ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು

Naveen Kodase   | Asianet News
Published : Dec 31, 2019, 04:46 PM IST

ಬೆಂಗಳೂರು: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಈ ಬಾರಿ ಭರ್ಜರಿ ಪ್ರದರ್ಶನ ತೋರಿದೆ. ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋದನ್ನು ಬಿಟ್ಟರೆ, ಉಳಿದೆಲ್ಲವೂ ಟೀಂ ಇಂಡಿಯಾ ಪಾಲಿಗೆ ಸ್ಮರಣೀಯ ಸರಣಿಗಳೇ ಆಗಿದ್ದವು.  2019ರಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ರೋಹಿತ್ ಶರ್ಮಾ ಈ ವರ್ಷ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ 2019ರಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

PREV
110
ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು
1. ರೋಹಿತ್ ಶರ್ಮಾ: ಭಾರತ
1. ರೋಹಿತ್ ಶರ್ಮಾ: ಭಾರತ
210
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್’ಮನ್ 2019ರಲ್ಲಿ 28 ಪಂದ್ಯಗಳನ್ನಾಡಿ 57.2ರ ಸರಾಸರಿಯಲ್ಲಿ 1490 ರನ್ ಬಾರಿಸಿದ್ದಾರೆ. ಈ ಮೂಲಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

310
2. ವಿರಾಟ್ ಕೊಹ್ಲಿ: ಭಾರತ
2. ವಿರಾಟ್ ಕೊಹ್ಲಿ: ಭಾರತ
410
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ 2019ರಲ್ಲಿ ರನ್ ಬೇಟೆಯಾಡಿದ್ದಾರೆ. ಈ ವರ್ಷ 26 ಪಂದ್ಯಗಳನ್ನಾಡಿರುವ ಕೊಹ್ಲಿ 59.9ರ ಸರಾಸರಿಯಲ್ಲಿ 1377 ರನ್ ಬಾರಿಸಿದ್ದಾರೆ. ನಾಯಕನ ಜತೆಜತೆಗೆ ಬ್ಯಾಟ್ಸ್‌ಮನ್ ಆಗಿಯೂ ಕೊಹ್ಲಿ ಯಶಸ್ಸು ಕಂಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ಒಟ್ಟಾರೆ ರನ್‌ಗಳಿಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

510
3. ಶಾಯ್ ಹೋಪ್: ವೆಸ್ಟ್ ಇಂಡೀಸ್
3. ಶಾಯ್ ಹೋಪ್: ವೆಸ್ಟ್ ಇಂಡೀಸ್
610
ವೆಸ್ಟ್ ಇಂಡೀಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಶಾಯ್ ಹೋಪ್ 2019ರಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 28 ಪಂದ್ಯಗಳನ್ನಾಡಿರುವ ಹೋಪ್ 61.1ರ ಸರಾಸರಿಯಲ್ಲಿ 1345 ರನ್ ಬಾರಿಸಿದ್ದಾರೆ.

710
4. ಆ್ಯರೋನ್ ಫಿಂಚ್: ಆಸ್ಟ್ರೇಲಿಯಾ
4. ಆ್ಯರೋನ್ ಫಿಂಚ್: ಆಸ್ಟ್ರೇಲಿಯಾ
810
ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಫಿಂಚ್ 23 ಪಂದ್ಯಗಳನ್ನಾಡಿ 51.3ರ ಸರಾಸರಿಯಲ್ಲಿ 1141 ರನ್ ಬಾರಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

910
5. ಬಾಬರ್ ಅಜಂ: ಪಾಕಿಸ್ತಾನ
5. ಬಾಬರ್ ಅಜಂ: ಪಾಕಿಸ್ತಾನ
1010
ಪಾಕಿಸ್ತಾನ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಬಾಬರ್ ಅಜಂ 20 ಪಂದ್ಯಗಳಲ್ಲಿ 60.7ರ ಸರಾಸರಿಯಲ್ಲಿ 1092 ರನ್ ಬಾರಿಸಿದ್ದಾರೆ. ಇದರೊಂದಿಗೆ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಬಾಬರ್ ಗುರುತಿಸಿಕೊಂಡಿದ್ದಾರೆ.

click me!

Recommended Stories