2027 ODI World Cup: ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೂರ ಆಗ್ತಾರೆ: ಸೌರವ್‌ ಗಂಗೂಲಿ ಎಚ್ಚರಿಕೆ

Published : Jun 23, 2025, 03:53 PM ISTUpdated : Jun 23, 2025, 04:02 PM IST

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಣೆ ಮಾಡಿರೋದು ಕ್ರಿಕೆಟ್‌ ಪ್ರಿಯರಿಗೆ ಆಘಾತವನ್ನುಂಟು ಮಾಡಿತ್ತು. ಈಗ ಅವರು ವಿಶ್ವಕಪ್‌ನಲ್ಲಿ ಆಡ್ತಾರಾ? ಇಲ್ಲವಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಸೌರವ್‌ ಗಂಗೂಲಿ ಮಾತನಾಡಿದ್ದಾರೆ. 

PREV
15

ಐಸಿಸಿಯ ಅತಿ ದೊಡ್ಡ ಐತಿಹಾಸಿಕ ವೈಟ್-ಬಾಲ್ ಟೂರ್ನಮೆಂಟ್ ಬರೋದಿಕ್ಕೆ ಇನ್ನೂ 2 ವರ್ಷಗಳ ಮೇಲೆ ಬೇಕಿದೆ. ಆಗ ವಿರಾಟ್ ಕೊಹ್ಲಿಗೆ 39, ರೋಹಿತ್‌ ಶರ್ಮಾಗೆ ವಯಸ್ಸು 40 ಆಗಿರುತ್ತದೆ. ಹೀಗಾಗಿ ಇವರು ಫಿಟ್‌ನೆಸ್ ಕಾಪಾಡಿಕೊಳ್ಳೋದು ಕಷ್ಟವಿದೆ. ಆದರೆ, 2027 ರವರೆಗೆ ಟಿ20 & ಟೆಸ್ಟ್ ಕ್ರಿಕೆಟ್‌ನ ಒತ್ತಡವಿಲ್ಲದೆ, ಕೊಹ್ಲಿ ಮತ್ತು ರೋಹಿತ್ ತಮ್ಮ ಎಲ್ಲಾ ಗಮನ ಮತ್ತು ಶಕ್ತಿಯನ್ನು ಒಡಿಐ ವಿಶ್ವಕಪ್‌ಗೆ ಕೇಂದ್ರೀಕರಿಸಬಹುದು ಎಂದು ಕೂಡ ಹೇಳಲಾಗಿದೆ. ಇದನ್ನು ಮಾಜಿ ಭಾರತ ನಾಯಕ ಸೌರವ್ ಗಂಗೂಲಿ ಒಪ್ಪಿಲ್ಲ.

25

ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ವಿಶ್ವಕಪ್‌ನಲ್ಲಿ ಆಡೋದು ಅಷ್ಟು ಸುಲಭವಲ್ಲ ಎಂದು ಅವರು ಭಾವಿಸಿದ್ದಾರೆ. ಈಗಿನಿಂದ ಲೆಕ್ಕ ಹಾಕಿದರೆ 2027 ರವರೆಗೆ ಕನಿಷ್ಠ 27 ಒಡಿಐ ಪಂದ್ಯಗಳಿ. ಹೊಸ FTP ಪ್ರಕಟವಾದ ಬಳಿಕ ಇನ್ನಷ್ಟು ಜಾಸ್ತಿ ಆಗಬಹುದು. ವಿಶ್ವಕಪ್‌ನಲ್ಲಿ ಆಡಲು ಕೊಹ್ಲಿ, ರೋಹಿತ್ ಎಲ್ಲವನ್ನೂ ಆಡಬೇಕಾಗಿ ಬರುವುದು. ರೋಹಿತ್, ವಿರಾಟ್‌ ಕೊಹ್ಲಿ ಒಟ್ಟಿಗೆ 2 ಚಾಂಪಿಯನ್ಸ್ ಟ್ರೋಫಿ, ಒಂದು ಟಿ20 ವಿಶ್ವಕಪ್ ಗೆದ್ದಿದ್ದಾರೆ. ಒಡಿಐ ವಿಶ್ವಕಪ್ ಗೆದ್ದು ನಿವೃತ್ತಿಯಾದರೆಮ ಇವರಿಬ್ಬರ ವೃತ್ತಿ ಜೀವನದಲ್ಲಿ ಐತಿಹಾಸಿಕ ಸಾಧನೆ ಆಗಿ ಉಳಿಯುವುದು.

35

ಈ ಬಗ್ಗೆ ಮಾತನಾಡಿದ ಸೌರವ್‌ ಗಂಗೂಲಿ "ಇದು ಸುಲಭ ಇಲ್ಲ. ವರ್ಷಕ್ಕೆ 15 ಪಂದ್ಯಗಳಿವೆ. ನಾನು ಈ ಬಗ್ಗೆ ಯಾವುದೇ ಸಲಹೆ ನೀಡೋದಿಲ್ಲ. ಅವರಿಬ್ಬರಿಗೂ ನನಗಿಂತ ಹೆಚ್ಚಾಗಿ ಈ ಆಟ ಬಗ್ಗೆ ಗೊತ್ತು. ಅವರಿಬ್ಬರೂ ತಮಗೆ ಬೇಕಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ನಾವೆಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು, ಎಲ್ಲರಂತೆ, ಆಟವು ಅವರಿಂದ ದೂರವಾಗುತ್ತದೆ, ಅವರು ಆಟದಿಂದ ದೂರವಾಗುತ್ತಾರೆ" ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.

45

ODI ಜೊತೆಗೆ, ರೋಹಿತ್, ಕೊಹ್ಲಿಗೆ IPL ಕೂಡಇದೆ. ಇದು ಒಡಿಐ ಕ್ರಿಕೆಟ್‌ಗೆ ನೇರವಾಗಿ ಪರಿಣಾಮ ಬೀರದೇ ಇರಬಹುದು. ಆದರೆ 14 ಪಂದ್ಯಗಳನ್ನು ನಿರಂತರವಾಗಿ ಆಡೋದರಿಂದ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಹಾಯ ಆಗುತ್ತದೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ಬಗ್ಗೆ, ಅವರ ನಿರ್ಧಾರವನ್ನು ಅರ್ಥ ಮಾಡ್ಕೋಬಹುದು. ಕಳೆದ ವರ್ಷದವರೆಗೆ ನೋಡೋದಾದ್ರೆ ರೋಹಿತ್ ಟೆಸ್ಟ್ ಬ್ಯಾಟ್ಸ್‌ಮನ್ ಆಗಿರಲಿಲ್ಲ. ಆಫ್-ಸ್ಟಂಪ್‌ನ ಹೊರಗಿನ ಬಾಲ್‌ಗಳಿಗೆ ಎದುರಾದ ತೊಂದರೆಯನ್ನು ಕೊಹ್ಲಿ ಸರಿಪಡಿಸಲಾಗಲಿಲ್ಲ. ಆಸ್ಟ್ರೇಲಿಯಾದಲ್ಲಿ 8 ಬಾರಿ ಅವನು ಬಾಲ್‌ನ್ನು ಎಡ್ಜ್ ಮಾಡಿ ಔಟ್‌ ಆಗಿದ್ದಾನೆ. ಕೊಹ್ಲಿಗೆ ಇನ್ನೂ 36 ವಯಸ್ಸಾದರೂ, 2 ವರ್ಷ ಆಡಬಹುದು ಎಂಬ ನಂಬಿಕೆ ಇದ್ದರೂ, 2027 ರ ವಿಶ್ವಕಪ್‌ವರೆಗೆ ಎರಡೂ ಫಾರ್ಮ್ಯಾಟ್‌ಗಳನ್ನು ಆಡೋದು ಕಷ್ಟ ಆಗಿತ್ತು.

55

ಒಡಿಐಗಳಲ್ಲಿ, ರೋಹಿತ್, ಕೊಹ್ಲಿ ಇನ್ನೂ ಬಲಿಷ್ಠ ಶಕ್ತಿಗಳಾಗಿದ್ದಾರೆ. ಇತ್ತೀಚೆಗೆ ಅಂತ್ಯವಾಗಿರೋ ಚಾಂಪಿಯನ್ಸ್ ಟ್ರೋಫಿಯಲ್ಲಿ, ಕೊಹ್ಲಿ 218 ರನ್‌ಗಳನ್ನು 54.80 ಸರಾಸರಿಯಲ್ಲಿ ಒಂದು ಶತಕ, ಒಂದು ಅರ್ಧಶತಕ ಮಾಡಿದ್ದರು. ದೊಡ್ಡ ಐಸಿಸಿ ಟೂರ್ನಮೆಂಟ್‌ಗಳಲ್ಲಿ ರೋಹಿತ್ ಕೊಡುಗೆಯನ್ನು ಯಾರೂ ಕಡೆಗಣಿಸಲಾರರು. 2023 ರ ವಿಶ್ವಕಪ್‌ನಲ್ಲಿ ಭಾರತದಲ್ಲಿ ರೋ-ಕೊ ಎದುರಾಳಿಗಳನ್ನು ರೌಂಡ್‌ಅಪ್ ಮಾಡಿ ರನ್ನರ್-ಅಪ್ ಆಗಿದ್ದನ್ನು ಯಾರು ಮರೆಯುತ್ತಾರೆ? ದಕ್ಷಿಣ ಆಫ್ರಿಕಾದಲ್ಲಿ ವಿಭಿನ್ನ, ಕಷ್ಟಕರವಾದ ಪರಿಸ್ಥಿತಿ ಇರುತ್ತವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳೊಂದಿಗೆ, ಕೊಹ್ಲಿ, ರೋಹಿತ್ ವಿಶ್ವಕಪ್ ಎತ್ತಿ ಉನ್ನತವಾಗಿ ವೃತ್ತಿ ಜೀವನ ಮುಗಿಸಬಹುದು.

Read more Photos on
click me!

Recommended Stories