ಗುಜರಾತ್‌ನಲ್ಲಿ ಜನಿಸಿ ನ್ಯೂಜಿಲೆಂಡ್ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಆಗಿ ಮಿಂಚಿದ ಜೀತ್ ರಾವಲ್ ತಮ್ಮ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 24 ಟೆಸ್ಟ್ ಪಂದ್ಯಗಳನ್ನು ಆಡಿರುವ ಇವರು, ಪ್ರಸ್ತುತ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿಜೀವನ ಮುಂದುವರಿಸಿದ್ದಾರೆ.
ಈ ಸ್ಟೋರಿ ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟಿಗನ ಬಗ್ಗೆ ಹೇಳುತ್ತದೆ. ಗುಜರಾತ್‌ನಲ್ಲಿ ಜನಿಸಿದ್ದ ಇವರು ಮುಂದೆ ಒಂದು ದಿನ ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟರ್ ಆಗಿ ಆಡಿದರು. ಪ್ರಸ್ತುತ ತಮ್ಮ 38ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಇನ್ನೊಂದು ವಿಶೇಷ ಅಂದ್ರೆ ಪಾರ್ಥಿವ್ ಪಟೇಲ್ ಜೊತೆ ನಂಟು ಆಗಿದ್ದಾರೆ.
26
ಜೀತ್ ರಾವಲ್ ಯಾರು?
ಹೆಸರು ಜೀತ್ ರಾವಲ್. ನ್ಯೂಜಿಲೆಂಡ್‌ನ ಟೆಸ್ಟ್ ಪಂದ್ಯಗಳ ಆರಂಭಿಕ ಬ್ಯಾಟರ್. 2016 ಮತ್ತು 2020ರ ನಡುವೆ ನ್ಯೂಜಿಲೆಂಡ್ ಪರ 24 ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ. ವಿಶೇಷ ಅಂದ್ರೆ 10 ಸಾವಿರಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನ ಆಡಿದ್ದಾರೆ. ನಿವೃತ್ತರಾದ ಬಳಿಕ ತಮ್ಮ ಚಾರ್ಟರ್ಡ್ ಅಕೌಂಟ್‌ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ.
36
ರಾವಲ್ ಹುಟ್ಟಿದ್ದು ಎಲ್ಲಿ?
ರಾವಲ್ ಸೆಪ್ಟೆಂಬರ್ 22, 1988ರಲ್ಲಿ ಗುಜರಾತ್‌ನಲ್ಲಿ ಜನಿಸಿದರು. ಇವರು ಚಿಕ್ಕವರಿದ್ದಾಗ ಇವರ ಕುಟುಂಬ ನ್ಯೂಜಿಲೆಂಡ್‌ಗೆ ಶಿಫ್ಟ್ ಆಗಿತ್ತು. 2008ರಿಂದ ನ್ಯೂಜಿಲೆಂಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದರ್ಬಾರ್ ನಡೆಸಿದರು. ಒಟ್ಟು 18 ವರ್ಷಗಳ ಕಾಲ ಗುರುತಿಸಿಕೊಂಡರು. ಇನ್ನೊಂದು ವಿಶೇಷ ಅಂದರೆ ಇವರು ಟೀಂ ಇಂಡಿಯಾದ ಮಾಜಿ ಸ್ಟಾರ್ ಪಾರ್ಥಿವ್ ಪಟೇಲ್ ಅವರ ಕ್ಲಾಸ್ ಮೇಟ್ ಆಗಿದ್ದರು.
ಆರಂಭದಲ್ಲಿ ನ್ಯೂಜಿಲೆಂಡ್ ದೇಶಿಯ ಟೂರ್ನಿಗಳಲ್ಲಿ ಮಿಂಚಿದರು. ಆಕ್ಲೆಂಡ್ ಪರ ಆಡುತ್ತಿದ್ದ ಇವರು, 292 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದರು. 285 ಇನ್ನಿಂಗ್ಸ್‌ನಲ್ಲಿ 10127 ರನ್‌ಗಳಿಸಿದರು. ಇದರಲ್ಲಿ 23 ಶತಕಗಳೂ ಕೂಡ ಸೇರಿವೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 24 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ, 7 ಅರ್ಧ ಶತಕ ಸೇರಿ 1143 ರನ್‌ಗಳನ್ನ ಬಾರಿಸಿದ್ದಾರೆ. ಅವರು ಮೊದಲ ಟೆಸ್ಟ್ ಶತಕಕ್ಕಾಗಿ 28 ಇನ್ನಿಂಗ್ಸ್‌ಗಳು ಕಾದಿದ್ದಾರೆ.
56
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್
ಇನ್ನೊಂದು ವಿಶೇಷ ಅಂದರೆ ಅವರು 2021ರಲ್ಲಿ ನ್ಯೂಜಿಲೆಂಡ್ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಆಗಿತ್ತು. ಈ ತಂಡದಲ್ಲಿ ಅವರೂ ಇದ್ದರು. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಅವರಿಂದ ಯಾವುದೇ ಶತಕಗಳು ಬಾರದಿದ್ದರೂ ಕೇನ್ ವಿಲಿಯಮ್ಸನ್, ರಾಸ್ ಟೇಲರ್‌ನಂತಹ ಅನುಭವಿ ಆಟಗಾರರು ತಮ್ಮನ್ನು ಬೆಂಬಲಿಸಿದ್ದರು ಎಂದು ರಾವಲ್ ಹೇಳಿಕೊಂಡಿದ್ದಾರೆ.
66
ಆಡಿಟಿಂಗ್ ಕಂಪನಿಯಲ್ಲಿ ಕೆಲಸ
ಇನ್ನು ಮೈದಾನದ ಹೊರಗೆ ರಾವಲ್ ಆಡಿಟಿಂಗ್ ಕಂಪನಿ ಒಂದಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಕೋಚ್ ಆಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲಿನ ಮಾಯಾ ಮತ್ತು ಸಮೋವಾ ತಂಡಗಳಿಗೆ ಕೋಚ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.