ಹೇಗೂ ಟೀಂ ಇಂಡಿಯಾ ಗೆಲ್ಲಲ್ಲ, ನಂಗೆ ವಿಕೆಟ್ ಒಪ್ಪಿಸು ಎಂದಿದ್ದರಂತೆ ಮುರುಳಿ..!

First Published | Aug 11, 2020, 5:14 PM IST

ಶ್ರೀಲಂಕಾ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರುಳೀಧರನ್ ತಾವಾಡಿದ ಕೊನೆಯ ಟೆಸ್ಟ್ ಪಂದ್ಯದ ಕ್ಷಣವನ್ನು ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಜತೆ ಮೆಲುಕು ಹಾಕಿದ್ದಾರೆ.
ಅಶ್ವಿನ್ ಲಂಕಾ ದೂಸ್ರಾ ಸ್ಪೆಷಲಿಸ್ಟ್ ಬಳಿ ಹಲವು ಆನ್ ಫೀಲ್ಡ್ ಹಾಗೂ ಆಫ್ ಫೀಲ್ಡ್ ವಿಚಾರಗಳ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದಿದ್ದಾರೆ. ಇದೇ ವೇಳೆ ಅತಿ ಕುತೂಹಲಕಾರಿಯಾದ ಸಂಗತಿಯೊಂದನ್ನು ಮುರುಳಿ ಬಾಯ್ಬಿಟ್ಟಿದ್ದಾರೆ. ಅದೇ ಮುರುಳಿ ಆಡಿದ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ವಿಕೆಟ್ ಪಡೆಯುವ ಮುಂಚೆಯೇ ಘಟನೆ. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
 

ಮುತ್ತಯ್ಯ ಮುರುಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್(800) ಪಡೆದು ದಾಖಲೆ ಬರೆದಿದ್ದಾರೆ.
undefined
2010ರಲ್ಲಿ ಭಾರತದ ವಿರುದ್ಧದ ಸರಣಿ ಮುರುಳಿ ಪಾಲಿಗೆ ವಿದಾಯದ ಸರಣಿಯಾಗಿತ್ತು.
undefined

Latest Videos


ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು, ಮೊದಲ ಪಂದ್ಯದ ಬಳಿಕ ನಿವೃತ್ತಿಯಾಗುವುದಾಗಿ ಮುರುಳಿ ಮೊದಲೇ ಘೋಷಿಸಿದ್ದರು.
undefined
ಮುರುಳಿಗೆ 800 ವಿಕೆಟ್ ಮೈಲಿಗಲ್ಲು ಸಾಧಿಸಲು ಸರಿಯಾಗಿ 8 ವಿಕೆಟ್‌ಗಳ ಅಗತ್ಯವಿತ್ತು.
undefined
ಟೀಂ ಇಂಡಿಯಾದ ಕೊನೆಯ ಬ್ಯಾಟ್ಸ್‌ಮನ್ ಪ್ರಗ್ಯಾನ್ ಓಜಾ ಅವರನ್ನು ಬಲಿ ಪಡೆಯುವ ಮೂಲಕ ರೋಚಕವಾಗಿ 800 ವಿಕೆಟ್ ಗುರಿ ಮುಟ್ಟಲು ಮುರುಳಿ ಯಶಸ್ವಿಯಾದರು.
undefined
ನಾನು ಬೇಕಂತಲೇ ಮುರುಳಿಗೆ ವಿಕೆಟ್ ಒಪ್ಪಿಸಿದ್ದೆ ಎಂದು ಓಜಾ ಡ್ರೆಸ್ಸಿಂಗ್‌ ರೂಂನಲ್ಲಿ ಹೇಳಿದ್ದಾಗಿ ಅಶ್ವಿನ್ ಹೇಳಿದ್ದಾರೆ.
undefined
ಓಜಾ ಆಧಾರರಹಿತ ಹೇಳಿಕೆಯನ್ನು ಡ್ರೆಸ್ಸಿಂಗ್ ರೂಂನಲ್ಲಿದ್ದ ಎಲ್ಲರೂ ಟ್ರೋಲ್ ಮಾಡಿದ್ದಾಗಿ ಅಶ್ವಿನ್, ಮುರುಳಿ ಜತೆ ಮೆಲುಕುಹಾಕಿದ್ದಾರೆ.
undefined
ನೀನು ಬೇಕಂತಲೇ ವಿಕೆಟ್ ನೀಡದಿದ್ದರೂ ಮರು ಎಸೆತದಲ್ಲೇ ನಿನ್ನನ್ನು ಮುರುಳಿ ಪೆವಿಲಿಯನ್ನಿಗೆ ಕಳಿಸುತ್ತಿದ್ದರು ಎಂದು ಟ್ರೋಲ್ ಮಾಡಿದ್ದರಂತೆ.
undefined
ಅದಕ್ಕೆ ಮುರುಳಿ, ನಾನು ಓಜಾ ಜತೆ ಮೈದಾನದಲ್ಲಿ ಮಾತನಾಡಿರಲಿಲ್ಲ. ಆದರೆ ಇಶಾಂತ್ ಬಳಿ ಮಾತ್ರ ನನಗೆ ವಿಕೆಟ್ ನೀಡು ಎಂದಿದ್ದೆ.
undefined
ವಾಟರ್ ಬ್ರೇಕ್ ಬಳಿಕ ಇಶಾಂತ್ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿದ್ದರಂತೆ.
undefined
ಈ ವೇಳೆ ಮುರುಳಿ, ಹೇಗಿದ್ದರೂ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು ಇಲ್ಲವೇ ಡ್ರಾ ಮಾಡಿಕೊಳ್ಳಲು ಆಗುವುದಿಲ್ಲ. ನನಗೆ ವಿಕೆಟ್ ನೀಡಿ ಹೋಗು. ಕೊನೆ ಪಕ್ಷ ನಾನಾದರೂ ಸಂತೃಪ್ತನಾಗುತ್ತೇನೆ ಎಂದಿದ್ದಾರೆ.
undefined
ಆಗ ಮುರುಳಿ 799 ವಿಕೆಟ್ ಪಡೆದಿದ್ದರು. ಆದರೆ ಕೊನೆಯ ವಿಕೆಟ್ ಪಡೆಯಲು ಸಾಕಷ್ಟು ಬೆವರು ಹರಿಸಿದ್ದರು.
undefined
ಕೊನೆಯ ವಿಕೆಟ್‌ಗೆ ಇಶಾಂತ್-ಓಜಾ ಜೋಡಿ ಬರೋಬ್ಬರಿ 15.2 ಓವರ್‌ಗಳ ಜತೆಯಾಟವಾಡಿತ್ತು.
undefined
ಆದರೆ ಹಠ ಬಿಡದ ಚಾಂಪಿಯನ್ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಓಜಾ ವಿಕೆಟ್ ಪಡೆಯುವ ಮೂಲಕ 800 ವಿಕೆಟ್‌ಗಳ ಮೈಲಿಗಲ್ಲು ನೆಟ್ಟರು.
undefined
ಟೆಸ್ಟ್(800) ಹಾಗೂ ಏಕದಿನ(534) ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ.
undefined
ಟೀಂ ಇಂಡಿಯಾ ವಿರುದ್ದಗಾಲೆಯಲ್ಲಿ ನಡೆದ ಆ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 10 ವಿಕೆಟ್‌ಗಳ ಭರ್ಜರಿ ದಾಖಲಿಸಿತ್ತು.
undefined
click me!