2009ರಿಂದ ಸತತ 11 ವರ್ಷ ಮಾಡಿದ್ದ ಸಾಧನೆ 2020ರಲ್ಲಿ ಕೊಹ್ಲಿಗೇ ಆಗಲೇ ಇಲ್ಲ!

First Published Dec 19, 2020, 5:47 PM IST

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಟೀಂ ಇಂಡಿಯಾ ಸೋಲು ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಟೀಕೆಗಳು ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ 2ನೇ ಇನ್ನಿಂಗ್ಸ್‌ನಲ್ಲಿ ಅತ್ಯಲ್ಪ ಮೊತ್ತ ದಾಖಲಿಸಿದ ಸೇರಿದಂತೆ ಹಲವು ಅನಗತ್ಯ ದಾಖಲೆಗಳನ್ನು ಟೀಂ ಇಂಡಿಯಾ ಮಾಡಿದೆ. ಇದರ ಜೊತೆಗೆ ಕೊಹ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಪ್ರತಿ ವರ್ಷ ಸಾಧನೆ ಮಾಡಿದ್ದಾರೆ, ಆದರೆ 2020ರಲ್ಲಿ ಈ ಸಾಧನೆ ಮಾಡಲು ಕೊಹ್ಲಿಗೆ ಸಾಧ್ಯವಾಗಿಲ್ಲ.

ಆಸ್ಟ್ರೇಲಿಯಾ ವಿರುದ್ದದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಸೋಲು ಕಂಡಿದೆ. ಈ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 36 ರನ್ ಸಿಡಿಸಿ ಸೋಲಿಗೆ ಮುನ್ನುಡಿ ಬರೆದಿತ್ತು.
undefined
2020ರ ವರ್ಷ ಬಹುತೇಕರಿಗೆ ಸಂಕಷ್ಟದ ವರ್ಷವಾಗಿದೆ. ಕೊರೋನಾ ವೈರಸ್, ಆರ್ಥಿಕ ಹೊಡೆತ, ಕ್ರೀಡಾ ಚಟುವಟಿಕೆ-ಕ್ರಿಕೆಟ್ ಸ್ಥಗಿತ ಸೇರಿದಂತೆ ಎಲ್ಲವೂ ನಷ್ಟ. ವಿರಾಟ್ ಕೊಹ್ಲಿಗೂ ಈ ವರ್ಷ ತಮ್ಮ ಕರಿಯರ್ ದೃಷ್ಟಿಂದ ಹೆಚ್ಚಿನ ಸಂತಸ ನೀಡಿಲ್ಲ
undefined
ವಿರಾಟ್ ಕೊಹ್ಲಿ ಪಾದಾರ್ಪಣೆ ಮಾಡಿದ ಬಳಿಕ ಪ್ರತಿ ವರ್ಷ ಯಾವುದಾದರೊಂದು ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ. ಆದರೆ 2020ನೇ ವರ್ಷದಲ್ಲಿ ಕೊಹ್ಲಿಗೆ ಸೆಂಚುರಿ ಸಿಡಿಸಿ ಸಂಭ್ರಮಿಸುವ ಭಾಗ್ಯ ಸಿಕ್ಕಿಲ್ಲ.
undefined
2009ರಲ್ಲಿ ವಿರಾಟ್ ಕೊಹ್ಲಿ ಮೊದಲ ಅಂತಾರಾಷ್ಟ್ರೀಯ ಸೆಂಚುರಿ ಸಿಡಿಸಿದ್ದಾರೆ. ಬಳಿಕ ಪ್ರತಿ ವರ್ಷವೂ ಸೆಂಚುರಿ ಸಂಖ್ಯೆ ಹೆಚ್ಚಾಯಿತೇ ಹೊರತು ಕಡಿಮೆಯಾಗಿಲ್ಲ. ಆದರೆ 2020ರಲ್ಲಿ ಇದುವರೆಗೆ ಒಂದೇ ಒಂದು ಸೆಂಚುರಿ ದಾಖಲಾಗಿಲ್ಲ,
undefined
2009ರಲ್ಲಿ 1 ಸೆಂಚುರಿ ಸಿಡಿಸಿದ ಕೊಹ್ಲಿ, 2010ರಲ್ಲಿ 3, 2011ರಲ್ಲಿ 4 ಸೆಂಚುರಿ, 2012ರಲ್ಲಿ 8 ಸೆಂಚುರಿ, 2013ರಲ್ಲಿ 6 ಸೆಂಚುರಿ ದಾಖಲಿಸಿದ್ದಾರೆ.
undefined
ವಿರಾಟ್ ಕೊಹ್ಲಿ 2014ರಲ್ಲಿ 8 ಶತಕ ಭಾರಿಸಿದ್ದಾರೆ. ಇನ್ನು 2015ರಲ್ಲಿ 4 ಶತಕ ಸಿಡಿಸಿದರೆ, 2016ರಲ್ಲಿ 7 ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
undefined
2017 ಮತ್ತು 2018ರಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ಶತಕ ಸಿಡಿಸಿದ್ದಾರೆ. 2017ರಲ್ಲಿ 11 ಶತಕ ಹಾಗೂ 2018ರಲ್ಲಿ 11 ಶತಕ ಸಿಡಿಸಿದ್ದಾರೆ. ಈ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ
undefined
2019ರಲ್ಲಿ ವಿರಾಟ್ ಕೊಹ್ಲಿ ಮೂರು ಮಾದರಿಯಿಂದ 44 ಪಂದ್ಯ ಆಡೋ ಮೂಲಕ 7 ಶತಕ ದಾಖಲಿಸಿದ್ದಾರೆ. ಆದರೆ 2020ರಲ್ಲಿ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿ ಒಟ್ಟು 21 ಪಂದ್ಯ ಆಡಿದ್ದಾರೆ. ಆದರೆ ಒಂದೂ ಶತಕ ದಾಖಲಾಗಿಲ್ಲ.
undefined
ಆಸ್ಟೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಆರಂಭಗೊಳ್ಳುತ್ತಿದೆ. ಆದರೆ ವಿರಾಟ್ ಕೊಹ್ಲಿ ತವರಿಗೆ ವಾಪಾಸ್ಸುಗುತ್ತಿರುವ ಕಾರಣ ಈ ವರ್ಷ ಸೆಂಚುರಿ ಇಲ್ಲದೆ ಕಳೆಯಬೇಕಿದೆ.
undefined
click me!