#DhoniRetires vs #DhoniNeverTires: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್..!
First Published | May 28, 2020, 2:17 PM ISTಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಅಗ್ರಗಣ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬುಧವಾರ ರಾತ್ರಿ ಧೋನಿ ಕುರಿತಾಗಿ ಎರಡು ಹ್ಯಾಷ್‌ಟ್ಯಾಗ್‌ಗಳು ಸಾಕಷ್ಟು ಟ್ರೆಂಡಿಂಗ್ ಆಗಿದ್ದವು. ಕೊರೋನಾದಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿರುವ ಬೆನ್ನಲ್ಲೇ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಆರಂಭವಾಗಿವೆ. 2019ರ ಏಕದಿನ ವಿಶ್ವಕಪ್ ಮುಕ್ತಾಯವಾದ ದಿನದಿಂದ ಧೋನಿ ಕ್ರಿಕೆಟ್ ಭವಿಷ್ಯ ಏನು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.
ಕೆಲವರು ಧೋನಿ ರಿಟೈರ್ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದರೆ, ಧೋನಿ ಅಭಿಮಾನಿಗಳು, ಧೋನಿ ಎಂದಿಗೂ ದಣಿಯುವುದಿಲ್ಲ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ #DhoniNeverTires ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ಧೋನಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೆಂಡತಿ-ಮಗಳೊಂದಿಗೆ ನೆಮ್ಮದಿಯ ಜೀವನ ಲೀಡ್ ಮಾಡ್ತಾ ಇದ್ದಾರೆ. ಈ ಕುರಿಯಾದ ಒಂದಷ್ಟು ಫೋಟೋ ಝಲಕ್ ಇಲ್ಲಿದೆ ನೋಡಿ.