ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್

First Published | Nov 25, 2019, 4:56 PM IST

ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅತ್ಯಂತ ಸಭ್ಯ ಕ್ರಿಕೆಟಿಗ, ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಪ್ರಸ್ತುತ ಬೆಂಗಳೂರಿನ NCA ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಕ್ರಿಕೆಟ್‌ಗೆ ಕರ್ನಾಟಕ ನೀಡಿದ ಅದ್ಭುತ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವ ಆಗಿದ್ದವರು. ತಾನೊಬ್ಬ ಸ್ಟಾರ್ ಆಟಗಾರನಾಗಿ ಬೆಳೆದು ನಿಂತರೂ ಸಿಂಪ್ಲಿಸಿಟಿ ಎನ್ನುವುದು ಕೊಂಚವೂ ಬದಲಾಗಿಲ್ಲ. ಫಾರ್ಮ್ ಎನ್ನುವುದು ತಾತ್ಕಾಲಿಕ, ಆದರೆ ವ್ಯಕ್ತಿತ್ವ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ರಾಹುಲ್ ದ್ರಾವಿಡ್ ಜೀವಂತ ಉದಾಹರಣೆ. ದ್ರಾವಿಡ್ ನೆಮ್ಮದಿಯ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವಂತಾಗಲಿ. ಕರ್ನಾಟಕದ ಪ್ರತಿಭೆ ರಾಹುಲ್ ದ್ರಾವಿಡ್ ಬಗೆಗಿನ ಕೆಲ ಕುತೂಹಲಕಾರಿ ಸಂಗತಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

* ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದ ವೇಳೆ ಸಾಮಾನ್ಯ ವ್ಯಕ್ತಿಯಂತೆ ಸರತಿ ಸಾಲಿನಲ್ಲಿ ನಿಂತಿರುವ ದ್ರಾವಿಡ್
* ರಾಹುಲ್ ದ್ರಾವಿಡ್ ಸಾಧನೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ 'ದ ವಾಲ್' ನಯವಾಗಿ ನಿರಾಕರಿಸಿದ್ದರು.
Tap to resize

* ಇದಕ್ಕೆ ದ್ರಾವಿಡ್ ಕೊಟ್ಟ ಕಾರಣ, ತಾವು ಏನೇ ಸಾಧನೆ ಮಾಡಿದರೂ, ಅದಕ್ಕೆ ತಕ್ಕದಾದ ಶ್ರಮವಿರಬೇಕು. ಸುಖಾಸುಮ್ಮನೆ ಪ್ರಶಸ್ತಿ-ಗೌರವ ತೆಗೆದುಕೊಳ್ಳಬಾರದು. ಡಾಕ್ಟರೇಟ್ ಪಡೆಯಬೇಕಾದರೆ ಓದಿಯೇ ಪಡೆಯುತ್ತೇನೆ ಎಂದಿದ್ದರು.
* ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ರಾಹುಲ್ ದ್ರಾವಿಡ್
* ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ಅಭಿಮಾನಿಗಳೊಂದಿಗೆ ಪಂದ್ಯ ವೀಕ್ಷಿಸುತ್ತಿರುವ ದ್ರಾವಿಡ್
* ಭಾರತೀಯ ರೈಲ್ವೆಯಲ್ಲಿ ಅನಿಲ್ ಕುಂಬ್ಳೆ ಜತೆ ದ್ರಾವಿಡ್ ಪಯಣ
* ಜಮ್ಮು ಕಾಶ್ಮೀರದ ಪೋಂಚ್ ಶಾಲಾ ಮಕ್ಕಳ ಜತೆ ದ್ರಾವಿಡ್
* ಮಗ ಸಮಿತ್ ಬ್ಯಾಟಿಂಗ್ ಎಂಜಾಯ್ ಮಾಡುತ್ತಿರುವ ವಾಲ್
* ಸೆಹ್ವಾಗ್ ಜತೆ ಮಿಲಿಟರಿ ಕಾರ್ಯಾಚರಣೆಯಲ್ಲಿ ರಾಹುಲ್ ದ್ರಾವಿಡ್..!
* ಫಾರ್ಮ್ ತಾತ್ಕಾಲಿಕ, ಕ್ಲಾಸ್ ಅನ್ನೋದು ಶಾಶ್ವತ..! ಆಟೋದಲ್ಲಿ ಸಂಚಾರ
* ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಕ್ರಿಕೆಟಿಗ. ಆ್ಯಟಿಟ್ಯೂಡ್ Zero
* ಗ್ರೌಂಡ್‌ಮನ್ ಬದಲು ತಾವೇ ಕೈಯಾರೆ ಪಿಚ್ ಕವರ್ ಮಾಡುತ್ತಿರುವ ದ್ರಾವಿಡ್
* ಅಂಧ ಕ್ರಿಕೆಟಿಗರ ರಾಯಭಾರಿಯಾಗಿ ರಾಹುಲ್ ದ್ರಾವಿಡ್
* ಮಲೇಷ್ಯಾದ ಯುವ ಕ್ರಿಕೆಟಿಗರಿಗೆ ದ್ರಾವಿಡ್‌ರಿಂದ ಬ್ಯಾಟಿಂಗ್ ಸಲಹೆ
* ಬಸ್‌ನಲ್ಲಿ ಎಲ್ಲರಂತೆ ಸಾಮಾನ್ಯ ಪಯಣಿಗನಾಗಿ ರಾಹುಲ್ ದ್ರಾವಿಡ್
* ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ರಾಹುಲ್ ದ್ರಾವಿಡ್
* ಯುವ ಕ್ರಿಕೆಟಿಗರಿಗೆ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಹಸ್ತಾಕ್ಷರ ನೀಡುತ್ತಿರುವ ದ್ರಾವಿಡ್
* ಕಿರಿಯ ಕ್ರಿಕೆಟಿಗನೊಬ್ಬನಿಗೆ ತಮ್ಮದೇ ಹಸ್ತಾಕ್ಷರದ ಜತೆ ಲೆಗ್ ಗಾರ್ಡ್ ನೀಡುತ್ತಿರುವ ಕ್ಷಣ
* ದ್ರಾವಿಡ್ ಬರೀ ಆಟಗಾರ ಅಲ್ಲ, ಒಬ್ಬ ಪರಿಪೂರ್ಣ ಗುರು.
ರಾಹುಲ್ ದ್ರಾವಿಡ್ ಕ್ಲಾಸ್‌ಗೂ, ಮಾಸ್‌ಗೂ ಬಾಸ್..!

Latest Videos

click me!