ಸಾನಿಯಾಗೆ ಕೈಕೊಟ್ಟಿದ್ದೇಕೆ ಶೋಯೆಬ್ ಮಲಿಕ್..? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್‌

Published : Feb 21, 2024, 05:30 PM IST

ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಕಳೆದ ಜನವರಿ 20ರಂದು ಸನಾ ಜಾವೆದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದರು. ಇವರ ಮದುವೆಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

PREV
17
ಸಾನಿಯಾಗೆ ಕೈಕೊಟ್ಟಿದ್ದೇಕೆ ಶೋಯೆಬ್ ಮಲಿಕ್..? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್‌

ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಕಳೆದ ಜನವರಿ 20ರಂದು ಸನಾ ಜಾವೆದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದರು. ಇವರ ಮದುವೆಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

27

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರ ಜತೆಗಿನ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದು ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಅವರ ಜತೆ ಹೊಸ ಇನಿಂಗ್ಸ್ ಆರಂಭಿಸಿದ್ದರು.

37

ಸಾನಿಯಾ ಮಿರ್ಜಾ ಅವರಿಂದ ಬೇರ್ಪಟ್ಟ ಬಳಿಕ ಸದ್ಯ ಶೋಯೆಬ್ ಮಲಿಕ್ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅನುಭವಿ ಆಲ್ರೌಂಡರ್ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ.

47

ಶೋಯೆಬ್ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಭಾನುವಾರ ಅವರ ಪಂದ್ಯ ಮುಲ್ತಾನ್ ಸುಲ್ತಾನ್ಸ್ ವಿರುದ್ದ ಆಡಿದ್ದರು.

57
Sana Javed

ಈ ಪಂದ್ಯದಲ್ಲಿ ಚೆನ್ನಾಗಿ ಆಡುವಂತೆ ಮಾಡಲು ಮೈದಾನದಲ್ಲಿ ನಿಂತು ತನ್ನ ಪತಿಗೆ ಸಪೋರ್ಟ್ ಮಾಡಲು ಸನಾ ಜಾವೆದ್‌ ಮೈದಾನದಕ್ಕೆ ಬಂದಿದ್ದರು. ಆಕೆಯ ಬ್ಯೂಟಿ ನೋಡಿಯೇ ಸಾನಿಯಾಗೆ ಶೋಯೆಬ್ ಕೈಕೊಟ್ಟಿದ್ದು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

67

ಮುಲ್ತಾನ್ ಸುಲ್ತಾನ್ಸ್ ಎದುರಿನ ಪಂದ್ಯದಲ್ಲಿ ತನ್ನ ನೂತನ ಪತ್ನಿಯ ಎದುರು ಶೋಯೆಬ್ ಮಲಿಕ್ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ 2 ಓವರ್‌ ಮಾಡಿ 10 ರನ್ ನೀಡಿದರೆ, ಬ್ಯಾಟಿಂಗ್‌ನಲ್ಲಿ ಕೇವಲ 35 ಎಸೆತಗಳಲ್ಲಿ 53 ರನ್ ಚಚ್ಚಿದರು.

77

ಇನ್ನು ಸನಾ ಜಾವೆದ್ ಪಿಎಸ್‌ಎಲ್ ಟೂರ್ನಿ ನೋಡಲು ಬಂದಿದ್ದು ಸಾನಿಯಾ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಹೀಗಾಗಿ ಸನಾಗೆ ಮುಜುಗರವನ್ನುಂಟು ಮಾಡಲು ಸನಾಗೆ ಕೇಳುವಂತೆ ಸಾನಿಯಾ, ಸಾನಿಯಾ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.
 

Read more Photos on
click me!

Recommended Stories