ಆರ್‌ಸಿಬಿ ಕ್ರಿಕೆಟಿಗನ ಹೊಸ ಇನ್ನಿಂಗ್ಸ್, ಬಹುಕಾಲದ ಗೆಳತಿ ಕೈ ಹಿಡಿದ ಸ್ಫೋಟಕ ಬ್ಯಾಟರ್

Published : Oct 10, 2026, 12:02 PM IST

ಆರ್‌ಸಿಬಿ ಕ್ರಿಕೆಟಿಗ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಫೋಟೋಗಳು ಹೊರಬಂದಿದೆ. ಜಿತೇಶ್ ಶರ್ಮಾ ಸೇರಿದಂತೆ ಹಲವು ಆರ್‌ಸಿಬಿ ಕ್ರಿಕೆಟಿಗರು ಶುಭಕೋರಿದ್ದಾರೆ.

PREV
15
ಆರ್‌ಸಿಬಿ ಸ್ಫೋಟಕ ಬ್ಯಾಟರ್ ಮದುವೆ

ಆರ್‌ಸಿಬಿ ಸ್ಫೋಟಕ ಬ್ಯಾಟ್ಸ್‌ಮನ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು, 2025ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಒಲಿವಿಯಾ ಜೊತೆ ಮದುವೆಯಾಗಿದ್ದಾರೆ. ಅದ್ಧೂರಿ ಮದುವೆ ಸಮಾರಂಭದ ಫೋಟೋ, ವಿಡಿಯೋಗಳು ಹೊರಬಂದಿದೆ. ಇದೀಗ ಕ್ರಿಕೆಟಿಗರು ಸ್ಫೋಟಕ ಬ್ಯಾಟರ್‌ಗೆ ಶುಭಕೋರಿದ್ದಾರೆ.

25
ಕೊನೆ ಕ್ಷಣದಲ್ಲಿ ಪ್ಲಾನ್ ಬದಲಿಸಿದ ಲಿವಿಂಗ್‌ಸ್ಟೋನ್

ಲಿಯಾಮ್ ಲಿವಿಂಗ್‌ಸ್ಟೋನ್ ಮದುವೆ ಪ್ಲಾನ್ ಕೊನೆಯ ಕ್ಷಣದಲ್ಲಿ ಹಲವು ಬದಲಾವಣೆ ಕಂಡಿದೆ. ಹವಾಮಾನ ವೈಪರಿತ್ಯದಿಂದ ಲಿಯಾಮ್ ಲಿವಿಂಗ್‌ಸ್ಟೋನ್ ಮದುವೆ ಕೊನೆ ಕ್ಷಣದಲ್ಲಿ ಸ್ಥಳ, ದಿನಾಂಕಗಳನ್ನು ಬದಲಿಸಲಾಗಿತ್ತು. ಸ್ಪೇನ್‌ನ ಡಿಯಾ ಮಲ್ಲೋರ್ಕಾದಲ್ಲಿ ಮದುವೆಯಾಗಿದ್ದಾರೆ. ಲಿಯಾಮ್ ಹಾಗೂ ಒಲಿವಿಯಾ ಪ್ಲಾನ್ ಪ್ರಕಾರ ಮದುವೆ ಸಮಾರಂಭ ಆಯೋಜಿಸಲು ಸಾಧ್ಯವಾಗಿಲ್ಲ.

35
ಮದುವೆ ಸ್ಥಳ ಬದಲಿಸಿದ ಕಾರಣ ಸಮಸ್ಯೆ

ಹವಾಮಾನದಲ್ಲಿ ಆದ ಭಾರಿ ಬದಲಾವಣೆಯಿಂದ ಮದುವೆ ಸ್ಥಳವನ್ನು ಅನಿವಾರ್ಯವಾಗಿ ಬದಲಿಸಬೇಕಾಯಿತು. ಹೀಗಾಗಿ ಆಪ್ತರು ಸೇರಿದಂತೆ ಹಲವರಿಗೆ ತೊಂದರೆಯಾಗಿದೆ. ಮದುವೆಗೆ ಹಾಜರಾಗಬೇಕಿದ್ದ ಹಲವರಿಗೆ ಸಾಧ್ಯವಾಗಲಿಲ್ಲ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಹೇಳಿದ್ದಾರೆ. ಆಪ್ತರು, ಕುಟುಂಬಸ್ಥರು ಸೇರಿದಂತೆ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಬಾಳಸಂಗಾತಿಯನ್ನು ವರಿಸಿದ್ದಾರೆ.

45
ಲಿಯಾಮ್ ಆರ್‌ಸಿಬಿ ಜರ್ನಿ

ಇಂಗ್ಲೆಂಡ್ ಕ್ರಿಕೆಟಿಗ ಲಿವಿಂಗ್‌ಸ್ಟೋನ್ ಮದುವೆಯಲ್ಲಿ ಕೆಲ ಗೊಂದಲ ನಿರ್ಮಾಣವಾದರೂ ಎಲ್ಲರ ಪ್ರೀತಿಗೆ ಧನ್ಯವಾದ ಎಂದು ವಿಲಿಂಗ್‌ಸ್ಟೋನ್ ಹೇಳಿದ್ದಾರೆ. 2025ರಲ್ಲಿ ಆರ್‌ಸಿಬಿ ಸೇರಿಕೊಂಡ ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರಿಸಲು ವಿಫಲರಾದರು. ನಿರೀಕ್ಷಿತ ಅವಕಾಶ ಹಾಗೂ ಪ್ರದರ್ಶನ ಮೂಡಿಬರಲಿಲ್ಲ. 10 ಪಂದ್ಯಗಳಿಂದ ಲಿಯಾಮ್ ಲಿವಿಂಗ್‌ಸ್ಟೋನ್ 112 ರನ್ ಸಿಡಿಸಿದ್ದಾರೆ. ಜೊತೆಗೆ 2 ವಿಕೆಟ್ ಕಬಳಿಸಿದ್ದಾರೆ.

55
ಅಡೆ ತಡೆ ನಡುವೆ ಬಾಳಸಂಗಾತಿ ಕೈಗಿಡಿದ ಲಿವಿಂಗ್‌ಸ್ಟೋನ್

2026ರಲ್ಲಿ ಲಿವಿಂಗ್‌ಸ್ಟೋನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದರು. ಆದರೆ ಕೇವಲ ಎರಡು ಇನ್ನಿಂಗ್ಸ್ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ 15 ರನ್ ಸಿಡಿಸಿ ನಿರಾಸೆ ಮೂಡಿಸಿದ್ದಾರೆ. ಇದೀಗ ಲಿಯಾಮ್ ಹೊಸ ಬದುಕು ಆರಂಭಿಸಿದ್ದಾರೆ. ಹಲವು ಅಡೆತಡೆಗಳ ನಡುವೆ ಲಿಯಾಮ್ ಬಾಳ ಸಂಗಾತಿ ಕೈಹಿಡಿದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories