BCCI ಕೇಂದ್ರ ಗುತ್ತಿಗೆ ಪ್ರಕಟ, ಜಡೇಜಾಗೆ ಜಾಕ್‌ಪಾಟ್: 26 ಆಟಗಾರರಲ್ಲಿ ಯಾರಿಗೆ ಎಷ್ಟು ಸಂಬಳ..?
First Published | Mar 27, 2023, 1:21 PM ISTಮುಂಬೈ(ಜ.27): ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ ಇದೀಗ 2022-23ನೇ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಆಲ್ರೌಂಡರ್ ರವೀಂದ್ರ ಜಡೇಜಾ A+ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಬಿಸಿಸಿಐ ಆಟಗಾರರನಿಗೆ 4 ವಿಧದಲ್ಲಿ ಸಂಭಾವನೆ ನೀಡುತ್ತಾ ಬಂದಿದೆ. A+ ದರ್ಜೆಯವರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದರೆ, A ಕೆಟೆಗೆರೆ ಪಡೆದ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು B ದರ್ಜೆಗೆ 3 ಕೋಟಿ ರುಪಾಯಿ ಹಾಗೂ C ದರ್ಜೆಗೆ ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.
ಈ ಬಾರಿ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆದ ಆಟಗಾರರರು ಯಾರ್ಯಾರು? ಯಾರಿಗೆಲ್ಲ ಸಂಭಾವನೆಯಲ್ಲಿ ಬಡ್ತಿ ಸಿಕ್ಕಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.