ಧೋನಿ ಹೇಳಿದ ಮುತ್ತಿನಂತ ಮಾತನ್ನು ನೆನಪಿಸಿಕೊಂಡ ರವೀಂದ್ರ ಜಡೇಜಾ..!

Suvarna News   | Asianet News
Published : Dec 03, 2020, 03:53 PM IST

ಕ್ಯಾನ್‌ಬೆರ್ರಾ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 66 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಹಾರ್ದಿಕ್ ಪಾಂಡ್ಯ ಜತೆ ಉಪಯುಕ್ತ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ತಮ್ಮ ಈ ಜತೆಯಾಟ ಶ್ರೇಯಸ್ಸನ್ನು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದಾರೆ. ಅಲ್ಲದೇ ಧೋನಿ ಹೇಳಿದ ಮಾತೊಂದನ್ನು ನೆನಪಿಸಿಕೊಂಡಿದ್ದಾರೆ.   

PREV
110
ಧೋನಿ ಹೇಳಿದ ಮುತ್ತಿನಂತ ಮಾತನ್ನು ನೆನಪಿಸಿಕೊಂಡ ರವೀಂದ್ರ ಜಡೇಜಾ..!

ಅಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ 50 ಎಸೆತಗಳಲ್ಲಿ ಅಜೇಯ 66 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

210

ಒಂದು ಹಂತದಲ್ಲಿ 152 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಸರೆಯಾದರು.

310

6ನೇ ವಿಕೆಟ್‌ಗೆ ಈ ಜೋಡಿ ಮುರಿಯದ 150 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

410

ಮತ್ತೊಂದು ತುದಿಯಲ್ಲಿ ಜಡೇಜಾಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ 76 ಎಸೆತಗಳಲ್ಲಿ ಅಜೇಯ 92 ರನ್ ಚಚ್ಚಿದರು. ಅಂದಹಾಗೆ ಇದು ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವಯುಕ್ತಿಕ ಮೊತ್ತ ಕೂಡಾ ಹೌದು.

510

ಪಂದ್ಯ ಮುಕ್ತಾಯದ ಬಳಿಕ ಈ ಮ್ಯಾರಥಾನ್ ಜೊತೆಯಾಟದ ಸೀಕ್ರೇಟ್‌ ಬಗ್ಗೆ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ತುಟಿಬಿಚ್ಚಿದ್ದು, ಜತೆಯಾಟದ ಕ್ರೆಡಿಟ್‌ ಧೋನಿಗೆ ಅರ್ಪಿಸಿದ್ದಾರೆ. 

610

ಧೋನಿ ಬಹಳ ಕಾಲದಿಂದ ಟೀಂ ಇಂಡಿಯಾ ಹಾಗೂ ಚೆನ್ನೈ ತಂಡದ ಪರ ಆಡಿದ್ದಾರೆ. ಅವರು ಹೇಳಿಕೊಟ್ಟ ಯಶಸ್ಸಿನ ಮಂತ್ರವನ್ನು ಜಡೇಜಾ ರಿವೀಲ್ ಮಾಡಿದ್ದಾರೆ.

710

ಉತ್ತಮ ಜತೆಯಾಟ ನಿಭಾಯಿಸಿದರೆ ಕೊನೆಯಲ್ಲಿ ದೊಡ್ಡ ಹೊಡೆತವನ್ನು ಆಡಬಹುದು ಎಂದು ಧೋನಿ ಹೇಳಿದ್ದರು. ಅದರಂತೆ ನಾವು ಜತೆಯಾಟ ನಿಭಾಯಿಸಿದೆವು ಎಂದು ಹೇಳಿದ್ದಾರೆ.

810

ಕೊನೆಯವರೆಗೆ ಬ್ಯಾಟಿಂಗ್ ನಡೆಸಿದರೆ ಕೊನೆಯ 5 ಓವರ್‌ಗಳಲ್ಲಿ ಸಾಕಷ್ಟು ರನ್ ಕಲೆಹಾಕಬಹುದು ಎನ್ನುವುದು ಈ ಪಂದ್ಯದಲ್ಲಿ ಸಾಭೀತಾಯಿತು.

910

ಒಂದು ಹಂತದಲ್ಲಿ ಟೀಂ ಇಂಡಿಯಾ 260 ರನ್‌ ಗಳಿಸುವುದು ಕಷ್ಟ ಎನ್ನುವಂತಿತ್ತು. ಕೊನೆಗೆ ಪಾಂಡ್ಯ-ಜಡೇಜಾ ಜೋಡಿ 302 ಬಾರಿಸಿ ಸೈ ಎನಿಸಿಕೊಂಡಿತು.

1010

ಕ್ಯಾನ್‌ಬೆರ್ರಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 13 ರನ್‌ಗಳ ಜಯ ಸಾಧಿಸಿತು.

click me!

Recommended Stories