ಟೆಸ್ಟ್‌ನ ಎರಡೂ ಇನ್ನಿಂಗಲ್ಲಿ ಶತಕ: ಪಂತ್ ಆರ್ಭಟಕ್ಕೆ ಅಪರೂಪದ ರೆಕಾರ್ಡ್ಸ್‌ ನುಚ್ಚುನೂರ!

Published : Jun 24, 2025, 10:03 AM IST

ಲೀಡ್ಸ್: ಹೆಡಿಂಗ್ಲಿ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸುವ ಮೂಲಕ ರಿಷಭ್ ಪಂತ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಪಂತ್ ಪಾಲಾದ ದಾಖಲೆಗಳು ಯಾವುವು ನೋಡೋಣ ಬನ್ನಿ.

PREV
16

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಲೀಡ್ಸ್‌ನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ಎರಡು ಇನ್ನಿಂಗ್ಸ್‌ನಲ್ಲೂ ಶತಕ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

26

ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಗೆ ಪಾತ್ರರಾಗಿರುವ ಅವರು, ಈ ಸಾಧನೆ ಮಾಡಿದ ವಿಶ್ವದ ಕೇವಲ 2ನೇ ವಿಕೆಟ್ ಕೀಪರ್ ಎನ್ನುವ ಹಿರಿಮೆ ಗಳಿಸಿದ್ದಾರೆ. ಪಂತ್‌ಗೂ ಮುನ್ನ ಜಿಂಬಾಬೈಯ ಆ್ಯಂಡಿ ಫ್ಲವರ್‌ 2001ರಲ್ಲಿ ದ. ಆಫ್ರಿಕಾ ವಿರುದ್ಧ ಕ್ರಮವಾಗಿ 142 ಹಾಗೂ ಔಟಾಗದೆ 199 ರನ್ ಗಳಿಸಿದ್ದರು.

36

ಇನ್ನು, ಪಂತ್‌ ಇಂಗ್ಲೆಂಡ್‌ನಲ್ಲಿ ಒಂದೇ ಟೆಸ್ಟ್ ನಲ್ಲಿ 2 ಶತಕ ಬಾರಿಸಿದ ಮೊದಲ ಭಾರತೀಯ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ.

46

ಅಷ್ಟೇ ಅಲ್ಲ, ತವರಿನಾಚೆ ಪಂದ್ಯವೊಂದರಲ್ಲಿ 2 ಶತಕ ಬಾರಿಸಿದ ಭಾರತದ ಕೇವಲ 5ನೇ ಆಟಗಾರ ಎನಿಸಿದ್ದಾರೆ. ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (2 ಬಾರಿ), ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಉಳಿದ ನಾಲ್ವರು.

56

ಇದೇ ವೇಳೆ, ಟೆಸ್ಟ್‌ವೊಂದರಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯೂ ಪಂತ್‌ ಹೆಸರಿಗೆ ಸೇರಿದೆ. ಈ ಪಂದ್ಯದಲ್ಲಿ ಅವರು 252 (134, 118) ರನ್ ಕಲೆಹಾಕಿದರು.

66

ಪಂತ್‌ಗೂ ಮುನ್ನ 1964ರಲ್ಲಿ ಇಂಗ್ಲೆಂಡ್ ವಿರುದ್ಧ ಬುಧಿ ಕುಂದರೆನ್ 230 ರನ್ ಗಳಿಸಿದ್ದು ಪಂದ್ಯವೊಂದರಲ್ಲಿ ಭಾರತೀಯ ವಿಕೆಟ್ ಕೀಪರ್‌ನಿಂದ ದಾಖಲಾದ ಗರಿಷ್ಠ ರನ್ ಎನಿಸಿತ್ತು.

Read more Photos on
click me!

Recommended Stories