ಸಚಿನ್ ಹೆಸರಿನಲ್ಲಿರುವ ಅಪರೂಪದ ವಿಶ್ವದಾಖಲೆಗಳು; ಈ ವರ್ಷ ಒಂದು ದಾಖಲೆ ಬ್ರೇಕ್ ಆಗಬಹುದಷ್ಟೇ..!

Published : Apr 24, 2023, 04:50 PM IST

ಬೆಂಗಳೂರು(ಏ.24): ಮಾಸ್ಟರ್‌ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌, ಇಂದು(ಏ.24,2023) ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದ ಸಚಿನ್ ತೆಂಡುಲ್ಕರ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ ಸಚಿನ್‌ ತೆಂಡುಲ್ಕರ್ ನಿರ್ಮಿಸಿರುವ ಕೆಲವು ಅಪರೂಪದ ವಿಶ್ವದಾಖಲೆಗಳ ಮಾಹಿತಿ ನಿಮ್ಮ ಮುಂದಿಡುತ್ತಿದ್ದು, ಈ ಪೈಕಿ ಒಂದು ರೆಕಾರ್ಡ್‌, ಮುಂದಿನ ವರ್ಷದೊಳಗೆ ಬ್ರೇಕ್ ಆಗುವ ಸಾಧ್ಯತೆಯಿದೆ. 

PREV
18
ಸಚಿನ್ ಹೆಸರಿನಲ್ಲಿರುವ ಅಪರೂಪದ ವಿಶ್ವದಾಖಲೆಗಳು; ಈ ವರ್ಷ ಒಂದು ದಾಖಲೆ ಬ್ರೇಕ್ ಆಗಬಹುದಷ್ಟೇ..!
ಅತಿಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ ಆಟಗಾರ: 200

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಟೆಸ್ಟ್‌ ಕ್ರಿಕೆಟ್‌ನಲ್ಲಿ ಬರೋಬ್ಬರಿ 200 ಟೆಸ್ಟ್‌ ಪಂದ್ಯವನ್ನಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್‌ ಆಂಡರ್‌ಸನ್(179) ಇದ್ದಾರೆ.
 

28
ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್: 15,921

ಟೆಸ್ಟ್‌ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಬಾರಿಸಿದ ಮೊದಲ ಹಾಗೂ ಏಕೈಕ ವಿಶ್ವದಾಖಲೆ ಕೂಡಾ ಸಚಿನ್ ಹೆಸರಿನಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್(13,378) ಇದ್ದು, ಹಾಲಿ ಆಟಗಾರರ ಪೈಕಿ ಜೋ ರೂಟ್(10,948*) ಇದ್ದು, ಸಚಿನ್‌ ಈ ದಾಖಲೆ ಬ್ರೇಕ್ ಆಗುವುದು ಸದ್ಯಕ್ಕಂತೂ ಅನುಮಾನ.
 

38
ಅತಿಹೆಚ್ಚು ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್: 51

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಕೂಡಾ ಸಚಿನ್ ತೆಂಡುಲ್ಕರ್(51)ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್ ಕಾಲೀಸ್(45) ಇದ್ದಾರೆ. ಇನ್ನು ಹಾಲಿ ಆಟಗಾರರ ಪೈಕಿ ಸ್ಟೀವ್ ಸ್ಮಿತ್(30*) ಅವರಿಗಿಂತ ಸಚಿನ್ 21 ಶತಕ ಮುಂದಿದ್ದಾರೆ. 

48
ಅತಿಹೆಚ್ಚು ಏಕದಿನ ಪಂದ್ಯವನ್ನಾಡಿ ಆಟಗಾರ: 463

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯವನ್ನಾಡಿದ(463) ದಾಖಲೆ ಕೂಡಾ ತೆಂಡುಲ್ಕರ್ ಹೆಸರಿನಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಲಂಕಾದ ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ(448) ಸ್ಥಾನದಲ್ಲಿದ್ದಾರೆ. ಸದ್ಯ ಹಾಲಿ ಆಟಗಾರರ ಪೈಕಿ ವಿರಾಟ್ ಕೊಹ್ಲಿ(274*) ಇದ್ದು, ಸಚಿನ್ ಈ ದಾಖಲೆ ಅಳಿಸುವುದು ಸದ್ಯಕ್ಕಂತೂ ಕನಸಿನ ಮಾತು.
 

58
ಅತಿಹೆಚ್ಚು ಏಕದಿನ ರನ್ ಬಾರಿಸಿದ ಬ್ಯಾಟರ್: 18,426

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ತೆಂಡುಲ್ಕರ್(18,426) ಹೆಸರಿನಲ್ಲಿದೆ. ಇನ್ನು ಕುಮಾರ ಸಂಗಕ್ಕರ(14,234) ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿ ಆಟಗಾರರ ಪೈಕಿ ವಿರಾಟ್ ಕೊಹ್ಲಿ(12,898) ಇದ್ದು, ಸಚಿನ್ ದಾಖಲೆ ಬ್ರೇಕ್ ಆಗುವುದು ಸದ್ಯಕ್ಕಂತೂ ಅನುಮಾನ.

68
ಅತಿಹೆಚ್ಚು ಏಕದಿನ ಶತಕ ಬಾರಿಸಿದ ಬ್ಯಾಟರ್: 49

ಸದ್ಯ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ವಿಶ್ವದಾಖಲೆ ಸಚಿನ್ ತೆಂಡುಲ್ಕರ್(49) ಹೆಸರಿನಲ್ಲಿದೆ. ಇನ್ನು ಟೀಂ ಇಂಡಿಯಾ ಹಾಲಿ ರನ್ ಮಷೀನ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 46 ಶತಕ ಸಿಡಿಸಿದ್ದು, ಇನ್ನು 4 ಶತಕ ಬಾರಿಸಿದರೆ, ಸಚಿನ್ ವಿಶ್ವದಾಖಲೆ ನುಚ್ಚು ನೂರಾಗಲಿದೆ. ಈ ವರ್ಷ ಏಕದಿನ ವಿಶ್ವಕಪ್ ತವರಿನಲ್ಲೇ ನಡೆಯುವುದರಿಂದ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸುವ ನಿರೀಕ್ಷೆಯಿದೆ.

78
ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ: 62

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ ವಿಶ್ವದಾಖಲೆ(62) ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಜಯವರ್ಧನೆ(48) ಇದ್ದು, ಹಾಲಿ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಸದ್ಯ 38 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

88
ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ರನ್: 2,278

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ವಿಶ್ವದಾಖಲೆ(2,278) ಕೂಡಾ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್(1,743) ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿ ಆಟಗಾರರ ಪೈಕಿ ಶಕೀಬ್ ಅಲ್ ಹಸನ್‌(1,146) ಇದ್ದು, ಸಚಿನ್ ದಾಖಲೆ ಬ್ರೇಕ್ ಆಗುವುದು ಅನುಮಾನ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories