ಭಾವನಾ ಮೂಲತಃ ಚೆನ್ನೈನವರಾಗಿದ್ದು ಮೇ 21,1986ರಲ್ಲಿ ಜನಿಸಿದರು.
ಟಿವಿ ಕಾರ್ಯಕ್ರಮಗಳ ನಿರೂಪಕಿ ಹಾಗೂ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಸ್ಟುವರ್ಟ್ ಬಿನ್ನಿ ಪತ್ನಿ ಮಯಂತಿ ಲ್ಯಾಂಗರ್ ನಂತರ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರೀಡಾ ನಿರೂಪಕಿ ಭಾವನಾ.
ಮುಂಬೈನ ಉದ್ಯಮಿ ನಿಖಿಲ್ ರಮೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾವನಾ ಎಂಬಿಎ ಪದವೀಧರೆ ಹಾಗೂ ಭರತನಾಟ್ಯಂ ನೃತ್ಯಗಾರ್ತಿ.
ಕಳೆದ ವರ್ಷ ನಟ ಹೃತಿಕ್ ರೋಷನ್ ಬಗ್ಗೆ ಮಾಡಿದ ಟ್ಟೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
'ವಾರ್' ಸಿನಿಮಾ ವೀಕ್ಷಿಸಿದ ಹೃತಿಕ್‌ಗೆ ವೀರ್ಯದಾನ ಮಾಡುವಂತೆ ಟ್ಟೀಟ್ ಮಾಡಿದ್ದರು.
200 ಕೋಟಿ ಕಲೆಕ್ಷನ್ ಪಡೆದುಕೊಂಡ ವಾರ್ ಸಿನಿಮಾಗೆ ಭಾವನಾ ಫಿದಾ ಆಗಿದ್ದರು.
'ಹೃತಿಕ್ should really do more movies n consider donating sperm' ಎಂದು ಬರೆದುಕೊಂಡಿದ್ದರು.
4 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಭಾವನಾ ಶೇರ್ ಮಾಡಿರುವ ಫೋಟೋಗಳಿವು.