#PMCARES ಫಂಡ್‌ಗೆ 80 ಲಕ್ಷ ರುಪಾಯಿ ದೇಣಿಗೆ ನೀಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

Suvarna News   | Asianet News
Published : Mar 31, 2020, 02:34 PM ISTUpdated : Mar 31, 2020, 03:05 PM IST

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಟೀಂ ಇಂಡಿಯಾ ಉಪನಾಯಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪ್ರಧಾನಿ ಕರೆಗೆ ಕೈಜೋಡಿಸಿದ್ದಾರೆ.ರೋಹಿತ್ ಶರ್ಮಾ 80 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ಥರ ಪಾಲಿಗೆ ನೆರವಾಗಿದ್ದಾರೆ. ಈಗಾಗಲೇ ಹಲವು ಕ್ರೀಡಾ ತಾರೆಯರು ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಬಿಸಿಸಿಐ 51 ಕೋಟಿ ರುಪಾಯಿ ದೇಣಿಗೆ ನೀಡಿದ್ದರೆ, ಸಚಿನ್ ತೆಂಡುಲ್ಕರ್, ಸುರೇಶ್ ರೈನಾ ಸೇರಿದಂತೆ ಹಲವು ಕ್ರಿಕೆಟಿಗರು ಲಕ್ಷಗಟ್ಟಲೆ ಹಣವನ್ನು ಪ್ರಧಾನಿ ಕೇರ್ಸ್  ಫಂಡ್‌ಗೆ ಜಮಾ ಮಾಡಿದ್ದಾರೆ. ಇದೀಗ ರೋಹಿತ್ ಶರ್ಮಾ ಬರೋಬ್ಬರಿ 80 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಕೊರೋನಾ ಸಂತ್ರಸ್ಥರಿಗೆ ಬಲ ತುಂಬುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ದೇಣಿಗೆ ನೀಡುವಲ್ಲೂ ರೋಹಿತ್ ಆದರ್ಶ ಪ್ರಾಯರಾಗಿದ್ದು ವಿವೇಚನಯುತವಾಗಿ ದೇಣಿಗೆ ನೀಡಿದ್ದಾರೆ. 

PREV
111
#PMCARES ಫಂಡ್‌ಗೆ 80 ಲಕ್ಷ ರುಪಾಯಿ ದೇಣಿಗೆ ನೀಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ
80 ಲಕ್ಷಗಳ ಪೈಕಿ #PMCaresFundsಗೆ 45 ಲಕ್ಷ ರುಪಾಯಿ ನೀಡಿದ ಹಿಟ್‌ಮ್ಯಾನ್

211
ಇನ್ನು 25 ಲಕ್ಷ ರುಪಾಯಿಗಳನ್ನು #CMReliefFund Maharashtra ನೀಡಿದ ಮುಂಬೈ ಇಂಡಿಯನ್ಸ್ ನಾಯಕ

311
ಹಸಿವು ನೀಗಿಸುವ ಸರ್ಕಾರೇತರ ಸಂಸ್ಥೆಯಾದ ಫೀಡಿಂಗ್ ಇಂಡಿಯಾ ಸಂಸ್ಥೆಗೆ 5 ಲಕ್ಷ ರುಪಾಯಿ ನೀಡಿದ ರೋಹಿತ್

411
ಜೊಮ್ಯಾಟೋ ಫೀಡಿಂಗ್ ಇಂಡಿಯಾ ಹಸಿವಿನಿಂದ ಬಳಲುತ್ತಿರುವ ಅರ್ಹ ವ್ಯಕ್ತಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ.

511
ಹಸಿವು ಮುಕ್ತ ಭಾರತ ನಿರ್ಮಿಸುವ ಉದ್ಧೇಶ ಇಟ್ಟುಕೊಂಡು ಜೊಮ್ಯಾಟೊ ಫೀಡಿಂಗ್ ಇಂಡಿಯಾ ಕಾರ್ಯ ನಿರ್ವಹಿಸುತ್ತಿದೆ

611
ದಾನ ನೀಡುವ ವಿಚಾರದಲ್ಲಿ ಮೂಕ ಪ್ರಾಣಿಗಳನ್ನು ಮರೆಯದ ರೋಹಿತ್ ಶರ್ಮಾ

711
ಇನ್ನುಳಿದಂತೆ ಬೀದಿನಾಯಿಗಳ ಅಭಿವೃದ್ಧಿಗೆ #WelfareOfStrayDogs 5 ಲಕ್ಷ ರುಪಾಯಿ ನೀಡಿದ ಟೀಂ ಇಂಡಿಯಾ ಆರಂಭಿಕ

811
ದೇಶದ ಜನರ ಜೀವನ ಸಹಜಸ್ಥಿತಿಗೆ ಬರಲಿ ಆಮೇಲೆ ಐಪಿಎಲ್ ಬಗ್ಗೆ ಯೋಚಿಸೋಣ ಎಂದಿದ್ದ ಹಿಟ್‌ಮ್ಯಾನ್

911
ಈಗಾಗಲೇ ಸುರೇಶ್ ರೈನಾ 52 ಲಕ್ಷ ರುಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ

1011
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 50 ಲಕ್ಷ ರುಪಾಯಿಗಳನ್ನು ತುರ್ತು ಪರಿಹಾರ ದೇಣಿಗೆಯಾಗಿ ನೀಡಿದ್ದಾರೆ

1111
ಫುಟ್ಬಾಲ್ ಲೆಜೆಂಡ್ ಬೈಚುಂಗ್ ಭುಟಿಯಾ ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ

click me!

Recommended Stories