ವಿರಾಟ್ ಕೊಹ್ಲಿಯನ್ನು ನೋಡಿ ನೀವು ಕಲಿಯಬೇಕಾದ ಜೀವನ ಪಾಠಗಳಿವು; ಕುತೂಹಲಕಾರಿ ಸಂಗತಿ ಇಲ್ಲಿವೆ

Published : Sep 14, 2024, 04:40 PM IST

ಬೆಂಗಳೂರು: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕಳೆದ ಒಂದೂವರೆ ದಶಕದಿಂದ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಕೊಹ್ಲಿಯಿಂದ ನಾವು ಕಲಿಯಬಹುದಾದ ಜೀವನಪಾಠಗಳೇನು ಎನ್ನುವುದನ್ನು ನೋಡೋಣ ಬನ್ನಿ  

PREV
112
ವಿರಾಟ್ ಕೊಹ್ಲಿಯನ್ನು ನೋಡಿ ನೀವು ಕಲಿಯಬೇಕಾದ ಜೀವನ ಪಾಠಗಳಿವು; ಕುತೂಹಲಕಾರಿ ಸಂಗತಿ ಇಲ್ಲಿವೆ

ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವಧಿಯಲ್ಲಿ ಕ್ರಿಕೆಟ್ ವೃತ್ತಿ ಬದುಕು ಆರಂಭಿಸಿದ ವಿರಾಟ್ ಕೊಹ್ಲಿ, ಆರಂಭದಲ್ಲಿ ಏರಿಳಿತಗಳನ್ನು, ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.

212

ಕೆಲ ತಿಂಗಳ ಹಿಂದಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸಿಡಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಟ್ರೋಫಿ ಗೆದ್ದ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದರು.

312

ಹೀಗಿರುವಾಗ, ಪ್ರತಿಯೊಬ್ಬ ಯುವಕರಿಗೂ ರೋಲ್ ಮಾಡೆಲ್ ಆಗಿರುವ ವಿರಾಟ್ ಕೊಹ್ಲಿಯ ಕ್ರಿಕೆಟ್ ಜೀವನದಿಂದ ಕಲಿಯಬಹುದಾದ ಪಾಠಗಳು ಹಲವಾರು. ಅವುಗಳಲ್ಲಿ ಕೆಲವನ್ನು ನೋಡೋಣ ಬನ್ನಿ.

412
ಜೀವನ ನೀಡುವ ಅವಕಾಶವನ್ನು ಗೌರವಿಸಬೇಕು:

2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆದ್ದ ನಂತರ ವಿರಾಟ್ ಕೊಹ್ಲಿ, ಯಾರು ಅವಕಾಶಕ್ಕೆ ಬೆಲೆ ಕೊಡುತ್ತಾರೋ ಅವರು ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಅನ್ನು ಕೊಹ್ಲಿ ಗೆದ್ದಿದ್ದರು.

512

ಐಪಿಎಲ್‌ನಲ್ಲಿ ಅಬ್ಬರದ ಫಾರ್ಮ್‌ನಲ್ಲಿದ್ದ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ, ಫೈನಲ್‌ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಕೊಹ್ಲಿ ಸಿಡಿಸಿದ 76 ರನ್‌ಗಳು ಪ್ರಮುಖ ಪಾತ್ರ ವಹಿಸಿದವು. ಈ ಟೂರ್ನಿಯಲ್ಲಿ ಕೊಹ್ಲಿ ಒಟ್ಟು 156 ರನ್ ಗಳಿಸಿದ್ದರು.

612
ದೇವರ ಯೋಜನೆ:

ಪ್ರತಿಯೊಬ್ಬರಿಗೂ ದೇವರು ಒಂದೊಂದು ರೀತಿಯ ಯೋಜನೆ ಹಾಕಿಕೊಂಡಿರುತ್ತಾನೆ. ದೇವರ ಯೋಜನೆಯನ್ನು ನಂಬಬೇಕು. ಕೊಹ್ಲಿಯ ಕ್ರಿಕೆಟ್ ಜೀವನ ಸಾಧನೆಗಳಿಂದ ತುಂಬಿದೆ. 2008ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿ ಎಲ್ಲರ ಗಮನ ಸೆಳೆದರು. 2011ರ ವಿಶ್ವಕಪ್‌ನಲ್ಲಿ ಸಚಿನ್ ಮತ್ತು ಯುವರಾಜ್ ಸಿಂಗ್ ಜೊತೆ ಸೇರಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

712

2011ರ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ತಾವಾಡಿದ ಮೊದಲ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡಿದ್ದರು. 

812

ಇಷ್ಟೇ ಅಲ್ಲ, 2013ರಲ್ಲಿ ಧೋನಿ ನಾಯಕತ್ವದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲೂ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಒಮ್ಮೆ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

912
ಶ್ರಮಪಟ್ಟು ಮುಂದೆ ಬರಬೇಕು:

ಪ್ರತಿ ಬಾರಿ ನಾನು ಕಳಪೆ ಫಾರ್ಮ್‌ಗೆ ಸಿಲುಕಿದಾಗ, ನಾನು ಇನ್ನಷ್ಟು ಶ್ರಮಪಟ್ಟು ಮತ್ತೆ ಮೇಲೆ ಬರುತ್ತೇನೆ ಎಂದು ಆನ್‌ಲೈನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕೊರೋನಾ ಸಮಯದಲ್ಲಿ ಕೊಹ್ಲಿ ಕಠಿಣ ಪರಿಸ್ಥಿತಿ ಎದುರಿಸಿದ್ದರು. ಆ ಸಮಯದಲ್ಲಿ ಅಂತಾರಾಷ್ಟ್ರೀಯ ಶತಕಕ್ಕಾಗಿ ಸರಿಸುಮಾರು ಎರಡು ವರ್ಷ ಕಾದಿದ್ದರು.

1012

2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 159 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಬೆಂಬಲದೊಂದಿಗೆ 82 ರನ್ ಗಳಿಸಿ ಭಾರತ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

1112
ರಿಸ್ಕ್ ತೆಗೆದುಕೊಳ್ಳಬೇಕು:

ರಿಸ್ಕ್ ತೆಗೆದುಕೊಳ್ಳದೆ ಏನೂ ಸಾಧ್ಯವಿಲ್ಲ. ಸುರಕ್ಷಿತ ಆಯ್ಕೆ ಎಂಬುದೇ ಇಲ್ಲ. ಜೀವನದಲ್ಲಿ ಯಾವುದೂ ಸುರಕ್ಷಿತವಲ್ಲ. ಹಾಗಾಗಿ, ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಮುಖ್ಯ ಇದು ವಿರಾಟ್ ಹೇಳಿದ ಜೀವನಪಾಠ.

1212
ಬೆಳಗಾಗುವ ಮುನ್ನ ರಾತ್ರಿ ಕತ್ತಲೆಯಾಗಿರುತ್ತದೆ:

2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಕಡಿಮೆ ರನ್‌ಗಳಿಗೆ ಔಟಾಗಿದ್ದರು. ಇದರಿಂದ ಅವರನ್ನು ತಂಡದಿಂದ ಕೈಬಿಡಬೇಕು ಎಂಬ ಟೀಕೆಗಳು ಕೇಳಿಬಂದವು. ಆದರೆ, ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಫೈನಲ್‌ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ 76 ರನ್‌ಗಳು ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿ ಟ್ರೋಫಿ ಗೆಲ್ಲಲು ಕಾರಣವಾಯಿತು.

Read more Photos on
click me!

Recommended Stories