ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಬಾಲಿವುಡ್ ಹಾಡಿದೆ ಗಿಲ್ ಸ್ಟೆಪ್ಸ್ ಹಾಕಿದ್ದಾರೆ. ವಿಶೇಷ ಅಂದರೆ ಗಿಲ್ ಚೆಲುವೆಯೊಬ್ಬರ ಕೈಹಿಡಿದು ಡ್ಯಾನ್ಸ್ ಮಾಡಿದ್ದಾರೆ. ತೆಂಡೂಲ್ಕರ್ ಮನೆ ಕಾರ್ಯಕ್ರಮದಲ್ಲಿ ಗಿಲ್ ಜೊತೆ ಕಾಣಿಸಿಕೊಂಡಿದ್ದು ಯಾರು
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಪುತ್ರ ಅರ್ಜುನ್ ತೆಂಡೂಲ್ಕರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಜೊತೆ ಅರ್ಜುನ್ ತೆಂಡೂಲ್ಕರ್ ಸಪ್ತಪದಿ ತುಳಿಯಲಿದ್ದಾರೆ. ಮಾರ್ಚ್ 5 ರಂದು ಅದ್ಧೂರಿ ವಿವಾಹ ಮಹೋತ್ಸವ ನಡೆಯಲಿದೆ. ಇದೀಗ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಭರ್ಜರಿ ನಡೆಯುತ್ತಿದೆ.
26
ಶುಬಮ್ ಗಿಲ್ ಡ್ಯಾನ್ಸ್
ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶುಬಮನ್ ಗಿಲ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ ಹಾಡಿಗೆ ಶುಬಮನ್ ಗಿಲ್ ಹೆಜ್ಜೆ ಹಾಕಿದ್ದಾರೆ. ಗಿಲ್ ಜೊತೆ ಹಲವು ಆಪ್ತರು, ಸೆಲೆಬ್ರೆಟಿಗಳು ಕುಣಿದು ಕುಪ್ಪಳಿಸಿದ್ದಾರೆ. ಶುಬಮ್ ಗಿಲ್ ಹಾಗೂ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಹಲವು ಬಾರಿ ಹರಿದಾಡಿತ್ತು.ಈ ರೂಮರ್ ತಣ್ಣಗಾಗಿದ್ದ ಬೆನ್ನಲ್ಲೇ ಇದೀಗ ಶುಬಮನ್ ಗಿಲ್ ಡ್ಯಾನ್ಸ್ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
36
ಗಿಲ್ ಕೈಹಿಡಿದು ಕುಣಿದ ಚೆಲುವೆ ಯಾರು
ಶುಬಮನ್ ಗಿಲ್ ಡ್ಯಾನ್ಸ್ ನಡುವೆ ಚೆಲುವೆಯ ಕೈಹಿಡುದು ಕುಣಿದಿದ್ದಾರೆ. ಈ ಚೆಲುವೆ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಚೆಲುವೆ ಜೊತೆ ಗಿಲ್ ಅದ್ದೂರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ ಹೀರೋ ರೀತಿ ಚೆಲುವೆಯ ಕೈಹಿಡಿದು ತಿರುಗಿಸಿ ಕುಪ್ಪಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಗಿಲ್ ಡ್ಯಾನ್ಸ್ ಚರ್ಚೆ ನಡೆಯುತ್ತಿದೆ.
ಮದುವೆಗೆ ಅದ್ದೂರಿ ಡ್ರೆಸ್‌ನಲ್ಲಿ ಬಂದಿರುವ ಶುಬಮನ್ ಗಿಲ್, ಅರ್ಜುನ್ ತೆಂಡುಲ್ಕರ್ ಮದುವೆಯಲ್ಲಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ಲೋಕೇಶನ್ ಕುರಿತು ಸ್ಪಷ್ಟತೆ ಇಲ್ಲ. ಆದರೆ ಹಲವು ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಜೊತೆ ಕ್ರಿಕೆಟ್ ಆಡಿದ ಮಾಜಿ ಕ್ರಿಕೆಟಿಗರು ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
56
ಮಾರ್ಚ್ 3ರಿಂದ ಮದುವೆ ಕಾರ್ಯಕ್ರಮ ಆರಂಭ
ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ಕಾರ್ಯಕ್ರಮ ಮಾರ್ಚ್ 5 ರಂದು ನಡೆಯಲಿದೆ. ಮಾರ್ಚ್ 3ರಿಂದ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿದೆ. ಸಂಗೀತ್ ಸೆರೆಮನಿ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
66
ಮೋದಿ ಸೇರಿ ಹಲವು ನಾಯಕರಿಗೆ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವಂದ್ರ ಫಡ್ನವಿಸ್ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ಮದುವೆಯಲ್ಲಿ ಸೆಲಬ್ರೆಟಿಗಳು, ಗಣ್ಯರ ದಂಡೇ ಇರಲಿದೆ.
ಮೋದಿ ಸೇರಿ ಹಲವು ನಾಯಕರಿಗೆ ಆಹ್ವಾನ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.