ಆರ್‌ಸಿಬಿ ಹೊಸ ಮಾಲಕಿ ಅನನ್ಯಾ ಬಿರ್ಲಾ ಹುಟ್ಟು ಹಬ್ಬ ದಿನ ಮಹತ್ವದ ಸಂದೇಶ ನೀಡಲಾಗಿದೆ. ಹಣ, ಅಧಿಕಾರಕ್ಕಿಂತ ಉತ್ತಮ ಹೃದಯ ಮನಸ್ಸು ಮುಖ್ಯ ಎಂದಿದ್ದಾರೆ. ಅನನ್ಯಾ ಬಿರ್ಲಾ ಸಂದೇಶ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಐಪಿಎಲ್ ಟೂರ್ನಿ ವೇಳೆ ಆರ್‌ಸಿಬಿ ನೂತನ ಮಾಲಕಿ ಅನನ್ಯಾ ಬಿರ್ಲಾ ಭಾರಿ ಸದ್ದು ಮಾಡಿದ್ದರು. ಪಂದ್ಯದ ವೇಳೆ ಕಾಣಿಸಿಕೊಳ್ಳುವ ಮೂಲಕ ಕ್ರಶ್ ಆಗಿ ಹೊರಹೊಮ್ಮಿದ್ದರು. ಇದೀಗ ಅನನ್ಯಾ ಬಿರ್ಲಾ 32ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶ ಭಾರಿ ಚರ್ಚೆಯಾಗುತ್ತಿದೆ.
26
ಏನಿದು ಸಂದೇಶ
ಶ್ರೀಮಂತ ಕುಟುಂಬದ ಕುಡಿ ಮಾತ್ರವಲ್ಲ, ಹಲವು ಉದ್ಯಮಗಳಲ್ಲಿ ಅನನ್ಯಾ ಬಿರ್ಲಾ ಕೋಟಿ ಕೋಟಿ ಆದಾಯಗಳಿಸುತ್ತಿದ್ದಾರೆ. ಶ್ರೀಮಂತಿಕೆ, ಯಶಸ್ಸು, ಜನಪ್ರಿಯತೆ ಉತ್ತುಂಗದಲ್ಲಿರುವ ಅನನ್ಯಾ ಬಿರ್ಲಾ ಸರಳ ಹಾಗೂ ಪ್ರಬುದ್ಧ ಚಿಂತನೆ ಹರಿಬಿಟ್ಟಿದ್ದಾರೆ. ಅಧಿಕಾರ ಹಾಗೂ ಹಣ ಜೀವನದಲ್ಲಿ ಮುಖ್ಯವಾಗುವ ವಿಷಗಳಲ್ಲ. ನಮ್ಮ ಉತ್ತಮ ಹೃದಯ, ಮನಸ್ಸು, ಮಾನವೀಯತೆ ಎಲ್ಲಕ್ಕಿಂತ ಮಿಗಿಲು ಎಂದು ಅನನ್ಯಾ ಬಿರ್ಲಾ ಹೇಳಿದ್ದಾರೆ.
36
ಶ್ರೀಮಂತ ಉದ್ಯಮಿಯ ಪುತ್ರಿ ಅನನ್ಯಾ ಬಿರ್ಲಾ
ಅನನ್ಯಾ ಬಿರ್ಲಾ ಭಾರತದ ಶ್ರೀಮಂತ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಪುತ್ರಿ. ಸರಿಸುಮಾರು 17 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಂಪತ್ತು ಹೊಂದಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಹಲವು ಉದ್ಯಮ ಸಾಮ್ರಾಜ್ಯವನ್ನು ಅನನ್ಯಾ ಬಿರ್ಲಾ ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಅನನ್ಯಾ ತಮ್ಮ ಹುಟ್ಟುಹಬ್ಬಕ್ಕೆ ಕೋಟ್ ಹಂಚಿಕೊಂಡಿದ್ದಾರೆ.
ಆದಿತ್ಯ ಬಿರ್ಲಾ ಸಮೂಹ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ ಪುತ್ರಿ ಅನನ್ಯಾ ಬಿರ್ಲಾ ಸ್ವಂತ ಮೈಕ್ರೋಫಿನಾನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಈ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾಗಿರುವ ಅನನ್ಯಾ ಬಿರ್ಲಾ ಪಾಪ್ ಸೇರಿದಂತೆ ಹಲವು ಗೀತೆಗಳ ಮೂಲಕ ಅಂತಾರಾಷ್ಟ್ರೀಯ ಮೂಲಕ ಗುರುತಿಸಿಕೊಂಡಿದ್ದಾರೆ.
56
ಅನನ್ಯಾ ಬಿರ್ಲಾಗೆ ಶುಭಾಶಯಗಳ ಮಹಾಪೂರ
ಅನನ್ಯಾ ಬಿರ್ಲಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದತೆ ಹಲವು ತಾಣಗಳಲ್ಲಿ ಅನನ್ಯಾ ಬಿರ್ಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶ್ರೀಮಂತ ಕುಟುಂಬದ ಅನನ್ಯಾ ಬಿರ್ಲಾ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅಪಾರ ಅಬಿಮಾನಿಗಳ ಬಗಳವನ್ನು ಹೊಂದಿದ್ದಾರೆ.
66
ಆರ್‌ಸಿಬಿ ಖರೀದಿಸಿರುವ ಬಿರ್ಲಾ ಗ್ರೂಪ್
ಆರ್‌ಸಿಬಿ ತಂಡವನ್ನು ಈಗಾಗಲೇ ಬಿರ್ಲಾ ಗ್ರೂಪ್ ಖರೀದಿಸಿದೆ. ಬರೋಬ್ಬರಿ 16,700 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡವನ್ನು ಬಿರ್ಲಾ ಗ್ರೂಪ್ ಖರೀದಿಸಿದೆ. ಅನನ್ಯಾ ಬಿರ್ಲಾ ಆರ್‌ಸಿಬಿ ಸಿಇಒ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆರ್‌ಸಿಬಿ ಮ್ಯಾನೇಜ್ಮೆಂಟ್, ಹರಾಜು, ಖರೀದಿ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಅನನ್ಯಾ ಬಿರ್ಲಾ ತೆಗೆದುಕೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.