ಫಾಸ್ಟ್ ಬೌಲರ್ ಜಾಹೀರ್ ಖಾನ್ ಹಾಗೂ ಚಕ್ ದೇ ಇಂಡಿಯಾ ಫೇಮ್‌ನ ಬಾಲಿವುಡ್ ನಟಿ ಸಾಗಾರಿಕಾ ಘಾಟ್ಗೆ 2017ರಲ್ಲಿ ಮದುವೆಯಾದರು.
ಜಾಹೀರ್ ಹಾಗೂ ಸಾಗಾರಿಕಾರ ಪೋಟೋ ಪ್ರೆಗ್ನೆಂಸಿಯ ವಿಷಯವನ್ನು ಕನ್ಫರ್ಮ್ ಮಾಡಿದೆ ಹಾಗೂ ಶೀಘ್ರದಲೇ ಈ ಕಪಲ್ ಪೋಷಕರಾಗಲಿದ್ದಾರೆ ಎಂದು ವರದಿ ಹೇಳುತ್ತದೆ.
ಆದರೆ ಜಾಹಿರ್ ಹಾಗೂ ಘಾಟ್ಗೆ ಕಡೆಯಿಂದ ಈ ಬಗ್ಗೆ ಈ ವರೆಗೂ ಯಾವುದೇ ಕನ್ಫರ್ಮೇಶನ್ ಬಂದಿಲ್ಲ.
ಪ್ರಸ್ತುತ ನಟಿ ಪತಿಗೊಂದಿಗೆ ಐಪಿಎಲ್ ಟೂರ್ನಿಮೆಂಟ್‌ಗಾಗಿ ದುಬೈನಲ್ಲಿದ್ದಾರೆ. ಅಲ್ಲಿಯೇ ಜಾಹೀರ್‌ರ ಬರ್ಥ್‌ಡೇ ಸೆಲೆಬ್ರೆಟ್ ಮಾಡಲಾಗಿತ್ತು.
ಸಾಗಾರಿಕಾ ಪತಿಯ ಜನ್ಮದಿನದಂದು ಬ್ಲಾಕ್ ಕಲರ್‌ನ ಸಡಿಲವಾದ ಡ್ರೆಸ್ ಧರಿಸಿದ್ದು, ಅದರಲ್ಲಿ ಆಕೆಯ ಬೇಬಿ ಬಂಪ್ ಸ್ಪಷ್ಟವಾಗಿ ಕಂಡುಬಂದಿತ್ತು ಎಂದು ಮುಂಬೈ ಮೀರರ್‌ನ ವರದಿಯಲ್ಲಿದೆ.
ಏಪ್ರಿಲ್ 24 2017ರಲ್ಲಿ ತಮ್ಮ ಎಂಗೆಜ್ಮೇಟ್ ಆನೌನ್ಸ್ ಮಾಡಿದ ಈ ಕಪಲ್ ಮೇ 2 ರಂದು ವಿವಾಹ ಜೀವನಕ್ಕೆ ಕಾಲಿಟ್ಟರು.
2007ರಲ್ಲಿ ರಿಲೀಸ್ ಆದ ಹಿಂದಿ ಸಿನಿಮಾ ಚಕ್ ದೇ ಇಂಡಿಯಾ ಮೂಲಕ ಆಕ್ಟಿಂಗ್ ಕೆರಿಯರ್ ಶುರು ಮಾಡಿದ್ದರು.
ಶಾರುಖ್ ಖಾನ್ ಲೀಡ್ ರೋಲ್‌ನಲ್ಲಿದ್ದ ಈ ಸಿನಿಮಾದಲ್ಲಿ ಅವರ ಪ್ರೀತಿ ಸಬರ್ವಾಲ್ ಎಂಬ ಹುಡುಗಿಯ ಪಾತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.
ನಂತರ ಮಿಲೇ ನಾ ಮಿಲೆ ಹಮ್, ಈರದಾ ಹಾಗೂ ಪಂಜಾಬಿ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ.
ಸದ್ಯಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಜಾಹೀರ್ ಖಾನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ಕೋಚ್ ಆಗಿದ್ದಾರೆ.