಿದೆ.


 

911

ವೇಗದ ಬೌಲರ್ ಹಾಗೂ ಆಲ್ ರೌಂಡರ್ ಹರ್ಷಲ್ ಪಟೇಲ್ ಟೀಂ ಇಂಡಿಯಾಗೆ ಮರಳಿದ್ದಾರೆ. ಟಿ20 ವಿಶ್ವಕಪ್‌ಗೂ ಆಯ್ಕೆಯಾಗಿದ್ದಾರೆ. ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳುತ್ತಿರುವ ಹರ್ಷಲ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಪರೀಕ್ಷೆಗೆ ಒಳಗಾಗಲಿದ್ದಾರೆ.


 

1011

ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರು ತಮ್ಮ  ಪರ್ಸನಲ್‌ ಲೈಫ್‌ (Personal Life) ಕಾರಣದಿಂದ ಸುದ್ದಿಯಲ್ಲಿದ್ದಾರೆ. ಆದರೆ, ಏಷ್ಯಾಕಪ್‌ನಲ್ಲಿ ಅವರ ಪ್ರದರ್ಶನದಲ್ಲಿ ವಿಶೇಷವೇನು ಇರಲಿಲ್ಲ. ಆದ್ದರಿಂದಲೇ ಈ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ತೋರಲು ತಂಡ ಬಯಸಿದೆ.

1111

ಭಾರತ ಮತ್ತು ಆಸ್ಟ್ರೇಲಿಯಾ (IND V/S AUS) ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಸೆಪ್ಟೆಂಬರ್ 20 ಮಂಗಳವಾರ  ಪಂಜಾಬ್‌ನ ಮೊಹಾಲಿಯಲ್ಲಿ ನಡೆಯಲಿದೆ.

Read more Photos on
click me!

Recommended Stories