ಧೋನಿಗೆ RCB 'ಅಚ್ಚುಮೆಚ್ಚು', ಬೆಂಗಳೂರು ವಿರುದ್ದ ಮಹಿ ಚಚ್ಚಿದ್ದೇ ಹೆಚ್ಚು..!

Published : Apr 16, 2023, 02:55 PM IST

ಬೆಂಗಳೂರು(ಏ.16): 16ನೇ ಆವೃತ್ತಿಯ ಬಹುನಿರೀಕ್ಷಿತ ಐಪಿಎಲ್ ಪಂದ್ಯ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಯಲ್‌ ಚಾಲೆಂಜರ್ಸ್‌ ಎಂದರೆ ಕ್ಯಾಪ್ಟನ್‌ ಕೂಲ್ ಖ್ಯಾತಿಯ ಮಹೇಂದ್ರ ಧೋನಿಗೆ ತುಂಬಾ ಪ್ರೀತಿ. ಹೀಗಾಗಿಯೇ ಆರ್‌ಸಿಬಿ ಎದುರು ಧೋನಿ ಸಿಕ್ಕಾಪಟ್ಟೇ ಚಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

PREV
19
ಧೋನಿಗೆ  RCB 'ಅಚ್ಚುಮೆಚ್ಚು', ಬೆಂಗಳೂರು ವಿರುದ್ದ ಮಹಿ ಚಚ್ಚಿದ್ದೇ ಹೆಚ್ಚು..!

ಐಪಿಎಲ್‌ನ ಎರಡು ಬಲಿಷ್ಠ ಕ್ರಿಕೆಟ್‌ ತಂಡಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಏಪ್ರಿಲ್‌ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾದಾಡಲಿವೆ.

29

ಐಪಿಎಲ್‌ನ ಎರಡು ಬಲಿಷ್ಠ ಕ್ರಿಕೆಟ್‌ ತಂಡಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಏಪ್ರಿಲ್‌ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾದಾಡಲಿವೆ.

39

ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಐಪಿಎಲ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್‌ನ ಬದ್ದ ಎದುರಾಳಿಗಳ ಕಾದಾಟದ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್ ಆಗಿವೆ. 
 

49

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವೆಂದರೆ ಅಚ್ಚುಮೆಚ್ಚು. ಇದೀಗ 2023ರ ಐಪಿಎಲ್ ಟೂರ್ನಿಯಲ್ಲೂ ಧೋನಿ, ಆರ್‌ಸಿಬಿ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ.
 

59

ಎಂ ಎಸ್ ಧೋನಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಎದುರು ಧೋನಿ 30 ಪಂದ್ಯಗಳನ್ನಾಡಿ 140.33ರ ಸ್ಟ್ರೈಕ್‌ರೇಟ್‌ನಲ್ಲಿ 849 ರನ್ ಸಿಡಿಸಿದ್ದಾರೆ.

69

ಇನ್ನು ಇದಷ್ಟೇ ಅಲ್ಲದೇ ಆರ್‌ಸಿಬಿ ಎದುರು ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಕೂಡಾ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಧೋನಿ ಆರ್‌ಸಿಬಿ ಎದುರು 46 ಸಿಕ್ಸರ್‌ ಸಿಡಿಸಿದ್ದಾರೆ. ಇನ್ನು 36 ಸಿಕ್ಸರ್‌ ಸಿಡಿಸಿರುವ ಡೇವಿಡ್ ವಾರ್ನರ್‌ ಎರಡನೇ ಸ್ಥಾನದಲ್ಲಿದ್ದಾರೆ.

79

ಎಂ ಎಸ್ ಧೋನಿ, 2019ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಎದುರು ಅಜೇಯ 84 ಸಿಡಿಸಿದ್ದರು. ಈ ಮೂಲಕ ಏಕಾಂಗಿಯಾಗಿ ಚೆನ್ನೈಗೆ ಗೆಲುವು ತಂದುಕೊಡುವತ್ತ ಹೆಜ್ಜೆ ಹಾಕಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿತ್ತು.

89

ಧೋನಿ ಇದುವರೆಗೂ ಐಪಿಎಲ್ ಟೂರ್ನಿಯಲ್ಲಿ 24 ಅರ್ಧಶತಕ ಬಾರಿಸಿದ್ದಾರೆ. ಇನ್ನು ಧೋನಿ ಐಪಿಎಲ್‌ನಲ್ಲಿ ಧೋನಿ ಇದುವರೆಗೂ 348 ಬೌಂಡರಿ ಹಾಗೂ 235 ಸಿಕ್ಸರ್ ಸಿಡಿಸಿದ್ದಾರೆ.

99

ಕ್ಯಾಪ್ಟನ್‌ ಕೂಲ್ ಖ್ಯಾತಿಯ ಧೋನಿ, ಇದುವರೆಗೂ ಒಟ್ಟು 238 ಐಪಿಎಲ್ ಪಂದ್ಯಗಳನ್ನಾಡಿದ್ದು, 39.34ರ ಬ್ಯಾಟಿಂಗ್ ಸರಾಸರಿಯಲ್ಲಿ 5,036 ರನ್ ಸಿಡಿಸಿದ್ದಾರೆ. ಇದು ಧೋನಿ ಪಾಲಿಗೆ ಕೊನೆಯ ಐಪಿಎಲ್‌ ಟೂರ್ನಿಯಾಗುವ ಸಾಧ್ಯತೆಯಿದೆ.
 

Read more Photos on
click me!

Recommended Stories