Asia Cup 2022: ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡ್‌ನ ಈ 3 ರೆಕಾರ್ಡ್ಸ್‌ ಧೂಳೀಪಟವಾಗೋದು ಗ್ಯಾರಂಟಿ..!

First Published | Aug 14, 2022, 1:24 PM IST

ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಆಗಸ್ಟ್‌ 27ರಿಮದ ಸೆಪ್ಟೆಂಬರ್ 11ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಒಟ್ಟು 6 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಈ ಮೂರು ದಾಖಲೆಗಳು ಧೂಳೀಪಟವಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...
 

Asia Cup 2018

2016 ಹಾಗೂ 2018ರಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಟೀಂ ಇಂಡಿಯಾ, ಇದೀಗ ಹ್ಯಾಟ್ರಿಕ್‌ ಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ.  ಇದೀಗ ಎಲ್ಲರ ಚಿತ್ತ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೇಲೆ ನೆಟ್ಟಿದೆ.

ಇದೇ ವೇಳೆ ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿರುವ ಮೂರು ಅಪರೂಪದ ದಾಖಲೆಗಳು ಧೂಳೀಪಟವಾಗು ಸಾಧ್ಯತೆಯಿದೆ.
 

Tap to resize

1. ಅಪಾಯದಲ್ಲಿದೆ ಏಷ್ಯಾಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಜಯಸೂರ್ಯ ದಾಖಲೆ

ಶ್ರೀಲಂಕಾದ ಸ್ಪೋಟಕ ಬ್ಯಾಟರ್ ಎನಿಸಿಕೊಂಡಿದ್ದ ಸನತ್ ಜಯಸೂರ್ಯ, ಏಷ್ಯಾಕಪ್ ಕ್ರಿಕೆಟ್‌ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜಯಸೂರ್ಯ, 1990ರಿಂದ 2008ರ ವರೆಗೆ 25 ಏಷ್ಯಾಕಪ್‌ ಪಂದ್ಯಗಳನ್ನಾಡಿ 1,220 ರನ್ ಬಾರಿಸಿದ್ದಾರೆ.

ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ, ಈ ದಾಖಲೆ ಮುರಿಯುವ ಸಾಧ್ಯತೆಯಿದೆ. ರೋಹಿತ್ ಶರ್ಮಾ 883 ರನ್ ಬಾರಿಸಿದ್ದರೇ, ವಿರಾಟ್ ಕೊಹ್ಲಿ 766 ರನ್ ಬಾರಿಸಿದ್ದಾರೆ. ಒಂದು ವೇಳೆ ಈ ಇಬ್ಬರು ಆಟಗಾರರು ಫಾರ್ಮ್‌ಗೆ ಮರಳಿದರೇ ಜಯಸೂರ್ಯ ದಾಖಲೆ ಅಳಿಸಿ ಹೋಗುವುದರಲ್ಲಿ ಅನುಮಾನವೇ ಇಲ್ಲ.
 

2. ಲಸಿತ್ ಮಾಲಿಂಗ ಗರಿಷ್ಠ ವಿಕೆಟ್‌ ದಾಖಲೆ ಮುರಿತಾರಾ ಶಕೀಬ್, ಜಡ್ಡು..?

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್ ಎನ್ನುವ ಕೀರ್ತಿ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಮಾಲಿಂಗ ಏಷ್ಯಾಕಪ್ ಟೂರ್ನಿಯಲ್ಲಿ 33 ವಿಕೆಟ್‌ ಕಬಳಿಸುವ ಮೂಲಕ, ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಇದೀಗ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, 2010ರಿಂದ 2018ರ ಅವಧಿಯಲ್ಲಿ ಒಟ್ಟು 24 ವಿಕೆಟ್ ಕಬಳಿಸಿದ್ದಾರೆ. ಇನ್ನು 10 ವಿಕೆಟ್ ಕಬಳಿಸಿದರೇ ಶಕೀಬ್, ಮಾಲಿಂಗ ದಾಖಲೆ ಮುರಿಯಲಿದ್ದಾರೆ.

ಇನ್ನು ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಟ್‌ ಕಬಳಿಸುವ ರೇಸ್‌ನಿಂದ ಹಿಂದೆ ಬಿದ್ದಿಲ್ಲ. ಜಡೇಜಾ 2010ರಿಂದ 2018ರ ಅವಧಿಯಲ್ಲಿ ಒಟ್ಟು 22 ವಿಕೆಟ್ ಉರುಳಿಸಿದ್ದು, ಈ ಬಾರಿ ಮಾಲಿಂಗ ದಾಖಲೆ ಮುರಿದರೇ ಅಚ್ಚರಿಯೇನಿಲ್ಲ.
 

3. ಅಫ್ರಿದಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಶಕೀಬ್ ಅಲ್ ಹಸನ್‌

ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ, ಶಾಹಿದ್ ಅಫ್ರಿದಿ 300+ ರನ್ ಹಾಗೂ 15ಕ್ಕೂ ಅಧಿಕ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಗರಿಷ್ಠ ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಶಕೀಬ್ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.
 

sanath jayasuriya

ಆದರೆ ಬ್ಯಾಟಿಂಗ್‌ನಲ್ಲಿ ದಿಗ್ಗಜ ಕ್ರಿಕೆಟಿಗರಾದ ಸನತ್ ಜಯಸೂರ್ಯ ಹಾಗೂ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿಯುವುದು ಸುಲಭದ ಮಾತಲ್ಲ. ಏಷ್ಯಾಕಪ್‌ನಲ್ಲಿ ಜಯಸೂರ್ಯ(1220 ರನ್) ಹಾಗೂ ಸಚಿನ್ ತೆಂಡುಲ್ಕರ್(971 ರನ್) ಬಾರಿಸಿದ್ದಾರೆ.

ಸದ್ಯ ಶಕೀಬ್ ಅಲ್‌ ಹಸನ್ ಏಷ್ಯಾಕಪ್‌ನಲ್ಲಿ 402 ರನ್‌ ಬಾರಿಸಿದ್ದು, ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ(532 ರನ್) ಹೆಸರಿನಲ್ಲಿರುವ ದಾಖಲೆಯನ್ನು ಅಳಿಸಿಹಾಕುವ ಸಾಧ್ಯತೆಯಿದೆ.

Latest Videos

click me!