5 ಪಂದ್ಯಗಳ ಇಂಗ್ಲೆಂಡ್ ಸರಣಿಯನ್ನ 2-2 ರೊಂದಿಗೆ ಭಾರತ ಡ್ರಾ ಮಾಡ್ಕೊಂಡಿದೆ. ಗಿಲ್ ನಾಯಕತ್ವದ ಯುವ ತಂಡ ಈ ಸಾಧನೆ ಮಾಡಿದೆ. ಡಬಲ್ ಸೆಂಚುರಿ ಸೇರಿ 754 ರನ್ ಗಳಿಸಿದ ಶುಭ್‌ಮಮನ್ ಗಿಲ್ ನಾಯಕತ್ವದಲ್ಲೂ ಮಿಂಚಿದ್ರು.
24
ಇಂಗ್ಲೆಂಡ್ ಸರಣಿಯಲ್ಲಿ ಸೂಪರ್ ಆಟಕ್ಕಾಗಿ ಗಿಲ್‌ಗೆ ಜುಲೈ ತಿಂಗಳ ಐಸಿಸಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಸಿಕ್ಕಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್‌ರನ್ನ ಹಿಂದಿಕ್ಕಿ ಗಿಲ್ ಈ ಪ್ರಶಸ್ತಿ ಗೆದ್ದಿದ್ದಾರೆ. ಗಿಲ್ ಗೆದ್ದ 4ನೇ ಐಸಿಸಿ ತಿಂಗಳ ಪ್ರಶಸ್ತಿ ಇದಾಗಿದೆ.
34
ಗಿಲ್ ಈ ಹಿಂದೆ ಜನವರಿ 2023, ಸೆಪ್ಟೆಂಬರ್ 2023 ಮತ್ತು ಫೆಬ್ರವರಿ 2025ರಲ್ಲೂ ಐಸಿಸಿ ಮಾಸಿಕ ಪ್ರಶಸ್ತಿ ಗೆದ್ದಿದ್ರು. "ಜುಲೈ ತಿಂಗಳ ಪ್ರಶಸ್ತಿ ಗೆದ್ದಿದ್ದು ಖುಷಿ ತಂದಿದೆ. ನಾಯಕನಾಗಿ ನನ್ನ ಮೊದಲ ಟೆಸ್ಟ್ ಸರಣಿಯಲ್ಲಿ ಈ ಪ್ರಶಸ್ತಿ ಬಂದಿದ್ದು ಮಹತ್ವದ್ದು" ಅಂತ ಗಿಲ್ ಹೇಳಿದ್ದಾರೆ.
“ಇಂಗ್ಲೆಂಡ್ ಸರಣಿ ನನಗೆ ನಾಯಕನಾಗಿ ಒಳ್ಳೆ ಅನುಭವ ಕೊಟ್ಟಿದೆ. ಎರಡೂ ತಂಡಗಳಿಂದ ಸೂಪರ್ ಆಟ ಕಂಡುಬಂದಿದೆ. ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು” ಅಂತ ಗಿಲ್ ಹೇಳಿದ್ದಾರೆ. ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಜುಲೈ ತಿಂಗಳ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ.