ಧೋನಿ ಅನ್‌ಟೋಲ್ಡ್ ಸ್ಟೋರಿ ಹೇಳಿ ತನ್ನ ಕತೆ ಯಾರಿಗೂ ಹೇಳದೆ ಹೋದ ಸುಶಾಂತ್ !

First Published | Jun 14, 2020, 5:37 PM IST

 ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿದೆ. 34ರ ಹರೆಯದ ಪ್ರತಿಭಾವಂತ ನಟ ಈ ರೀತಿ ಬದುಕಿನ ಪಯಣ ಮುಗಿಸಿ, ಅಭಿಮಾನಿಗಳನ್ನು ಶೋಕಸಾಗರಲ್ಲಿ ಮುಳುಗಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಕುರಿತ ಜೀವನಚರಿತ್ರೆಯಲ್ಲಿ ಸುಶಾಂತ್ ಅದ್ಭುತ ಅಭಿಯನಕ್ಕೆ ಸ್ವತಃ ಧೋನಿಯೇ ದಂಗಾದಿದ್ದರು. ಧೋನಿಯ ಬ್ಯಾಟಿಂಗ್, ವಾಕಿಂಗ್ ಸೇರಿದಂತೆ ಎಲ್ಲಾ ಶೈಲಿಯನ್ನು ನಕಲು ಮಾಡಿದ್ದ ಸುಶಾಂತ್, ಬಾಲಿವುಡ್‌ನಲ್ಲೂ ಯಶಸ್ವಿಯಾಗಿದ್ದರು. ಧೋನಿ ಚಿತ್ರಕ್ಕಾಗಿ ಸುಶಾಂತ್ ಬರೋಬ್ಬರಿ 1 ವರ್ಷ ಕ್ರಿಕೆಟ್ ಅಭ್ಯಾಸ ಮಾಡಿದ್ದರು. ಸ್ವತಃ ಧೋನಿ ಬಳಿಯಿಂದಲೂ ಮಾರ್ಗದರ್ಶನ ಪಡೆದಿದ್ದರು.

ಸುಶಾಂತ್ ಸಿಂಗ್ ಕರಿಯರ್‌ಗೆ ಬ್ರೇಕ್ ನೀಡಿದ ಚಿತ್ರ ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ
ಕ್ರಿಕೆಟಿಗ ಧೋನಿ ಜೀವನಾಧಾರಿತ ಚಿತ್ರದಲ್ಲಿ ಧೋನಿ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಸುಶಾಂತ್ ಸಿಂಗ್
Tap to resize

ಯಾರು ಹೇಳದ ಧೋನಿ ಕತೆ ತರೆಯ ಮೇಲೆ ಹೇಳಿದ ಸುಶಾಂತ್, ತನ್ನ ಜೀವನದ ಕತೆಯನ್ನು ಯಾರಿಗೂ ಹೇಳದೆ ಹೊರಟು ಹೋಗಿದ್ದಾರೆ.
2016ರಲ್ಲಿ ತೆರೆಕಂಡ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರ ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು
ಧೋನಿ ಚಿತ್ರಕ್ಕಾಗಿ ಸುಶಾಂತ್ ಬರೋಬ್ಬರಿ 1 ವರ್ಷ ಕ್ರಿಕೆಟ್ ಅಭ್ಯಾಸ ಮಾಡಿದ್ದರು
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಕಿರಣ್ ಮೊರೆ ಸೇರಿದಂತೆ ಹಲವರಿಂದ ಮಾರ್ಗದರ್ಶನ ಪಡೆದಿದ್ದರು
ಸ್ವತಃ ಧೋನಿಯಿಂದ ಹಲವು ಟಿಪ್ಸ್ ಪಡೆದಿದ್ದ ಸುಶಾಂತ್, ಚಿತ್ರದಲ್ಲಿ ಎಲ್ಲರೂ ದಂಗಾಗುವ ರೀತಿ ನಟಿಸಿದ್ದರು
2011ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಸಿಡಿಸಿದ ಗೆಲುವಿನ ಸಿಕ್ಸರ್ ಅದೇ ರೀತಿ ಚಿತ್ರದಲ್ಲಿ ಮಾಡಿ ತೋರಿಸಿದ್ದ ಸುಶಾಂತ್
ನೀರಜ್ ಪಾಂಡೆ ನಿರ್ದೇಶದಲ್ಲಿ ಮೂಡಿ ಬಂದ ಧೋನಿ ಚಿತ್ರ ಸುಶಾಂತ್ ಬಾಲಿವುಡ್ ಕರಿಯರ್‌ಗೆ ಹೊಸ ತಿರುವು ನೀಡಿತು
ಚಿತ್ರದ ಪ್ರಮೋಶನ್ ವೇಳೆ ಸುಶಾಂತ್ ಹಾಗೂ ಧೋನಿ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದ್ದರು

Latest Videos

click me!