ಪಿಚ್ ಮಧ್ಯದಲ್ಲೇ.. ರಿತಿಕಾಗೆ ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದ್ದ ರೋಹಿತ್ ಶರ್ಮಾ! ಇಂಟ್ರಿಸ್ಟಿಂಗ್ ಸಂಗತಿ ಬಿಚ್ಚಿಟ್ಟ ಹಿಟ್‌ಮ್ಯಾನ್

Published : Jun 23, 2025, 05:15 PM IST

ಬೆಂಗಳೂರು: ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಲವ್‌ ಸ್ಟೋರಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಜತೆಗೆ ರಿತಿಕಾ ಸಜ್ದೇಗೆ ಸಿನಿಮಾ ರೀತಿಯಲ್ಲಿ ಲವ್ ಪ್ರಪೋಸ್ ಮಾಡಿದ ಬಗ್ಗೆಯೂ ಹೇಳಿದ್ದಾರೆ. 

PREV
18

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಭಾರತ ಕ್ರಿಕೆಟ್‌ ಕಂಡ ದಿಗ್ಗಜ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ದಶಕಗಳ ಬಳಿಕ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿವಲ್ಲಿ ಯಶಸ್ವಿಯಾಗಿದೆ.

28

ರೋಹಿತ್ ಶರ್ಮಾ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

38

ರೋಹಿತ್ ಶರ್ಮಾ ಅವರ ಕ್ರಿಕೆಟ್ ಬದುಕಿನಷ್ಟೇ ವರ್ಣರಂಜಿತವಾಗಿದೆ ಅವರ ಪರ್ಸನಲ್ ಲೈಫ್. ತಾವು ರಿತಿಕಾ ಸಜ್ದೇ ಅವರಿಗೆ ಪ್ರಪೋಸ್‌ ಮಾಡಿದ ಬಗ್ಗೆ ಖಾಸಗಿ ಷೋನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

48

ನಾನು ಎಲ್ಲಿ ಮೊದಲು ಕ್ರಿಕೆಟ್ ಆಡಲು ಶುರು ಮಾಡಿದೆನೋ ಅಲ್ಲಿಗೆ ರಿತಿಕಾಳನ್ನು ಕರೆದುಕೊಂಡು ಹೋದೆ. ರಿತಿಕಾ ನನಗಾಗಿ ಊಟ ತಂದಿದ್ದಳು. ಇಬ್ಬರು ಒಟ್ಟಿಗೆ ಊಟ ಮಾಡಿದೆವು. ಬಳಿಕ ಐಸ್‌ ಕ್ರೀಮ್ ತಿನ್ನೋಕೆ ಹೋಗೋಣ ಬಾ ಅಂದೆ.

58

ನಾವು ಕಾರಿನಲ್ಲಿ ಕುಳಿತುಕೊಂಡು ಮೆರೀನ್‌ ಡ್ರೈವ್‌ ಮೂಲಕ ಹೊರಟೆವು. ದಾದರ್, ಬಾಂದ್ರಾ, ವರ್ಲಿ ಸೇರಿದಂತೆ ಎಲ್ಲಾವನ್ನು ದಾಟಿ ಮುಂದೆ ಹೋದೆವು. ಆಗ ರಿತಿಕಾ ಎಲ್ಲಿ ಐಸ್ ಕ್ರೀಮ್ ಎಂದು ಕೇಳಿದಳು.

68

ಆಗ ನಾನು ಬೋರಿವಾಲಿಯಲ್ಲಿ ಒಂದು ಒಳ್ಳೆಯ ಐಸ್‌ಕ್ರೀಂ ಮಾರುವವರು ಇದ್ದರು. ನಾನು ಮೊದಲು ಅಲ್ಲೇ ಇದ್ದೆ ಹೇಳಿ ಗ್ರೌಂಡ್‌ಗೆ ರಿತಿಕಾಳನ್ನು ಕರೆದುಕೊಂಡು ಹೋದೆ ಎಂದು ರೋಹಿತ್ ಶರ್ಮಾ ಮೆಲುಕು ಹಾಕಿದ್ದಾರೆ.

78

ನಾನು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್‌ನ ಮಧ್ಯದಲ್ಲಿ ಕಾರು ನಿಲ್ಲಿಸಿ, ಪಿಚ್‌ನಲ್ಲಿ ಮಂಡಿಯೂರಿ ರಿತಿಕಾಗೆ ಪ್ರಪೋಸ್ ಮಾಡಿದೆ ಎಂದು ಹಿಟ್‌ಮ್ಯಾನ್ ತಮ್ಮ ಲವ್‌ ಸ್ಟೋರಿ ಬಿಚ್ಚಿಟ್ಟಿದ್ದಾರೆ.

88

ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇ ಆದರ್ಶ ದಾಂಪತ್ಯ ಜೀವನ ಸಾಗಿಸುತ್ತಾ ಬಂದಿದ್ದಾರೆ.

Read more Photos on
click me!

Recommended Stories