ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಡುವಿನ ಬೀದಿ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದಲೂ ಈ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡಿಕೊಳ್ಳುತ್ತಿದ್ದು, ಇದೀಗ ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮತ್ತೆ ಬಾಲಿವುಡ್ ನಟಿಯನ್ನು ಕಾಲೆಳೆಯುವ ಮೂಲಕ ಸೋಷಿಯಲ್ ಮೀಡಿಯಾ ರಂಪಾಟ ಮುಂದುವರೆಸಿದ್ದಾರೆ.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಡುವಿನ ಕೋಲ್ಡ್ವಾರ್ ಮತ್ತಷ್ಟು ತಾರಕಕ್ಕೇರಿದೆ. ರೌಟೇಲಾ ಸಂದರ್ಶನವೊಂದರಲ್ಲಿ ಪಂತ್ ಬಗ್ಗೆ ಮಾತಾಡಿ ವಿವಾದ ಎಬ್ಬಿಸಿದ್ರು. ಇಲ್ಲಿಂದ ಇಬ್ಬರ ನಡುವೆ ಸೋಷಿಯಲ್ ಮೀಡಿಯಾ ವಾರ್ ಆರಂಭವಾಗಿದೆ.
26
ಊರ್ವಶಿ ರೌಟೇಲಾ, ಟಿವಿ ಸಂದರ್ಶನವೊಂದರಲ್ಲಿ ತಮ್ಮ ಹಿಂದೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅಲೆಯುತ್ತಿದ್ರು. ಇನ್ನಿಲ್ಲದ ಹಾಗೆ ಕಾಡಿದ್ರು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು.
36
Image credit: Wikimedia Commons
ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮಾಧ್ಯಮಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ರಿಷಭ್ ಪಂತ್ ಪ್ರತಿಕ್ರಿಯೆ ಏನು ನೀಡಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು.
46
ರಿಷಭ್ ಪಂತ್ ಈ ಬಗ್ಗೆ, ಜನ ಪುಕ್ಕಟೆ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನನ್ನ ಬಿಟ್ಟು ಬಿಡು ಅಕ್ಕಾ ಎಂದು ಪೋಸ್ಟ್ ಹಾಕಿ, ಬಳಿಕ ಅದನ್ನ ಡಿಲೀಟ್ ಮಾಡಿದ್ರು.
56
ಇದು ಊರ್ವಶಿಯನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿತ್ತು. ತಮ್ಮ ಬ್ಯಾಟ್ ಬಾಲ್ ಅಷ್ಟೇ ಆಡಬೇಕು. ನಾನೇನು ಮುನ್ನಿ ಅಲ್ಲ. ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು ಹಾಳಾಗಲು. ರಕ್ಷಾ ಬಂಧನದ ಶುಭಾಶಯಗಳು ಆರ್ಪಿ ತಮ್ಮ. ಒಬ್ಬಂಟಿ ಹುಡುಗಿಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಪಂತ್‌ಗೆ ತಿರುಗೇಟು ನೀಡಿದ್ದರು.
66
Rishabh Pant
ಇದೀಗ ಮತ್ತೆ ರಿಷಭ್ ಪಂತ್, ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲವೋ ಅದರ ಕುರಿತಂತೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂದು ಇನ್‌ಸ್ಟಾ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಲೆಫ್ಟಿ ಊರ್ವಶಿಯ ಕಾಲೆಳೆದಿದ್ದಾರೆ.